ಕೇಂದ್ರ ಸರ್ಕಾರದಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ಎರಡು ತಿಂಗಳ ಪಡಿತರ ಮಾಡಬೇಕಾಗಿದೆ. ಪಡಿತದಾರರು ಹೆಬ್ಬೆಟ್ಟನ್ನು ಎರಡುಬಾರಿ ಪಡೆಯಬೇಕಿರುವ ಕಾರಣ ವಿತರಕರಿಗೆ ಡಬಲ್ ಸಂಕಷ್ಟ ಎದುರಾಗಿದೆ. ಒಂದು ಬಾರಿಯೇ ಸರ್ವರ್ ಸಿಗದೆ ಜನರ ಹೈರಾಣರಾಗುತ್ತಿದ್ದರೆ, ಎರಡು ಬಾರಿ ಹೆಬ್ಬೆಟ್ಟು ಪಡೆಯಬೇಕಾದರೆ ಪಡಿತರ ವಿತರಕರ ಪಾಡು ಹೇಳ ತೀರದಾಗಿದೆ. ಈ ಸರ್ವರ್ ವ್ಯವಸ್ಥೆ ಬಲಪಡಿಸಲಿ ಎಂಬುದು ಕನ್ನಡಪ್ರಭದ ಕಳಕಳಿ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ರಾಜ್ಯಾದ್ಯಂತ ನ್ಯಾಯ ಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರದಾರರು ಕೆಲಸ ಬಿಟ್ಟು ಶಬರಿಯಂತೆ ಕಾದು ನಿಲ್ಲುವಂತಾಗಿದೆ. ಹೆಬ್ಬೆಟ್ಟು ಒತ್ತಿ, ಓಕೆ ಅಂದ ಬಳಿಕ ಪಡಿತರ ಪಡೆದು ಮನೆಗೆ ಹೋಗುವವರೆಗೂ ಜನರ ಪಾಡು ಹೇಳತೀರದಾಗಿದೆ. ಪಡಿತರ ಪಡೆಯಲು ಪಡಿತರದಾರರ ಹೆಬ್ಬೆಟ್ಟು ಕಡ್ಡಾಯ. ಸರ್ವರ್ ಇಲ್ಲದೆ ಹೆಬ್ಬೆಟ್ಟು ಹಾಕಂಗಿಲ್ಲ. ಸರ್ವರ್ ಇದ್ದರೂ ಸರ್ವರ್ ಸ್ಲೋನಿಂದ ಗಂಟೆ ಗಟ್ಟಲೆ ಹೆಬ್ಬೆಟ್ಟು ಹಾಕಲು ನಿಲ್ಲುವಂಥ ಸ್ಥಿತಿ ಎದುರಾಗಿದೆ, ಹೀಗಾಗಿ ಪಡಿತರದಾರರು ರಾಜ್ಯ ಸರ್ಕಾರ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.ತಾಲೂಕಿನ ಗ್ರಾಮಾಂತರ ಪ್ರದೇಶಗಳ ಬಹುತೇಕ ಹಳ್ಳಿಗಳಲ್ಲಿ ಸರ್ವರ್ ಸಮಸ್ಯೆ ಎದುರಾದರೆ ಇನ್ನೂ ಕೆಲವಡೆ ಸರ್ವರ್ ಸ್ಲೋನಿಂದ ಪಡಿತರ ಚೀಟಿದಾರರ ಪಾಡು ಹೇಳ ತೀರದಾಗಿದ್ದು, ತಿಂಗಳ ಆರಂಭದ ೧೫ ದಿನಗಳ ಕಾಲ ಸರ್ವರ್ ಸಮಸ್ಯೆ ಅಷ್ಟಾಗಿ ಇರುವುದಿಲ್ಲ. ತಿಂಗಳ ೧೫ರ ಬಳಿಕ ಸರ್ವರ್ ಸಮಸ್ಯೆ ಹಾಗೂ ಸರ್ವರ್ ಸ್ಲೋನಿಂದ ಜನರು ರೋಸಿ ಹೋಗುತ್ತಿದ್ದಾರೆ.
ಈ ತಿಂಗಳಲ್ಲಿ ಬುಧವಾರದ ತನಕ ಶೇ.೫೦ ರಷ್ಟು ಪಡಿತರ ವಿತರಣೆಯಾಗಿಲ್ಲ. ಇನ್ನುಳಿದ ಐದು ದಿನಗಳಲ್ಲಿ ಶೇ.೫೦ರಷ್ಟು ಹೆಬ್ಬೆಟ್ಟು ಹಾಕಿದ ಬಳಿಕ ಪಡಿತರ ವಿತರಣೆ ಆಗಬೇಕಿದೆ. ಇದು ಸಾಧ್ಯನಾ ಎಂಬ ಪ್ರಶ್ನೆ ಎದ್ದಿದೆ. ಪಡಿತರಕ್ಕಾಗಿ ಕಾದು ನಿಲ್ಲಬೇಕಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಪಡಿತರಕ್ಕಾಗಿ ಕಾಯುವ ಸಲುವಾಗಿ ಕೆಲಸಕ್ಕೆ ಹೋಗಲಾರದ ಕಾರಣ ಇತ್ತ ಕೂಲಿಯೂ ಸಿಗದೆ ಅಡಕತ್ತರಿಯಲ್ಲಿ ಜನರು ಸಿಲುಕಿದಂತಾಗಿದೆ.ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸರ್ವರ್ ಅವಾಂತರದ ನಿಜ ಸ್ಥಿತಿಯಾಗಿದೆ. ಸರ್ವರ್ ನರ್ವಸ್ ಆಗಿದ್ದು ಪಡಿತರದಾರರು ಅಂಗಡಿಗಳ ಮುಂದೆ ನಿಂತು ನಾಳೆ ಬಾ ಎನ್ನುವ ಸ್ಥಿತಿ ಬಂದಿದೆ.
ಬಯೋಮೆಟ್ರಿಕ್ ಆಧಾರಿತವಾಗಿಯೇ ಪಡಿತರ ವಿತರಣೆ ಅಂಗಡಿಗಳಲ್ಲಿ ಪಡಿತರ ವಿತರಣೆ ಕಡ್ಡಾಯವಾಗಿರುವ ಕಾರಣ ಈ ತಿಂಗಳಲ್ಲಿ ಇನ್ನೂ ಶೇ.೪೦ ರಷ್ಟು ಕಾರ್ಡ ದಾರರಿಗೆ ಪಡಿತರ ನೀಡಲು ಆಗಿಲ್ಲ.ಈ ತಿಂಗ್ಳು ಡಬಲ್ ಸಂಕಷ್ಟ: