ಕನ್ನಡಪ್ರಭ ವಾರ್ತೆ ಬೀದರ್
ಬೀದರ್‌ನ ಪ್ರತಾಪನಗರದ ಜೈ ಹನುಮಾನ್ ಮಂದಿರದ ಪ್ರಾಂಗಣದಲ್ಲಿ ದತ್ತಾತ್ರೇಯ ಭಜನಾ ಸಂಘ, ಮುಗುನೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೀದರ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಭಜನಾ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಎಲ್ಲರೂ ಸಮಯದ ಅಭಾವ ಎದುರಿಸುತ್ತಿದ್ದು, ಹಿರಿಯರಿಂದ ಕಿರಿಯರವರೆಗೂ ಮೊಬೈಲ್ ಲೋಕದಲ್ಲಿ ಮುಳುಗಿದ್ದಾರೆ. ಇದರಿಂದ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ನಿಧಾನವಾಗಿ ಮರೆಯಾಗುತ್ತಿವೆ. ಸಾಮೂಹಿಕ ಭಜನೆ ಹಾಗೂ ಭಕ್ತಿಗೆ ಬರಗಾಲ ಬಂದಿರುವುದು ವಿಷಾದನೀಯ ಎಂದರು.
ಹಾಸ್ಯ ಕಲಾವಿದ ಪ್ರಕಾಶ್ ಕುಲಕರ್ಣಿ ಮುಗುನೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಮನಸ್ಸಿನ ನೆಮ್ಮದಿ ಹಾಗೂ ಮಾನಸಿಕ ಸಂತೋಷವನ್ನು ಕಾಪಾಡಿಕೊಳ್ಳಬೇಕೆಂದರು.ವಿಶ್ವನಾಥ ಸಂಗೊಳಗಿ, ನೀಲಕಂಠರಾವ್ ಬಿರಾದಾರ, ರಾಜಕುಮಾರ ಹುಮನಾಬಾದ, ಅಶೋಕ ಹಳ್ಳಿಖೇಡ್, ಉದಯಕುಮಾರ ಮಾಸಿಮಾಡೆ ಹಾಗೂ ದೇವದಾಸ ಕುಲಕರ್ಣಿ, ಸಿದ್ದಪ್ಪ ಧನ್ನೂರೆ, ಆನಂದ ಧಾರವಾಡ, ರವಿ ಹಜ್ಜರಿಗೆ, ಧೂಳಪ್ಪ ಬಳತೆ, ಮಲ್ಲಯ್ಯ ಸ್ವಾಮಿ, ಸಂತೋಷ ಪಾಟೀಲ, ಗುರನಾಥ ಕಾಕನಾಳೆ, ಮಹಾಂತಯ್ಯ ಸ್ವಾಮಿ, ಜಯಪ್ರದಾ, ಈರಯ್ಯ ಸ್ವಾಮಿ, ರಾಜಕುಮಾರ ಸಂಗೊಳಗಿ, ಕಾಶಿನಾಥ ಕುಂಬಾರ ಭಾಗವಹಿಸಿದ್ದರು.