ಮಾನಸಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಿ: ಭಾಸ್ವರ್ ರಾಯ್

KannadaprabhaNewsNetwork |  
Published : May 26, 2025, 12:59 AM IST
25ಎಚ್‌ಪಿಟಿ2- ಹೊಸಪೇಟೆಯ ಪಿಡಿಐಟಿ ಕಾಲೇಜ್‌ನಲ್ಲಿ ವಾರ್ಷಿಕೋತ್ಸವ ‘ಸಿಂಚನ -2025’ರ ಕಾರ್ಯಕ್ರಮವನ್ನು ಹೊಸಪೇಟ್ ಸ್ಟೀಲ್ಸ್‌ನ ಹಿರಿಯ ಉಪಾಧ್ಯಕ್ಷ ಭಾಸ್ವರ್ ರಾಯ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾಮಾನ್ಯ ಗಣಿತ ಲೆಕ್ಕಾಚಾರಗಳಿಗೂ ಕ್ಯಾಲ್ಕುಲೇಟರ್‌ ಹಾಗೂ ಕಂಪ್ಯೂಟರ್ ಮೇಲೆ ಅವಲಂಬಿತರಾಗುತ್ತಾರೆ.

ಆರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಡಾಕ್ಟರೇಟ್ ಪಡೆದ ಉಪನ್ಯಾಸಕರಿಗೆ ಸನ್ಮಾನಕನ್ನಡಪ್ರಭ ವಾರ್ತೆ ಹೊಸಪೇಟೆ

ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾಮಾನ್ಯ ಗಣಿತ ಲೆಕ್ಕಾಚಾರಗಳಿಗೂ ಕ್ಯಾಲ್ಕುಲೇಟರ್‌ ಹಾಗೂ ಕಂಪ್ಯೂಟರ್ ಮೇಲೆ ಅವಲಂಬಿತರಾಗುತ್ತಾರೆ. ಇದರಿಂದ ಅವರಿಗೆ ವಿಶ್ಲೇಷಾತ್ಮಕ ಜ್ಞಾನವು ಕುಂಠಿತವಾಗುತ್ತದೆ ಎಂದು ಹೊಸಪೇಟ್ ಸ್ಟೀಲ್ಸ್‌ನ ಹಿರಿಯ ಉಪಾಧ್ಯಕ್ಷ ಭಾಸ್ವರ್ ರಾಯ್ ಹೇಳಿದರು.

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ (ಪಿಡಿಐಟಿ)ದಲ್ಲಿ ವಾರ್ಷಿಕೋತ್ಸವ ‘ಸಿಂಚನ -2025’ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಈಗಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ಆ್ಯನ್ಡ್ರಾಯಿಡ್‌ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ ಇಲ್ಲದೇ ವ್ಯಾಸಂಗ ಮಾಡಲು ಬರುವುದಿಲ್ಲ. ವಿದ್ಯಾರ್ಥಿಗಳು ಅವುಗಳಲ್ಲಿ ವಿಶೇಷವಾಗಿ ಅವಲಂಬಿತರಾಗದೇ ಮಾನಸಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ಇಂದಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಯುಗದಲ್ಲಿ ಐಟಿ ಎಂಜಿನಿಯರ್‌ಗಳಿಗೆ ಹೆಚ್ಚಿನ ವಿಶ್ಲೇಷಾತ್ಮಕ ಜ್ಞಾನ ಹಾಗೂ ಕೋರ್ ಎಂಜಿನಿಯರ್‌ಗಳಿಗೆ ವಿಜ್ಞಾನದ ಮೂಲಭೂತಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ವಿಜಯನಗರ ಜಿಲ್ಲೆಯ ಸುತ್ತಲೂ ಸ್ಟ್ರೀಲ್ ಮ್ಯಾನುಫ್ಯಾಕ್ಚರಿಂಗ್ ಇಂಡಸ್ಟ್ರಿಗಳಲ್ಲಿ ಕೋರ್ ಎಂಜಿನಿಯರ್‌ಗಳಿಗೆ ಬೇಡಿಕೆ ಇದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ್ ಬಾದಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಕಾಲೇಜು ಕಳೆದ 27 ವರ್ಷಗಳಿಂದ ಅತ್ಯುತ್ತಮ ಎಂಜಿನಿಯರ್‌ಗಳನ್ನು ಕೊಡುಗೆಯಾಗಿ ನೀಡಿದೆ. ಕಾಲೇಜಿನಲ್ಲಿನ ಲ್ಯಾಬ್‌ಗಳನ್ನು ನವೀಕರಿಸಲಾಗಿದೆ, ಕ್ರೀಡೆಗೆ ಪೂರಕವಾಗುವ 20 ಲಕ್ಷ ರು. ಮೊತ್ತದ ಮಲ್ಟಿಜಿಮ್ ಅನ್ನು ಸ್ಥಾಪಿಸಲಾಗಿದೆ, ನ್ಯಾಕ್ ಬಿ+ ಪಡೆದ ನಂತರವೂ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗಿದೆ. ಎನ್ ಬಿ ಎ ಮಾನ್ಯತೆ ಪಡೆಯಲು ತಯಾರಿ ನಡೆಸಲಾಗುತ್ತಿದೆ ಎಂದರು.

ಬಲ್ಡೊಟಾ ಗ್ರೂಪ್‌ನ ಉಪಾಧ್ಯಕ್ಷ ಎಚ್‌.ಕೆ. ರಮೇಶ್, ಮೆಕಾನಿಕಲ್ ವಿಭಾಗದ ಸಮೀರ್ ಬಾಷಾ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಸ್ವಾತಿ ಗೋಪಾಲ್, ಗಣಕಯಂತ್ರ ವಿಭಾಗದ ಅರ್ಚನಾ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಂಕಿತಾ ಜೆ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಿಫಾ ಅಂಜುಮ್, ಹಾಗೂ ಎಂ.ಬಿ.ಎ. ವಿಭಾಗದ ಕವಿತಾ ಎಂಬ ವಿದ್ಯಾರ್ಥಿಗಳಿಗೆ ಎಂ.ಎಸ್.ಪಿ.ಎಲ್. ಸಂಸ್ಥೆಯಿಂದ ಚಿನ್ನದ ಪದಕ ನೀಡಿ ಪುರಸ್ಕರಿಲಾಯಿತು.

ವೀ.ವಿ. ಸಂಘದ ಕಾರ್ಯಕಾರಣಿ ಮಂಡಳಿ ಸದಸ್ಯರಾದ ದರೂರ್ ಶಾಂತನಗೌಡ ಮಾತನಾಡಿ, ಪಿಡಿಐಟಿ ಕಾಲೇಜು ಶಿಕ್ಷಣಿಕವಾಗಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಂದ ಪ್ರಭಾವಿಶಾಲಿಯಾಗಿದೆ ಎಂದರು.

ಪ್ರಾಂಶುಪಾಲ ಡಾ. ಯು.ಎಂ. ರೋಹಿತ್ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು.

ವೀ.ವಿ. ಸಂಘದ ವತಿಯಿಂದ ಎಲ್ಲಾ ವಿಭಾಗದ ಅತ್ಯಂತ ಹೆಚ್ಚು ಶ್ರೇಣಿಯಲ್ಲಿ ಉತ್ತೀರ್ಣಗೊಂಡ 6 ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ರು. ಮೊತ್ತದ ನಗದು ಬಹುಮಾನವನ್ನು ಹಾಗೂ ಇತರ ದತ್ತಿ ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ಸಂದರ್ಭ ಡಾಕ್ಟರೇಟ್ ಪಡೆದ ಕಾಲೇಜಿನ ಇಬ್ಬರು ಉಪನ್ಯಾಸಕರಾದ ಡಾ. ಪ್ರಕಾಶ್ ಎಸ್. ಹಾಗೂ ಡಾ. ಪಾರ್ವತಿ ಕಡ್ಲಿ ಅವರಿಗೆ ಸನ್ಮಾನಿಸಲಾಯಿತು.

ವೀವಿ ಸಂಘದ ಕಾರ್ಯಕಾರಣಿ ಮಂಡಳಿ ಸದಸ್ಯರಾದ ಎಂ.ಶರಣ ಬಸವನಗೌಡ ಹಾಗೂ ಮೆಟ್ರಿ ಮಲ್ಲಿಕಾರ್ಜುನ, ಸಿ.ಎನ್. ಮೋಹನ್ ರೆಡ್ಡಿ, ವೀವಿ ಸಂಘದ ಮಾಜಿ ಅಧ್ಯಕ್ಷ ರಾಮನ ಗೌಡ, ಪಿಡಿಐಟಿಯ ಆಡಳಿತ ಮಂಡಳಿಯ ಸದಸ್ಯರಾದ ಐ.ಎನ್. ಸಂಗನಬಸಪ್ಪ, ಬಿ. ಚಂದ್ರಮೌಳಿ, ಪ್ರಾಂಶುಪಾಲ ಡಾ. ರೋಹಿತ್ ಯು.ಎಂ., ಸಿಂಚನ 2025 ಕಾರ್ಯಕ್ರಮದ ಸಂಯೋಜಕ ಡಾ. ವಸಂತಮ್ಮ ಎಚ್. ಮುಂತಾದವರಿದ್ದರು. ಪ್ರೊ.ವೀಣಾ ಹಾಗೂ ಪ್ರೊ. ಉಷಾ ಗುಜ್ಜಲ್ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ