ಸುಸ್ಥಿರ ಅಭಿವೃದ್ಧಿಗೆ ಸಮರ್ಪಕ ಯೋಜನೆ ಜಾರಿಯಾಗಲಿ: ಪ್ರೊ.ಎಂ. ಖಾನ್‌

KannadaprabhaNewsNetwork |  
Published : Oct 30, 2025, 02:00 AM IST
29ಡಿಡಬ್ಲೂಡಿ1ಪ್ರೊ.ಎಂ. ಖಾನ್‌  | Kannada Prabha

ಸಾರಾಂಶ

ದೇಶದ ಬಡತನ, ಸುಸ್ಥಿರ ಪರಿಸರ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಅವಶ್ಯಕತೆ ಇದೆ ಎಂದು ಕರ್ನಾಟಕ ವಿವಿ ಕುಲಪತಿ ಪ್ರೊ.ಎಂ. ಖಾನ್‌ ಹೇಳಿದರು.

ಧಾರವಾಡ: ಸುಸ್ಥಿರ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದ ಸಾರ್ವಜನಿಕ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಬೇಕು. ಇಂತಹ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಅವಶ್ಯಕತೆ ಇದೆ ಎಂದು ಕರ್ನಾಟಕ ವಿವಿ ಕುಲಪತಿ ಪ್ರೊ.ಎಂ. ಖಾನ್‌ ಹೇಳಿದರು.

ಇಂಡಿಯನ್ ಇನ್ಸಿಟಿಟ್ಯೂಟ್‌ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಲೋಕಲ್ ಬ್ರ್ಯಾಂಚ್ ಮತ್ತು ಕರ್ನಾಟಕ ವಿವಿಯ ಅರ್ಥಶಾಸ್ತ್ರ ಅಧ್ಯಯನ ವಿಭಾಗದಲ್ಲಿ ''''''''ಸಾರ್ವಜನಿಕ ಯೋಜನೆ ಮತ್ತು ಇತ್ತೀಚಿನ ಪ್ರವೃತ್ತಿಗಳು'''''''' ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಂದು ಯೋಜನೆ ಜಾರಿಗೊಳಿಸುವಾಗ ಪೂರ್ವ ಯೋಜಿತವಾಗಿ ಸಾಮಾಜಿಕ ಹಿತದ ಉದ್ದೇಶ ಹೊಂದಿರುತ್ತದೆ. ದೇಶದ ಬಡತನ, ಸುಸ್ಥಿರ ಪರಿಸರ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಅವಶ್ಯಕತೆ ಇದೆ ಎಂದರು. ನಿವೃತ್ತ ಕೆ.ಎ.ಎಸ್. ಅಧಿಕಾರಿ ಡಾ. ವಿಜಯಕುಮಾರ ತೋರಗಲ್ಲ ಮಾತನಾಡಿ, ಸರ್ಕಾರಗಳು ಪ್ರಸ್ತುತ ಸಮಸ್ಯೆಗಳನ್ನು ಆಧರಿಸಿ ಅಭಿವೃದ್ಧಿಗೆ ಪೂರಕವಾಗಿ ದೀರ್ಘಾವಧಿ ಮತ್ತು ಅಲ್ಪಾವಧಿ ಅನೇಕ ಯೋಜನೆಗಳನ್ನು ರೂಪಿಸುತ್ತವೆ. ಸಂವಿಧಾನದ ಆಶಯದ ಅನುಗುಣವಾಗಿ ಸಾರ್ವಜನಿಕ ಹಿತರಕ್ಷಣೆ ಮತ್ತು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದರು.

ಪ್ರಸ್ತುತ ನೀತಿ ಆಯೋಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸಿದೆ. ತಂತ್ರಜ್ಞಾನ ಸಾರ್ವಜನಿಕ ಜೀವನದಲ್ಲಿ ಮೇಲೆ ಹೆಚ್ಚು ಪ್ರಭಾವ ಬೀರಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ. ಬಿ.ಎಚ್. ನಾಗೂರ, ಸ್ವಾತಂತ್ರ್ಯ ಬಂದ ನಂತರ ಭಾರತದಲ್ಲಿ ಸರ್ಕಾರಗಳು ಆರ್ಥಿಕ-ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುತ್ತಿವೆ. ನಂತರ ಕೃಷಿ ಮತ್ತು ಉದ್ಯಮ ವಲಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಯಿತು.1950ರ ನಂತರ ಸಮಗ್ರ ಭಾರತದ ಅಭಿವೃದ್ಧಿಗೆ ಒತ್ತು ನೀಡಲಾಯಿತು. ಪ್ರಸ್ತುತ ಎಲ್ಲ ವಲಯಗಳಲ್ಲಿ ಮಹಿಳಾ ಮಾನವ ಸಂಪನ್ಮೂಲಕ್ಕೆ ಹೆಚ್ಚು ಅವಕಾಶವಿದೆ. ಜೊತೆಗೆ ಯುವ ಸಮುದಾಯಕ್ಕೆ ಕೌಶಲ್ಯ ವೃತ್ತಿಪರ ತರಬೇತಿ ನೀಡುವ ಅವಶ್ಯಕತೆ ಇದೆ ಎಂದರು.

ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ನಾಗೂರ, ಡಾ. ಜಗತಾಪ, ಡಾ. ಎನ್.ಎಸ್. ಮುಗದೂರ, ಪ್ರೊ. ಎಸ್.ಎಸ್. ಪಟಗುಂಡಿ, ಡಾ.‌ ಮನೋಜ ಡೋಳ್ಳಿ, ಡಾ.ಬಸಪ್ಪ ಅಥಣಿ ಮತ್ತಿತರರು ಇದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು