ಅಕ್ರಮ ತಡೆಯಲು ಅದಿರು, ಕಲ್ಲು, ಮರಳು ಲಾರಿಗಿನ್ನು ಜಿಪಿಎಸ್‌ ಅಳವಡಿಕೆ: ಸಚಿವ ಎಸ್ಸೆಸ್ಸೆಂ

KannadaprabhaNewsNetwork |  
Published : Sep 19, 2024, 01:46 AM IST
17ಕೆಡಿವಿಜಿ13-ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿದರು. | Kannada Prabha

ಸಾರಾಂಶ

ಅಕ್ರಮ ಖನಿಜ ಸೇರಿದಂತೆ ಕಲ್ಲು, ಜಲ್ಲಿ, ಮರಳು ಸಾಗಣೆ ಮಾಡುತ್ತಿದ್ದ ಲಾರಿಗಳ ಮೇಲೆ ಈಗ ನಿಗಾ ವಹಿಸಲಾಗಿದೆ. ಆ ಮೂಲಕ ಸರ್ಕಾರಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‍.ಎಸ್. ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸರ್ಕಾರಕ್ಕೆ ಆದಾಯ, ಗಣಿ ಉದ್ಯಮಿ, ಲಾರಿ ಮಾಲೀಕರು, ಗ್ರಾಹಕರಿಗೂ ಅನುಕೂಲ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಅಕ್ರಮ ಖನಿಜ ಸೇರಿದಂತೆ ಕಲ್ಲು, ಜಲ್ಲಿ, ಮರಳು ಸಾಗಣೆ ಮಾಡುತ್ತಿದ್ದ ಲಾರಿಗಳ ಮೇಲೆ ಈಗ ನಿಗಾ ವಹಿಸಲಾಗಿದೆ. ಆ ಮೂಲಕ ಸರ್ಕಾರಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‍.ಎಸ್. ಮಲ್ಲಿಕಾರ್ಜುನ ಹೇಳಿದರು.

ಬೆಂಗಳೂರಿನಲ್ಲಿ ಬುಧವಾರ ನಡೆದ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಒನ್ ಸ್ಟೇಟ್- ಒನ್ ಜಿಪಿಎಸ್ ಯೋಜನೆಯಿಂದ ನಿಯಮ ಉಲ್ಲಂಘಟನೆ ಮಾಡುವಂತಹ ಲಾರಿಗಳ ಮೇಲೆ ದಂಡ ವಿಧಿಸಲಾಗುತ್ತಿದೆ ಎಂದರು.

ಲಾರಿ ಮಾಲೀಕರು, ಗಣಿ ಮಾಲೀಕರು ಮತ್ತು ಗ್ರಾಹಕರಿಗೆ ಆಗುತ್ತಿದ್ದ ಮೋಸ ತಡೆಯಲು ಈ ಯೋಜನೆ ಜಾರಿಗೆ ತಂದಿದ್ದು ಯಶಸ್ವಿಯಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಲ್ಲ ಮಾದರಿ ಖನಿಜ- ಉಪ ಖನಿಜ ಸಾಗಿಸುವ ಸಾರಿಗಳ ಮೇಲೆ ನಿಗಾ ವಹಿಸಲು ಜಿಪಿಎಸ್ ಅಳವಡಿಸುವ ಯೋಜನೆ ಜಾರಿಗೆ ತಂದಿತ್ತು. ಇದರಿಂದ ಸಾಕಷ್ಟು ಪ್ರಯೋಜನವಾಗಿದ್ದು, ಸರ್ಕಾರಕ್ಕೂ ಇದರಿಂದ ಲಾಭವಾಗಿದೆ ಎಂದರು.

ಯಾರಿಗೂ ಮೋಸವಿಲ್ಲ:

ಜಿಪಿಎಸ್ ಅಳ‍ವಡಿಕೆಯಿಂದಾಗಿ ಸೋರಿಕೆ ಆಗುತ್ತಿದ್ದ ಆದಾಯಕ್ಕೆ ಕಡಿವಾಣ ಬಿದ್ದಿದೆ. ಇನ್ನೂ ಒಂದು ಪರವಾನಿಗೆ ತೆಗೆದುಕೊಂಡು ಹತ್ತಾರು ಲೋಡ್‌ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. ಇದರಿಂದ ಲಾರಿ ಮಾಲೀಕರು ಮತ್ತು ಗಣಿ ಮಾಲೀಕರಿಗೂ ಕೆಲವೊಮ್ಮ ನಷ್ಟವಾಗುತ್ತಿತ್ತು. ಲಾರಿ ಮಾಲೀಕರು ಎಲ್ಲೋ ಇರುತ್ತಾರೆ, ಯಾವುದೋ ಏಜೆನ್ಸಿ ಅಥವಾ ಕಂಪನಿ ಮೂಲಕ ಟ್ರಾನ್ಸ್‌ಪೋರ್ಟ್ ಮಾಡುತ್ತಿದ್ದರು. ಜಿಪಿಎಸ್ ಅಳ‍ವಡಿಕೆಯಿಂದ ಪಾರದರ್ಶಕ ಆಡಳಿತ ಮತ್ತು ಗ್ರಾಹಕರಿಗೂ ಅನುಕೂಲವಾಗಲಿದೆ. ಕಳ್ಳದಂಧೆಗೆ ಕಡಿವಾಣ ಬಿದ್ದಂತಾಗಿದೆ ಎಂದು ವಿವರಿಸಿದರು.

ಗಣಿ ಮತ್ತು ಭೂ ವಿಜ್ಞಾನ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಹ ಈ ಬಗ್ಗೆ ಹೆಚ್ಚು ಗಮನಹರಿಸಿ, ಕೆಲಸ ಮಾಡುವಂತೆ ಸೂಚಿಸಿದರು.

ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇದ್ದರು.

- - - -17ಕೆಡಿವಿಜಿ13:

ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ