ಕನ್ನಡಪ್ರಭ ವಾರ್ತೆ ತುಮಕೂರು
ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಫಿಜಿಯೋಥೆರಪಿಗೆ ಅತ್ಯಂತ ಮಹತ್ವವಿದೆ. ಫಿಸಿಯೋಥೆರಪಿ ಮಾನವನ ಶರೀರ ವೇದನೆಗಳನ್ನು ನಿವಾರಣೆ ಮಾಡುತ್ತದೆ ಎಂದು ಮಾಜಿ ಸಚಿವ ಪಿಜಿ ಆರ್ ಸಿಂಧ್ಯ ಹೇಳಿದರು.ನಗರದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ 2023-24ರ ಫಿಜಿಯೋಥೆರಪಿ ಶೈಕ್ಷಣಿಕ ವರ್ಷದ ಆರಂಭ ಹಾಗೂ ಪ್ರತಿಭಾವಂತ ಫಿಜಿಯೋಥೆರಪಿ ಅಧ್ಯಯನ ವಿದ್ಯಾರ್ಥಿಗಳಿಗೆ ಕುಮಾರಿ ಸುಧಾ ನಾರಾಯಣಪ್ಪ ಜಯಮ್ಮ ಪ್ರತಿಭಾ ಪುರಸ್ಕಾರ ಹಾಗೂ ಫಿಜಿಯೋಥೆರಪಿ ಎನ್.ನಾರಾಯಣಪ್ಪ ಜಯಮ್ಮರವರ ಸೇವಾ ಪುರಸ್ಕಾರ ವಿತರಿಸಿ ಮಾತನಾಡಿದರು.ಶರೀರಕವಾಗಿ ಮನುಷ್ಯ ಸದಾ ಫಿಟ್‌ನೆಸ್ ಎಂಬುದು ಆರೋಗ್ಯದ ಮೂಲ ಪಾಠವಾಗಿದೆ. ಅಂತಹ ಜ್ಞಾನವನ್ನು ವಿದ್ಯಾರ್ಥಿಗಳು ಕಷ್ಟಪಟ್ಟುಗಳಿಸಿಕೊಳ್ಳಬೇಕು. ಫಿಸಿಯೋಥೆರಪಿ ನಾರಾಯಣ್ಣಪ್ಪನವರು ತಮ್ಮ ಮಗಳಾದ ದಿವಂಗತ ಕುಮಾರಿ ಸುಧಾ ಅವರ ಹೆಸರಿನಲ್ಲಿ ಪ್ರತಿಭಾವಂತ ಫಿಸಿಯೋಥೆರಪಿ ವಿದ್ಯಾರ್ಥಿಗಳಿಗೆ ದತ್ತಿ ಸ್ಥಾಪಿಸಿರುವುದು ಸ್ವಾಗತಾರ್ಹವಾಗಿದೆ. ಕು.ಸುಧಾರವರು ದತ್ತಿ ಕಾರ್ಯಕ್ರಮದ ಮೂಲಕ ಚಿರಸ್ಥಾಯಿಯಾಗಿದ್ದಾರೆ. ನನಗೆ ಡಾ.ನಾರಾಯಣಪ್ಪರವರ ಪರಿಚಯ ಹೆಚ್ಚುವಿರಲಿಲ್ಲ, ನಾರಾಯಣಪ್ಪರವರು ಸುಮಾರು 86 ವರ್ಷ ಫಿಸಿಯೋಥೆರಪಿ ಕ್ಷೇತ್ರ ಭೀಷ್ಮ ಎನ್ನಿಸಿದ್ದಾರೆ ಎಂದರು.ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಫಿಸಿಯೋಥೆರಪಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲಾಗುವುದು. ಇಲ್ಲಿನ ಪ್ರಯೋಗಾಲಯ ಹಾಗೂ ವೈದ್ಯಕೀಯ ಕಾಲೇಜಿನ ಸಿಬ್ಬಂದಿಗಳು ಶ್ರೇಷ್ಠ ಗುಣಮಟ್ಟವನ್ನು ಹೊಂದಿದ್ದು, ಅವರ ಸೇವೆಯನ್ನು ಫಿಸಿಯೋಥೆರಪಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ ಎಂದು ಹೇಳಿದರು.ಫಿಸಿಯೋಥೆರಪಿ ಬೆಳೆಯುತ್ತಿರುವ ಅರೆ ವೈದ್ಯಕೀಯ ಶಾಸ್ತ್ರವಾಗಿದೆ. 2040ಕ್ಕೆ ಇಡೀ ವಿಶ್ವದಲ್ಲಿ ಫಿಸಿಯೋಥೆರಪಿ ಅಗತ್ಯತೆಗಳಿಕ್ಕಿಂತ ಶೇ.4 ಪಟ್ಟು ಹೆಚ್ಚಾಗಿರುತ್ತದೆ. ಆಗಾಗಿ ಫಿಸಿಯೋಥೆರಪಿ ಅಧ್ಯಾಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ ಎಂದರು.ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಪ್ರೀತಿ ವಿಶ್ವಾಸದಿಂದ ವಿದ್ಯಾಭ್ಯಾಸವನ್ನು ಮಾಡಿದರೆ ಭವಿಷ್ಯತ್ ಚೆನ್ನಾಗಿರುತ್ತದೆ. ದೇಶ - ವಿದೇಶಗಳಲ್ಲಿಯೂ ಫಿಸಿಯೋಥೆರಪಿ ಕೋರ್ಸ್‌ಗಳಿಗೆ ಬೇಡಿಕೆ ಸಾಕಷ್ಟು ಹೆಚ್ಚಾಗಲಿದೆ ಎಂದರು.
ಡಾ.ಕೆ.ಆರ್.ಕಮಲೇಶ್ ಮಾತನಾಡಿದರು. ಫಿಜಿಯೋಥೆರಪಿ ಎನ್.ನಾರಾಯಣಪ್ಪ ಜಯಮ್ಮರವರ ಸೇವಾ ಪುರಸ್ಕಾರದಲ್ಲಿ ಡಾ.ಸೈಯದಾ ಮುಬಶೀರಾರವರನ್ನು ಸನ್ಮಾನಿಸಲಾಯಿತು. ಕುಮಾರಿ ಸುಧಾ ನಾರಾಯಣಪ್ಪ ಜಯಮ್ಮರವರ ಪ್ರತಿಭಾ ಪುರಸ್ಕಾರವನ್ನು ಕುಮಾರಿ ಬಾ ಆರ್, ಕುಮಾರಿ ರೋಜಿನ ಕೆ.ಸಿ, ಅಬ್ದುಲ್ ಮುಕೀತ್‌ರವರನ್ನು ಸನ್ಮಾನಿಸಿ ೧೦ ಸಾವಿರ ನಗದು ನೀಡಿ ಗೌರವಿಸಲಾಯಿತು. ಡಾ.ಎನ್.ನಾರಾಯಣಪ್ಪ, ಶ್ರೀಮತಿ ಜಯಮ್ಮ ನಾರಾಯಣಪ್ಪ, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಶ್ರೀದೇವಿ ಚಾರಿಟಬಲ್ ಟ್ರಸ್ಟಿಯಾದ ಅಂಬಿಕಾ ಎಂ ಹುಲಿನಾಯ್ಕರ್, ಶ್ರೀದೇವಿ ಫಿಜಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಎ.ಆನಂದಿ, ಶ್ರೀದೇವಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಕೆ.ಮೋಹನ್‌ಕುಮಾರ್, ಆಶಾಪ್ರಸನ್ನಕುಮಾರ್, ಭಾರತಿ ಕಮಲೇಶ್, ಶಿವಶಂಕರ್, ಎಸ್.ನಾಗಣ್ಣ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು.