ಮಡಿವಾಳ ಮಾಚಿದೇವರ ತತ್ವ-ಸಂದೇಶ ಅಳವಡಿಸಿಕೊಳ್ಳಿ

KannadaprabhaNewsNetwork | Published : Mar 6, 2025 12:36 AM

ಸಾರಾಂಶ

ಮಡಿವಾಳ ಮಾಚಿದೇವ ಕನ್ನಡದ ಶಿವಶರಣರಲ್ಲಿಯೆ ಅತ್ಯಂತ ಹಿರಿಯರು. ಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟುವಲ್ಲಿ ಅವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ, ಸ್ವಾಗತಿಸುವ ಕೆಲಸ ಅವರದಾಗಿತ್ತು.

ಕೊಪ್ಪಳ:

ಮಡಿವಾಳ ಸಮಾಜವು ಉನ್ನತ ಮಟ್ಟದ ಸ್ಥಾನ ತಲುಪಬೇಕಾದರೆ ಮಡಿವಾಳ ಮಾಚಿದೇವರು ಹಾಕಿ ಕೊಟ್ಟಿರುವ ತತ್ವ-ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಬುಧವಾರ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಡಿವಾಳ ಮಾಚಿದೇವ ಕನ್ನಡದ ಶಿವಶರಣರಲ್ಲಿಯೆ ಅತ್ಯಂತ ಹಿರಿಯರು. ಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟುವಲ್ಲಿ ಅವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ, ಸ್ವಾಗತಿಸುವ ಕೆಲಸ ಅವರದಾಗಿತ್ತು. ಅವರು ಕೇವಲ ಬಟ್ಟೆಯ ಮೇಲಿನ ಮೈಲಿಗೆ ತೋಳೆಯದೇ, ಅದ್ಭುತ ವಚನಗಳ ಮೂಲಕ ಮನಸ್ಸಿಗೆ ಅಂಟಿಕೊಂಡಿರುವ ಕೋಳೆ ತೋಳೆಯು ಕಾಯಕ ಮಾಡಿದರು ಎಂದರು.ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಸಂಸ್ಥಾನ ಮಠದ ಜಗದ್ಗುರು ಡಾ. ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ನವೀನಕುಮಾರ ಬಿ., ಮಡಿವಾಳ ಮಾಚಿದೇವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಡಿವಾಳ ಸಮಾಜದ ಪ್ರಮುಖರಾದ ಯೋಗೇಶ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರಪಾಷಾ ಪಲ್ಟನ್, ನಗರಸಭೆ ಸದಸ್ಯರಾದ ಅಜೀಮುದ್ದಿನ್ ಅತ್ತಾರ್, ಅರುಣ್ ಶೆಟ್ಟಿ, ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ, ಉದ್ಯಮಿ ಸೋಮಶೇಖರ್ ಹಿಟ್ನಾಳ್, ಸಲೀಂ ಅಳವಂಡಿ, ಮುಖಂಡರಾದ ಕೃಷ್ಣ ಎಸ್., ಎಂ.ಕೆ. ಹನುಮಂತಪ್ಪ, ಶಂಕ್ರಪ್ಪ ಹಾಲ್ಕೆರಿ, ರಾಮಣ್ಣ ಮಡಿವಾಳರ, ಬಸವರಾಜ ಬೆಳಗಲಿ, ದುರಗೇಶ ಮಡಿವಾಳರ, ಹುಲಗಪ್ಪ ಜಿ. ಮಡಿವಾಳರ, ಡಾ. ಸಂಗಮೇಶ ಕಲಹಾಳ, ಮಂಜುಳಾ ಮಡಿವಾಳರ, ಕನಕಪ್ಪ ಮಡಿವಾಳರ, ಶಂಕ್ರಪ್ಪ ಮಡಿವಾಳರ, ಯಮನೂರಪ್ಪ ಮಡಿವಾಳರ ಉಪಸ್ಥಿತರಿದ್ದರು.

ಅದ್ಧೂರಿ ಮೇರವಣಿಗೆ:

ಮಾಚಿದೇವ ಭಾವಚಿತ್ರದ ಮೆರವಣಿಗೆಗೆ ತಹಸೀಲ್ದಾರ್‌ ವಿಠ್ಠಲ್ ಚೌಗಲಾ ಚಾಲನೆ ನೀಡಿದರು. ಮೆರವಣಿಗೆಯು ನಗರದ ಕೋಟೆ ರಸ್ತೆಯ ಶ್ರೀಅಕ್ಕಮಹಾದೇವಿ ದೇವಾಲಯದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಅಶೋಕ ಸರ್ಕಲ್ ಬಳಿಯ ಸಾಹಿತ್ಯ ಭವನದ ವರೆಗೆ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹೊತ್ತು ಸಾಗಿದರು.

Share this article