ಇ-ಆಸ್ತಿಯಿಂದ ಪಾರದರ್ಶಕ ವ್ಯವಸ್ಥೆ ಜಾರಿ, ಗೊಂದಲಗಳ ನಿವಾರಣೆ: ನಂಜುಂಡಪ್ಪ

KannadaprabhaNewsNetwork |  
Published : Feb 16, 2024, 01:48 AM IST
ಪಟ್ಟಣದ ಎರಡನೇ ವಾರ್ಡ ನಲ್ಲಿ ಪುರಸಭೆಯ ವತಿಯಿಂದ ಹಮ್ಮಿಕೊಂಡಿದ್ದ ಇ-ಆಸ್ತಿ ಅಂದೋಲನದ ಮನೆ ಬಾಗಿಲಿಗೆ ಪುರಸಭೆ ಎಂಬ ಕಾರ್ಯಕ್ರಮದಲ್ಲಿ ಇ-ಆಸ್ತಿ ದಾಖಲೆಗಳನ್ನು ವಿತರಣೆ ಮಾಡುತ್ತೀರುವ ಪುರಸಭಾ ಸದಸ್ಯ ನಂಜುಂಡಪ್ಪ | Kannada Prabha

ಸಾರಾಂಶ

ಮೊದಲು ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಕೈ ಬರವಣಿಗೆಯಲ್ಲಿ ನೀಡುತ್ತಿದ್ದರು ಇದರಿಂದ ಅನೇಕ ಗೊಂದಲಗಳು ಉಂಟಾಗುತ್ತಿದ್ದವು ಆಸ್ತಿಯ ವಿಚಾರದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ 2016ರಿಂದ ಇ-ಆಸ್ತಿ ವ್ಯವಸ್ಥೆ ಜಾರಿಗೆ ತಂದಿದ್ದು ಈ ಯೋಜನೆಯ ಸೌಲಭ್ಯ ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಪುರಸಭೆ ಅಧಿಕಾರಿಗಳೇ ನಿಮ್ಮ ಮನೆಗೆ ಬಾಗಿಲಿಗೆ ಬರುತ್ತಿದ್ದು ಪ್ರತಿಯೊಬ್ಬರು ನಿಮ್ಮ ಆಸ್ತಿಯ ವಿವರಗಳ ಇ-ಆಸ್ತಿಯಲ್ಲಿ ನೋಂದಾಯಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ವ್ಯಾಪ್ತಿಯಲ್ಲಿ ಪುರಸಭೆ ವತಿಯಿಂದ ಇ-ಆಸ್ತಿ ಆಂದೋಲನ ನಡೆಯುತ್ತಿದ್ದು, ಪ್ರತಿಯೊಬ್ಬರು ಇ-ಆಸ್ತಿಯಲ್ಲಿ ತಮ್ಮ ಆಸ್ತಿಗಳ ನೋಂದಾಯಿಸ ಕೊಳ್ಳಬೇಕು ಎಂದು ಪುರಸಭೆ ಸದಸ್ಯ ನಂಜುಂಡಪ್ಪ ಹೇಳಿದರು.

ಪಟ್ಟಣದ ಎರಡನೇ ವಾರ್ಡ್‌ನಲ್ಲಿ ಪುರಸಭೆಯಿಂದ ಹಮ್ಮಿಕೊಂಡಿದ್ದ ಇ-ಆಸ್ತಿ ಆಂದೋಲನದ ಮನೆ ಬಾಗಿಲಿಗೆ ಪುರಸಭೆ ಕಾರ್ಯಕ್ರಮದಲ್ಲಿ ಇ-ಆಸ್ತಿ ದಾಖಲೆಗಳ ವಿತರಿಸಿ ಮಾತನಾಡಿ ಮೊದಲು ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಕೈ ಬರವಣಿಗೆಯಲ್ಲಿ ನೀಡುತ್ತಿದ್ದರು ಇದರಿಂದ ಅನೇಕ ಗೊಂದಲಗಳು ಉಂಟಾಗುತ್ತಿದ್ದವು ಆಸ್ತಿಯ ವಿಚಾರದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ 2016ರಿಂದ ಇ-ಆಸ್ತಿ ವ್ಯವಸ್ಥೆ ಜಾರಿಗೆ ತಂದಿದ್ದು ಈ ಯೋಜನೆಯ ಸೌಲಭ್ಯ ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಪುರಸಭೆ ಅಧಿಕಾರಿಗಳೇ ನಿಮ್ಮ ಮನೆಗೆ ಬಾಗಿಲಿಗೆ ಬರುತ್ತಿದ್ದು ಪ್ರತಿಯೊಬ್ಬರು ನಿಮ್ಮ ಆಸ್ತಿಯ ವಿವರಗಳ ಇ-ಆಸ್ತಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ಮಾತನಾಡಿ ಇ-ಆಸ್ತಿ ದಾಖಲೆ ಪ್ರಮುಖ ದಾಖಲೆಯಾಗಿದ್ದು ಇದನ್ನು ಪಡೆದಲ್ಲಿ ತಮ್ಮ ಆಸ್ತಿಯು ಸುಭದ್ರವಾಗುತ್ತದೆ. ಇಲ್ಲಿಯವರೆಗೂ ಇ-ಆಸ್ತಿ ದಾಖಲೆಗಳ ಪಡೆಯದವರು ನಿಗದಿತ ದಾಖಲೆ ಸಲ್ಲಿಸಿ ಇ-ದಾಖಲೆಗಳ ಪಡೆಯಬಹುದು ಎಂದರು.

ಪ್ರತಿ ವರ್ಷ ಮನೆ ಕಂದಾಯ, ನಲ್ಲಿ ಕಂದಾಯಗಳ ನಿಗದಿತ ಸಮಯದಲ್ಲಿ ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು.

ಕಂದಾಯ ಅಧಿಕಾರಿ ಮಂಜುನಾಥ್ ಮಾತನಾಡಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಇ-ಆಸ್ತಿ ನೋಂದಣಿ ಕಾರ್ಯಕ್ರಮ ಪಟ್ಟಣದ ಪ್ರತಿ ವಾರ್ಡ್‌ಗಳಲ್ಲಿಯೂ ಹಮ್ಮಿಕೊಳ್ಳಲಿದ್ದು ಇ-ಆಸ್ತಿ ದಾಖಲೆಗಳ ಪಡೆದಲ್ಲಿ ಎಲ್ಲಾ ವ್ಯವಹಾರಗಳಿಗೂ ಅನುಕೂಲವಾಗುವ ಜೊತೆಗೆ ವ್ಯಾಜ್ಯಗಳ ತಡೆಗಟ್ಟಲು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕಚೇರಿ ಸಿಬ್ಬಂದಿಗಳಾದ ಪ್ರಭು, ಸೈಯದ್ ಹುಸೇನ್, ಅನಿಲ್, ಮಧು, ನಾಗರಾಜ್ ಸೇರಿ ಸಾರ್ವಜನಿಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ