ಒಂದು ತಿಂಗಳಲ್ಲಿ ೨೮೫ ಗ್ರಾಂ. ಚಿನ್ನ, ೪೫ ಗ್ರಾಂ. ಬೆಳ್ಳಿ ವಶ

KannadaprabhaNewsNetwork |  
Published : Oct 12, 2025, 01:00 AM IST
ಒಂದು ತಿಂಗಳ ಅವಧಿಯುಲ್ಲಿ ೨೮೫ | Kannada Prabha

ಸಾರಾಂಶ

ಒಂದು ತಿಂಗಳ ಅವಧಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ೧೨ ಪ್ರಕರಣಗಳಲ್ಲಿ ೨೮೫ ಗ್ರಾಂ. ಚಿನ್ನಾಭರಣ, ೪೫ ಗ್ರಾಂ. ಬೆಳ್ಳಿ ಆಭರಣ ೧೦ ಬೈಕ್, ೨ ಕಾರು, ₹೫೫ ಸಾವಿರ ನಗದು ವಶಪಡಿಸಿಕೊಂಡು ೧೪ ಮಂದಿ ಆರೋಪಿಗಳು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಒಂದು ತಿಂಗಳ ಅವಧಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ೧೨ ಪ್ರಕರಣಗಳಲ್ಲಿ ೨೮೫ ಗ್ರಾಂ. ಚಿನ್ನಾಭರಣ, ೪೫ ಗ್ರಾಂ. ಬೆಳ್ಳಿ ಆಭರಣ ೧೦ ಬೈಕ್, ೨ ಕಾರು, ₹೫೫ ಸಾವಿರ ನಗದು ವಶಪಡಿಸಿಕೊಂಡು ೧೪ ಮಂದಿ ಆರೋಪಿಗಳು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಾಮರಾಜನಗರ ಉಪವಿಭಾಗ ವ್ಯಾಪ್ತಿಯಲ್ಲಿ ಏಳು, ಕೊಳ್ಳೇಗಾಲ ವಿಭಾಗದಲ್ಲಿ ನಡೆದ ಐದು ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ೧೪ ಆರೋಪಿಗಳನ್ನು ಬಂಧಿಸಿದ್ದು ಅವರಿಂದ ಸುಮಾರು, ₹೨೨ ಲಕ್ಷ ೨೩ ಸಾವಿರದ ಮುನ್ನೂರು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ೧೪ ಆರೋಪಿಗಳಲ್ಲಿ ಇಬ್ಬರು ಆರೋಪಿಗಳು ಬಾಲಾಪರಾಧಿಗಳಾಗಿದ್ದು ತಾಂತ್ರಿಕ ಕಾರಣದಿಂದ ಅವರ ಹೆಸರನ್ನು ಗೌಪ್ಯವಾಗಿಡಲಾಗಿದೆ ಎಂದರು.

ಆರೋಪಿಗಳನ್ನು ಬೆಂಗಳೂರಿನ ಮುಜಾಹಿದ್ ಖಾನ್, ಆಕಾಶ್, ಸಂತೋಷ್, ಚಂದ್ರು, ಯಳಂದೂರಿನ ತಾಲೂಕಿನ ಬೀಚನಹಳ್ಳಿಯ ಪ್ರವೀಣ್‌ಕುಮಾರ್, ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದ ಸಿದ್ದರಾಜು, ಹೊಂಗನೂರು ಗ್ರಾಮದ ಬಂಗಾರಸ್ವಾಮಿ, ಇದರಲ್ಲಿ ಅಭಿ, ವಿವೇಕ್, ತಲೆಮರೆಸಿಕೊಂಡಿದ್ದಾರೆ. ಸಂಘರ್ಷಕ್ಕೊಳಗಾದ ಬಾಲಕ ಚಂದನ್‌ಗೆ ನೋಟಿಸ್ ಜಾರಿ ಮಾಡಲಾಗಿದೆ. ಕಾಗಲವಾಡಿ ಗ್ರಾಮದ ಮುಬಾರಕ್, ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ನಟೇಶ್ ಎಂದು ಪತ್ತೆ ಹಚ್ಚಲಾಗಿದೆ ಎಂದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಹಲವಾರು ಕಳುವು ಪ್ರಕರಣಗಳು ದಾಖಲಾಗುತ್ತಿರುವ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲಾ ಠಾಣಾ ವ್ಯಾಪ್ತಿಯ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಕೆಲವು ಕಡೆ, ಅವೈಜ್ಞಾನಿಕ ಡಿವೈಡರ್‌ಗಳಿದ್ದು ಇವುಗಳಿಂದ ಆಗುವ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಡಗೂಡಿ ಒಂದು ತಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಳೊಂದಿಗೆ ಪರಿಶೀಲಿಸಿ ತೆರವುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಕೇಂದ್ರದಲ್ಲೂ ಕೆಲವು ಕಡೆ ಹಾಕಿರುವ ಹಮ್ಸ್‌ಗಳ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಶಾಂತಿಯುತ ವಿಸರ್ಜನೆಗೆ ಕ್ರಮ:

ಜಿಲ್ಲಾ ಕೇಂದ್ರದಲ್ಲಿ ವಿದ್ಯಾಗಣಪತಿ ಮಂಡಳಿಯಿಂದ ಪ್ರತಿಷ್ಠಾಪಿಸಿರುವ ಗಣಪತಿ ವಿಸರ್ಜನೆಯು ಅ. ೧೩ರಂದು ನಡೆಯಲಿದ್ದು ಶಾಂತಿಯತ ವಿಸರ್ಜನೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತೆಗೆ ಅಧಿಕಾರಗಳನ್ನೊಳಗೊಂಡ ೭೦೯ ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಹಾಗೂ ಹೊಸದಾಗಿ ಬ್ಲ್ಯಾಕ್ ಕಮಾಂಡ್ ತಂಡ ರಚಿಸಲಾಗಿದೆ. ೧೧೭ ಸಿಸಿ ಕ್ಯಾಮೆರಾ ಹಾಗೂ ತಾತ್ಕಾಲಿಕವಾಗಿ ೫೨ ಸಿಸಿ ಕ್ಯಾಮೆರಾಗಳನ್ನು ಆಯಕಟ್ಟಿನ ಸ್ಥಳದಲ್ಲಿ ಅಳವಡಿಸಲಾಗಿದೆ. ಭಾನುವಾರ ಸಂಜೆ ಪಥಸಂಚಲನ ನಡೆಸಲಾಗುವುದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕ್ರಮಕೈಗೊಳ್ಳಲಾಗಿದೆ ಎಂದರು.

ಡಿವೈಎಸ್ಪಿಗಳಾದ ಧರ್ಮೇಂದರ್, ಸ್ನೇಹ ರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌