ಕಂಪ್ಲಿ: ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಶನಿವಾರ ಆಚರಿಸಲಾಯಿತು.
ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಣದ ಜತೆಗೆ ಶಿಸ್ತು, ಸಂಸ್ಕಾರ, ಮಾನವೀಯತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯಂತಹ ಮೌಲ್ಯ ಬೆಳೆಸುವಲ್ಲಿ ಶಿಕ್ಷಕರು ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಭಾರ ಉಪತಹಸೀಲ್ದಾರ್ ಎಸ್.ಡಿ.ರಮೇಶ್, ತಾಲೂಕು ಭೂಮಾಪಕ ಅನಿಲ್ ಆ್ಯಂತೋನಿ, ಆಹಾರ ನಿರೀಕ್ಷಕ ಬಿ.ವಿರೂಪಾಕ್ಷಗೌಡ, ಆರ್‌ಐ ಎಸ್. ಸುರೇಶ್, ಎಎಒ ಗಿರೀಶ್‌ಬಾಬು, ಮಹಾಂತೇಶ್, ತಾಲೂಕು ಸಿಬ್ಬಂದಿ ಮೌನೇಶ್, ಭೂಮಾಪಕ ಮೇಲ್ವಿಚಾರಕಿ ಶಾಂತಮ್ಮ ಸೇರಿದಂತೆ ತಹಸೀಲ್ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.