ಯೋಗದಿಂದ ಆರೋಗ್ಯ ವೃದ್ಧಿ: ಸ್ವಾಮಿ ಯುಗೇಶಾನಂದಜೀ

KannadaprabhaNewsNetwork |  
Published : Oct 06, 2026, 02:45 AM IST
ರಾಮಕೃಷ್ಣ ಮಠದಲ್ಲಿ ಯೋಗ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು  | Kannada Prabha

ಸಾರಾಂಶ

ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗಲು ಯೋಗ ಸಹಕಾರಿ ಎಂದು ಬಾಲಕಾಶ್ರಮದ ವಾರ್ಡನ್ ಆಗಿರುವ ಸ್ವಾಮಿ ಯುಗೇಶಾನಂದಜೀ ಹೇಳಿದರು.

ಮಂಗಳೂರು: ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗಲು ಯೋಗ ಸಹಕಾರಿ ಎಂದು ಬಾಲಕಾಶ್ರಮದ ವಾರ್ಡನ್ ಆಗಿರುವ ಸ್ವಾಮಿ ಯುಗೇಶಾನಂದಜೀ ಹೇಳಿದರು.

ಅವರು ಮಂಗಳೂರು ನಗರದ ಮಂಗಳಾದೇವಿ ಸಮೀಪದ ಶ್ರೀ ರಾಮಕೃಷ್ಣಮಠದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಮಾರ್ಗದರ್ಶನದಲ್ಲಿ ನಡೆಯುವ ಯೋಗ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಯೋಗದಿಂದ ನೆಮ್ಮದಿಯ ಬದುಕು, ಸಮರ್ಥ ಶರೀರ, ಸ್ವಸ್ಥ ಮನಸ್ಸನ್ನು ಯೋಗದಿಂದ ಪಡೆಯಬಹುದು ಎಂದರು.ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ, ಪ್ರಯೋಜನಗಳನ್ನು ತಿಳಿಸಿದರು.ಶ್ರೀ ದೇಲಂಪಾಡಿ ಶಿಷ್ಯರಾದ ಸುಮಾ, ಭಾರತಿ, ಚಂದ್ರಹಾಸ ಬಾಳ, ಪ್ರೇಮ ಸಹಕರಿಸಿದರು.

ಆಸಕ್ತರು ನೋಂದಾಯಿಸಿಕೊಳ್ಳಲು ಆಶ್ರಮದ ಕಾರ್ಯಾಲವನ್ನು ಸಂಪರ್ಕಿಸಬಹುದು. ಸಂಪರ್ಕ:೦೮೨೪-೨೪೧೪೪೧೨ ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಫಿನಾಡಿನಲ್ಲಿ ವರುಣನ ಆಗಮನ; ರೈತರ ಮೊಗದಲ್ಲಿ ಸಂತಸ
ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ