ಕ್ರೀಡೆಗಳಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ: ಕುರಿ ಶಿವಮೂರ್ತಿ

KannadaprabhaNewsNetwork |  
Published : Feb 22, 2024, 01:47 AM IST
ಫೋಟೋವಿವರ- (21ಎಂಎಂಎಚ್‌1) ಮರಿಯಮ್ಮನಹಳ್ಳಿ ಸಮೀಪದ ಡಣಾಪುರದ ಹೊರವಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸ್ಥಳೀಯ ಹುಲಿಗೆಮ್ಮದೇವಿ ಜಾತ್ರೆ ಪ್ರಯುಕ್ತ ಹಮ್ಮಿಕೊಂಡ ಕ್ರಿಕೇಟ್ ಟೂರ್ನ್ ಮೆಂಟ್ ಗೆ ಸಮಾಜ ಸೇವಕ ಕುರಿ ಶಿವಮೂರ್ತಿ ಚಾಲನೆ ನೀಡಿದರು.  | Kannada Prabha

ಸಾರಾಂಶ

ಯುವಕರು ಕ್ರಿಯಾಶೀಲರಾಗಲು ವ್ಯಾಯಾಮ, ಕ್ರೀಡೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಮರಿಯಮ್ಮನಹಳ್ಳಿ: ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಯುವಜನತೆ ಸದೃಢ ಆರೋಗ್ಯ ಹೊಂದಬೇಕು ಎಂದು ಸಮಾಜ ಸೇವಕ ಕುರಿ ಶಿವಮೂರ್ತಿ ಮನವಿ ಮಾಡಿದರು.

ಸಮೀಪದ ಡಣಾಪುರದ ಹೊರವಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸ್ಥಳೀಯ ಹುಲಿಗೆಮ್ಮದೇವಿ ಜಾತ್ರೆ ಪ್ರಯುಕ್ತ ಹಮ್ಮಿಕೊಂಡ ಕ್ರಿಕ್ರೆಟ್ ಟೂರ್ನಾಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು.

ಯುವಕರು ಉತ್ಸುಕತೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಬೇಕು. ಅಲ್ಲದೇ ಯುವಕರು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಟಿವಿ, ಮೊಬೈಲ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗೆ ದಾಸರಾಗಿ ಯುವಕರು ಗ್ರಾಮೀಣ ಕ್ರೀಡೆಗಳನ್ನು ಮರೆಯುತ್ತಿದ್ದಾರೆ. ಯುವಕರು ಕ್ರಿಯಾಶೀಲರಾಗಲು ವ್ಯಾಯಾಮ, ಕ್ರೀಡೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್. ಕೃಷ್ಣನಾಯ್ಕ ಮಾತನಾಡಿ, ಸದೃಢ ಆರೋಗ್ಯ ಮತ್ತು ಸದೃಢ ಮನಸ್ಸು ಹೊಂದಲು ಪ್ರತಿಯೊಬ್ಬರೂ ಕ್ರೀಡಾ ಹವ್ಯಾಸ ಬೆಳೆಸಿಕೊಳ್ಳಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ನಿತ್ಯ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಲು ಅನುಕೂಲವಾಗುತ್ತದೆ ಎಂದರು.

ಪಟ್ಟಣದ ಪಿಎಸ್ಐ ಮೌನೇಶ್ ರಾಥೋಡ್, ಡಣಾಪುರ ಗ್ರಾಪಂ ಅಧ್ಯಕ್ಷ ಎಚ್‌. ಮಲ್ಲೇಶ್, ಕ.ರಾ.ರೈ. ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ, ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ಎಂ. ಭರತ್, ಸ್ಥಳೀಯ ಮುಖಂಡರಾದ ಎ. ಫಕ್ಕೀರಸ್ವಾಮಿ, ಕುರಿ ಪಂಪಾಪತಿ, ಎಚ್.ಬಿ. ಕೃಷ್ಣಗುಂಡಾ, ಬಿ.ಎಂ.ಎಂನ ಗಿರೀಶ್, ಹಳ್ಳಿನಿಂಗಪ್ಪ, ಕೆ. ನಿಂಗರಾಜ, ಶರಣಕುಮಾರ್‌, ಮೊಹಬೂಬ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ