ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪಾಂಡವಪುರ ನ್ಯಾಯಾಂಗ ವಿಭಾಗ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ವಿಶ್ವ ಯೋಗದಿನದ ಪ್ರಯುಕ್ತ ನಡೆದ ಯೋಗಾಭ್ಯಾಸದಲ್ಲಿ ಮಾತನಾಡಿದರು.
ಯೋಗ ಭಾರತದ ಪ್ರಾಚೀನ ಕಲೆ, ಯೋಗ ನಮ್ಮ ದೇಶದ ಸಂಸ್ಕ್ರತಿ. ಯೋಗ ಅಂದ್ರೆ ಸಂಯೋಗ, ದೇಹ ಮತ್ತು ಮನಸ್ಸು ಎರಡು ಸಂಯೋಗವಾಗುವ ಕಲೆಯೇ ಯೋಗ. ದೇಶದ ಪ್ರಧಾನಿ ಮೋದಿ ವಿಶ್ವಸಂಸ್ಥೆಯಲ್ಲಿ 2015ರ ಜೂನ್ 21ರಂದು ಯೋಗವನ್ನು ಅಂತಾರಾಷ್ಟ್ರೀಯ ಕ್ರೀಡೆಯಾಗಿ ಮಾಡುವುದಾಗಿ ಜಾರಿಗೆ ತಂದರು ಎಂದರು.ಅಂದಿನಿಂದ ಪ್ರತಿ ವರ್ಷ ಕಡ್ಡಾಯವಾಗಿ ಎಲ್ಲೆಡೆ ಜೂನ್ 21ರಂದು ಯೋಗ ದಿನಾಚರಣೆ ಆಚರಿಸಲಾಗುತ್ತದೆ. ನ್ಯಾಯಾಲಯದ ಆವರಣದಲ್ಲಿ ಕಡ್ಡಾಯವಾಗಿ ಯೋಗ ದಿನಾಚರಣೆ ಮಾಡಬೇಕೆಂಬ ಉಚ್ಚ ನ್ಯಾಯಾಲಯದ ಆದೇಶ ಇದೆ. ಹೀಗಾಗಿ ಆಚರಿಸಲಾಗುತ್ತಿದೆ ಎಂದರು.
ಈ ವೇಳೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎನ್.ಬಾಬು, ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಚ್.ಎಸ್.ಪೂಜಾ, ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಕೆ.ಎಸ್.ಮೋಹನ್ ಕುಮಾರ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಎಸ್.ಜಯರಾಂ, ಯೋಗಗುರುಗಳಾದ ಸೋಮಶೇಖರ್, ಪ್ರಭಾವತಿ, ಯೋಗ ಸಮಿತಿ ಸದಸ್ಯರಾದ ಡಾ.ಮಣಿಕರ್ಣಿಕಾ, ಪೊಲೀಸ್ ಜವರೇಗೌಡ, ಪೂಜಾ, ಭುವನೇಶ್ವರಿ, ನಳಿನಿ, ನಿರ್ಮಲ, ಅಂಬಿಕಾ, ಜೆ.ರಾಧಾ, ಜಯಲಕ್ಷ್ಮಿ, ರಜಿನಿ, ಲೀಲಾವತಿ, ಕವಿತಾ, ಶೋಭಾ, ಲಾವಣ್ಯ, ಯಶೋದಮ್ಮ, ಪುಟ್ಟಮಾದ್ದೇಗೌಡ, ರೈಟರ್ ಸ್ವಾಮಿಗೌಡ, ಟಿ.ಲೋಕೇಶ್, ಸದಾನಂದ, ಡಿ.ಶಿವಣ್ಣ, ಅರಣ್ಯ ಇಲಾಖೆ ಮಂಜು, ಸೌಮ್ಯ, ಕಲಾವತಿ, ಶಿಲ್ಪಾ, ತುಕಾರಾಮ್, ಅಪ್ಪಾಜಿ, ಮೀನಾ, ಜಯ ಸೇರಿದಂತೆ ಇತರರಿದ್ದರು.