2006ರ ಬಸವಸಾಗರ ಜಲಾಶಯದ ಕ್ರಸ್ಟ್ ಗೇಟ್ ದುರಂತದ ನಂತರ ರಾಜ್ಯದಲ್ಲಿ ಮತ್ತೊಂದು ಆಣೆಕಟ್ಟು ದುರಂತ

KannadaprabhaNewsNetwork |  
Published : Aug 12, 2024, 12:45 AM ISTUpdated : Aug 12, 2024, 11:41 AM IST
ನಾರಾಯಣಪುರದ ಬಸವ ಸಾಗರ ಜಲಾಶಯದ ನೋಟ. | Kannada Prabha

ಸಾರಾಂಶ

2006ರ ಬಸವಸಾಗರ ಜಲಾಶಯದ ಕ್ರಸ್ಟ್ ಗೇಟ್ ದುರಂತದ ನಂತರ ರಾಜ್ಯದಲ್ಲಿ ಮತ್ತೊಂದು ಆಣೆಕಟ್ಟು ದುರಂತ ಸಂಭವಿಸಿದೆ. ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ (19) ಚೈನ್ ತುಂಡಾಗಿ ಬಿದ್ದಿದ್ದು ಅಪಾರ ಪ್ರಮಾಣದ ನೀರು ಪೊಲಾಗುತ್ತಿದೆ. 

ಅನಿಲ್‌ ಬಿರಾದರ್‌

  ಕೊಡೇಕಲ್‌ : 2006ರ ಬಸವಸಾಗರ ಜಲಾಶಯದ ಕ್ರಸ್ಟ್ ಗೇಟ್ ದುರಂತದ ನಂತರ ರಾಜ್ಯದಲ್ಲಿ ಮತ್ತೊಂದು ಆಣೆಕಟ್ಟು ದುರಂತ ಸಂಭವಿಸಿದೆ. ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ (19) ಚೈನ್ ತುಂಡಾಗಿ ಬಿದ್ದಿದ್ದು ಅಪಾರ ಪ್ರಮಾಣದ ನೀರು ಪೊಲಾಗುತ್ತಿದೆ. 2006 ರಲ್ಲಿ ಬಸವಸಾಗರ ಜಲಾಶಯದ ಕ್ರಸ್ಟ್ ಗೇಟ್ ಸಂಖ್ಯೆ 5 ಕಿತ್ತು ಹೋಗಿದ್ದ ಕಹಿ ನೆನಪನ್ನು ತುಂಗಭದ್ರಾ ಜಲಾಶಯ ನೆನಪಿಸಿದೆ.

2006 ರಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಸವಸಾಗರ ಜಲಾಶಯದ ಗೇಟ್ ಕಿತ್ತು ಹೋಗಿದ್ದರಿಂದ 20 ಟಿ.ಎಂ.ಸಿ ಗೂ ಅಧಿಕ ನೀರು ಪೋಲಾಗಿ ಕೃಷ್ಣಾ ತೀರದ ಕೆಲವು ಗ್ರಾಮಗಳಲ್ಲಿ ಪ್ರವಾಹ ಉಂಟಾಗಿತ್ತು. ಆ ವರ್ಷ ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗಿರಲಿಲ್ಲ. ನಿಗಮದ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ನಿರಂತರ ಶ್ರಮವಹಿಸಿ ಎರಡು ದಿನದಲ್ಲೇ ನೀರಿನ ಪೋಲನ್ನು ತಡೆದಿದ್ದರು.

* ಸ್ಟಾಪ್ ಲಾಕ್ ಸಿಸ್ಟಮ್‌ :

ಬಸವಸಾಗರ ಜಲಾಶಯಕ್ಕೆ ಸ್ಟಾಪ್ ಲಾಕ್ ಸಿಸ್ಟಮ್‌ ಅಳವಡಿಸಿದ್ದು, ಕ್ರಸ್ಟ್ಗೇಟ್‌ನ ಹಿಂದೆ ಎಮರ್ಜೆನ್ಸಿ ತರ ಕಾರ್ಯನಿರ್ವಹಿಸುತ್ತದೆ. ಜಲಾಶಯದ ಮೇಲೆ 50 ಟನ್ ಸಾಮರ್ಥ್ಯದ ಹೊಸ ಹಳಿಯನ್ನು ಕ್ರೇನ್ ಮುಖಾಂತರ ನಿರ್ಮಿಸಿ ನೂತನ ಕ್ರಸ್ಟಗೇಟ್‌ನ್ನು ಅಳವಡಿಸುವ ಮೂಲಕ 2 ದಿನಗಳಲ್ಲಿಯೇ ನೀರಿನ ಪೋಲಾಗುವಿಕೆಯನ್ನು ತಡೆಯಲಾಗಿತ್ತು. ಭಾರಿ ಅನಾಹುತವನ್ನು ತಪ್ಪಿಸಲು ಅಧಿಕಾರಿಗಳು ನಿರಂತರ ಶ್ರಮಪಟ್ಟಿದ್ದರು. 2006 ರಲ್ಲಿ ಆಣೆಕಟ್ಟು ವಿಭಾಗದ ಅಧಿಕಾರಿಯಾಗಿ ಪ್ರಸ್ತುತ ಸಹಾಯಕ ಎಂಜಿನೀಯರಾದ ಆರ್.ಎಲ್. ಹಳ್ಳೂರ ಕಾರ್ಯನಿರ್ವಹಿಸಿದ್ದರು. - ನೀರಾವರಿ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಭೇಟಿ:

2006 ರಲ್ಲಿ ಜಲಾಶಯದ ಕ್ರಸ್ಟ್ಗೇಟ್ ಸಂಖ್ಯೆ 5 ಕಿತ್ತುಹೋದ್ದರಿಂದ ಆಗಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಾದ ಧರಂಸಿಂಗ್ ಕ್ಯಾಬಿನೆಟ್‌ನ ನೀರಾವರಿ ಮಂತ್ರಿಯಾಗಿದ್ದ ಖರ್ಗೆ ಜಲಾಶಯಕ್ಕೆ ಭೇಟಿ ನೀಡಿ ಪರಶೀಲಿಸಿದ್ದರು. ನೀರು ಪೋಲಾಗುತ್ತಿರುವುದರಿಂದ ನದಿ ಪಾತ್ರದ ರೈತರನ್ನು ಚಿಂತೆಗೀಡುಮಾಡಿತ್ತು. ಆದರೆ ಜಲಾಶಯದ ಗೇಟ್‌ನ್ನು ಸಿದ್ಧಪಡಿಸಲು ಕನಿಷ್ಠ ನಾಲ್ಕು ದಿನವಾದರೂ ಸಮಯ ಬೇಕು ಎಂದಿದ್ದ ಅಧಿಕಾರಿಗಳಿಗೆ ಆದಷ್ಟು ಬೇಗ ಗೇಟ್ ಸರಿಪಡಿಸಿ ಎಂದು ಸೂಚಿಸಿ ಗೇಟ್ ರಿಪೇರಿ ಆಗುವವರೆಗೂ ಅಲ್ಲಿಯೇ ವಾಸ್ತವ್ಯ ಹೂಡಿದ್ದರು.

ಅಧಿಕಾರಿಗಳು ನಿರಂತರ ಶ್ರಮವಹಿಸಿದ್ದರಿಂದ 2 ದಿನದಲ್ಲಿಯೇ ಗೇಟ್ ಸಿದ್ಧವಾಗಿತ್ತು. ಇದರಿಂದ ಕೃಷ್ಣಾ ಅಚ್ಚುಕಟ್ಟು ಭಾಗದ ರೈತರು ಹಾಗೂ ನದಿ ತೀರದ ಗ್ರಾಮಗಳ ಜನತೆ ನಿಟ್ಟುಸಿರು ಬಿಟ್ಟಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು