)
- ಮಾಯಕೊಂಡ ಬಳಿ ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ಕಾರಣ
- - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ-ಚಿತ್ರದುರ್ಗ ನೇರ ರೈಲ್ವೆ ಮಾರ್ಗವಾಗಿ ಬೆಂಗಳೂರು ಹೊಸ ಮಾರ್ಗದಲ್ಲಿ ಅಂಡರ್ ಬ್ರಿಡ್ಜ್ ಕಾಮಗಾರಿ ಹಿನ್ನೆಲೆಯಲ್ಲಿ ವಂದೇ ಭಾರತ್ ಸೇರಿದಂತೆ ನಾಲ್ಕು ರೈಲುಗಳು ಒಂದೇ ಕಡೆ ನಿಂತಲ್ಲೇ 4 ಗಂಟೆಗೂ ಹೆಚ್ಚು ಕಾಲ ನಿಂತ ಘಟನೆ ಮಂಗಳವಾರ ನಡೆದಿದ್ದು, ತಾಲೂಕಿನ ಮಾಯಕೊಂಡ, ಕೊಡಗನೂರು, ಸಾಸಲು ಹಾಗೂ ಚಿಕ್ಕಮಗಳೂರು ಜಿಲ್ಲೆ ಶಿವನಿ ನಿಲ್ದಾಣದಲ್ಲಿ ಒಂದೊಂದು ರೈಲುಗಳು ನಿಂತಿದ್ದವು. ಇದರಿಂದ ಪ್ರಯಾಣಿಕರು ತೀವ್ರ ಪರದಾಡಬೇಕಾಯಿತು.
ವಂದೇ ಭಾರತ್ ರೈಲು ಸಂಜೆ 5.30ಕ್ಕೆ ಮಾಯಕೊಂಡ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ಮಾರ್ಗ ಮುಕ್ತವಾದ ಬಗ್ಗೆ ಸೂಚನೆ ಸಿಗದ ಹಿನ್ನೆಲೆ ರೈಲ್ವೆ ಅಧಿಕಾರಿಗಳು ರೈಲು ಸಾಗಲು ಹಸಿರು ನಿಶಾನೆ ತೋರಲಿಲ್ಲ. ಇದರಿಂದಾಗಿ ಮುಂದಿನ ಊರಿಗೆ ಹೋಗುವವರು, ದೂರದ ಊರುಗಳಿಗೆ ಪ್ರಯಾಣಿಸಬೇಕಾದ ಪ್ರಯಾಣಿಕರ ಗೋಳು ಹೇಳತೀರದಾಗಿತ್ತು. ಯಾರೋ ತಮ್ಮ ಕುಟುಂಬ ಸದಸ್ಯರ ಅನಾರೋಗ್ಯದ ಹಿನ್ನೆಲೆ, ಮತ್ತೆ ಯಾರೋ ಅಂತ್ಯಕ್ರಿಯೆಗೆ, ಮತ್ತೆ ಯಾರೋ ಶುಭ ಕಾರ್ಯಕ್ಕೆ ಹೋಗಬೇಕಾಗಿದ್ದವರು ತಾವು ಕುಳಿತ ರೈಲಿನ ಸೀಟುಗಳಲ್ಲೇ ಚಡಪಡಿಸುವಂತಾಗಿತ್ತು. ರಾತ್ರಿ 11.18ಕ್ಕೆ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದರಿಂದ ನಾಲ್ಕೈದು ಗಂಟೆ ತಡವಾಗಿ ರೈಲುಗಳ ಸಂಚಾರ ಮುಂದುವರಿಯಿತು. ರಾತ್ರಿ 10.30ಕ್ಕೆ ಬೆಳಗಾವಿ ತಲುಬೇಕಿದ್ದ ವಂದೇ ಭಾರತ್ ರೈಲು ಮಧ್ಯರಾತ್ರಿ ಬೆಳ ಗಾವಿ ತಲುಪಬೇಕಾಯಿತು. ಉಳಿದ ಮೂರು ರೈಲುಗಳ ಸ್ಥಿತಿಯೂ ಇದೇ ಆಗಿತ್ತು.
(ಸಾಂದರ್ಭಿಕ ಚಿತ್ರ)