ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಹಾಗೂ ಲೋಕಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಒದಗಿಸಿರುವುದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ನಿರ್ಧಾರವಾಗಿದೆ. ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿದಂತೆ ಅಭಿವೃದ್ಧಿ ಪ್ರಕ್ರಿಯೆಯಲ್ಲೂ ಸಕಾರಾತ್ಮಕ ಬದಲಾವಣೆ ಕಾಣಿಸಿಕೊಳ್ಳಲಿದೆ ಎಂದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಕಾನೂನು ಜಾರಿಗೊಂಡಿರುವುದು ಶ್ಲಾಘನೀಯವಾಗಿದ್ದು, ಅಟಲ ಬಿಹಾರಿ ವಾಜಪೇಯಿ ನಂತರ ದೇಶಕ್ಕೆ ದಿಕ್ಕು ತೋರಿಸುವ ನಾಯಕತ್ವವನ್ನು ಮೋದಿ ನೀಡಿದ್ದಾರೆ. ಈ ನಿರ್ಧಾರ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗುವಂತದ್ದು ಎಂದರು.ಬಹುಕಾಲದಿಂದ ಮಹಿಳಾ ಮೀಸಲಾತಿ ಬಿಲ್ ಮಂಡನೆಯಾಗುತ್ತಿದ್ದರೂ ಜಾರಿಯಾಗಿರಲಿಲ್ಲ. ಆದರೆ, ಸಂವಿಧಾನ ತಿದ್ದುಪಡಿ ಮೂಲಕ ವಿಶೇಷ ಅಧಿವೇಶನದಲ್ಲಿ ಬಿಲ್ ಅಂಗೀಕರಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಮಹಿಳೆಯರು ದೇಶದ ಒಟ್ಟು ಮತದಾರರಲ್ಲಿ ಶೇ.50ರಷ್ಟಿದ್ದು, ನಿರ್ಣಯಾತ್ಮಕ ಚರ್ಚೆಗಳಲ್ಲಿ ಭಾಗವಹಿಸಿದರೇ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ಸಿಗುತ್ತದೆ ಎಂದು ತಿಳಿಸಿದರು.ಗ್ರಾಮ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಈಗಾಗಲೇ ಮಹಿಳಾ ಮೀಸಲಾತಿ ಜಾರಿಯಲ್ಲಿದ್ದು, ಈಗ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿಯೂ ಅವಕಾಶ ಕಲ್ಪಿಸಿರುವುದು ಮಹತ್ವದ್ದಾಗಿದೆ. ಇತ್ತೀಚಿನ ಚುನಾವಣೆಯಲ್ಲಿ ಶೇ.48ರಷ್ಟು ಮಹಿಳೆಯರು ಮತದಾರರಾಗಿ ಭಾಗವಹಿಸಿರುವುದು ಮಹಿಳಾ ಶಕ್ತಿಯ ಏರಿಕೆಯನ್ನು ತೋರಿಸುತ್ತದೆ ಎಂದರು.ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಂದ ಮಹಿಳೆಯರ ಜೀವನಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. ಸುಮಾರು 32 ಕೋಟಿ ಮಹಿಳೆಯರು ಬ್ಯಾಂಕ್ ಖಾತೆಗಳನ್ನು ತೆರೆಯಿದ್ದು, ಸ್ವಸಹಾಯ ಗುಂಪುಗಳ ಮೂಲಕ 10 ಕೋಟಿ ಮಹಿಳೆಯರು ಆರ್ಥಿಕವಾಗಿ ಬಲಪಡಿಸಿಕೊಂಡಿದ್ದಾರೆ. ಉಜ್ವಲ ಯೋಜನೆ ಸೇರಿದಂತೆ ಹಲವು ಯೋಜನೆಗಳು ಮಹಿಳೆಯರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತಂದಿವೆ. ಮಹಿಳೆಯರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ನಾಯಕತ್ವ ವಹಿಸಬೇಕು ಎಂದರು.ಬಿಜೆಪಿ ಮಹಿಳಾ ಮೋರ್ಚಾ ಅದ್ಭುತ್ ಕಾರ್ಯ ಮಾಡುತ್ತ ಬಂದಿದ್ದಾರೆ. ಲೋಕಸಭೆಯಲ್ಲಿಯೂ ಮಹಿಳಾ ಸಂಸದರಿದ್ದಾರೆ. ಜಿಲ್ಲೆಯಲ್ಲಿ 5-6 ಜನ ಮಹಿಳಾ ಪ್ರತಿನಿಧಿಗಳನ್ನು ನೋಡಬಹುದು. ಮಹಿಳಾ ನಿರ್ಣಯ ಮಹತ್ವದ್ದಾಗಿದ್ದು, ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತಾರೆ. ಈ ಬಿಲ್ ಸ್ವಾಗತಾರ್ಹ. ಮಹಿಳೆಯರು ಆಧ್ಯಾತ್ಮಿಕ, ರಾಜಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಮಹಿಳೆಯರು ರಾಜಕೀಯದಲ್ಲಿಯೂ ಮುಂದೆ ಬಂದಿದ್ದಾರೆ.
ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ಈ ಬಿಲ್ ಅನ್ವಯವಾಗಲಿದ್ದು, ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ 5-6 ಮಹಿಳಾ ಪ್ರತಿನಿಧಿಗಳನ್ನು ನೋಡುವಂತಾಗಿದೆ. ಕ್ಷೇತ್ರಗಳ ಪುನರ್ ವಿಂಗಡಣೆ ಆಗಲಿದೆ ಎಂದರು.ಗೋಷ್ಠಿಯಲ್ಲಿ ಬಿಜೆಪಿಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಉಜ್ವಲಾ ಬಡವನಾಚೆ ಮತ್ತಿತರರು ಉಪಸ್ಥಿತರಿದ್ದರು.ರಾಜಕೀಯದಲ್ಲಿ ಹಣವೇ ಎಲ್ಲವೂ ಅಲ್ಲ, ನಿಷ್ಠಾವಂತ ಕಾರ್ಯಕರ್ತರಿಗೂ ಪಕ್ಷಗಳಲ್ಲಿ ಅವಕಾಶ ಸಿಗುತ್ತದೆ. ಚುನಾವಣೆಗಳಲ್ಲಿ ಕೇವಲ ದುಡ್ಡು ಅಥವಾ ಮಸಲ್ ಪವರ್ ಹೊಂದಿರುವವರಿಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಪಕ್ಷಗಳು ನಿಷ್ಠೆಯಿಂದ ಕೆಲಸ ಮಾಡುವ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಅವಕಾಶ ನೀಡುವ ಸಂಪ್ರದಾಯವಿದೆ. ದುಡ್ಡು ಇಲ್ಲದವರಿಗೂ ಟಿಕೆಟ್ ಸಿಗುವ ಸಾಧ್ಯತೆ ಇದ್ದು, ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿರುವವರಿಗೂ ರಾಜಕೀಯದಲ್ಲಿ ಬೆಳೆಯುವ ಅವಕಾಶ ಇದೆ. ಎಲ್ಲವೂ ಹಣದ ಮೇಲೆ ನಡೆಯುವುದಿಲ್ಲ, ಪರಿಶ್ರಮ ಮತ್ತು ನಿಷ್ಠೆ ಮುಖ್ಯ.-ಶಶಿಕಲಾ ಜೊಲ್ಲೆ,