ಕನ್ನಡಪ್ರಭ ವಾರ್ತೆ ಮೈಸೂರು
ಅಲ್ಲದೆ, ನಮಗೊಂದು ಮನೆ ಕೊಡಿ ಎಂದು ನಗರ ಮತ್ತು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು, ಪುರುಷರು ಮನವಿ ಮಾಡಿದರು.
ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಜನ ಸ್ಪಂದನ ಸಭೆಯು ನಾನಾ ಸಮಸ್ಯೆಗಳು ಅನಾವರಣಗೊಂಡಿತು. ದೂರದ ಊರುಗಳಿಂದ ಆಗಮಿಸಿದ ಜನರು ದೂರು ಸಲ್ಲಿಸಿ ಪರಿಹಾರಕ್ಕೆ ಕೋರಿದರು.ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಂದ ಆಗಮಿಸಿದ್ದ ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದರು. ಎಚ್.ಡಿ. ಕೋಟೆ ತಾಲೂಕಿನ ಜನರಿಂದ ಹೆಚ್ಚು ದೂರುಗಳು ಬಂದವು. ಕ್ರಯಪತ್ರ, ಪೌತಿ ಖಾತೆ, ಸ್ಮಶಾನಕ್ಕೆ, ಕುಡಿಯುವ ನೀರು, ರಸ್ತೆ, ಆಶ್ರಯ ನಿವೇಶನಕ್ಕೆ ಹೆಚ್ಚಿನ ದೂರುಗಳು ಸಲ್ಲಿಕೆಯಾದವು.
ಎಚ್.ಡಿ. ಕೋಟೆ ತಾಲೂಕಿನ ಜಕ್ಕಹಳ್ಳಿ ಗ್ರಾಪಂ ಸದಸ್ಯ ಸಿ. ಶಿವಣ್ಣ ಅವರು, ಸರ್ಕಾರಿ ಶಾಲೆಯ ಗೇಟ್ ದುರಸ್ತಿಪಡಿಸಿ. ಟ್ಯಾಂಕ್ ಗೆ ಕಲುಷಿತ ನೀರು ಶೇಖರಣೆ ಮಾಡಲಾಗುತ್ತಿದೆ. ಅಂಗನವಾಡಿ ಕಲುಷಿತ ವಾತಾವರಣದಲ್ಲಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಯಾವ ಮಾನದಂಡದಲ್ಲಿ ಗಾಂಧಿ ಪುರಸ್ಕಾರ ಕೊಡಲಾಗಿದೆ ಎಂದರು.
ಹಂಪಾಪುರ ಹೋಬಳಿ ಜಿ.ಪಿ. ಸರಗೂರು ಗ್ರಾಮದಲ್ಲಿ 3 ಎಕರೆಯನ್ನು ಅಕ್ರಮವಾಗಿ ಸಾಗುವಳಿ ಮಾಡಲಾಗಿದೆ. ಅಮಾಯಕರಿಗೆ ತೊಂದರೆ ಕೊಡುತ್ತಿದ್ದು, ಭೂ ಮಾಫಿಯಾ ಸದ್ದು ಮಾಡುತ್ತಿದೆ. ಬಿ ರಿಪೋರ್ಟ್ ಹಾಕಿದವರನ್ನು ಅಮಾನತು ಮಾಡಬೇಕೆಂದು ಸಚಿವರನ್ನು ಒತ್ತಾಯಿಸಿದರು. ತನಿಖೆಗೆ ಆದೇಶ ಮಾಡಿರುವುದಾಗಿ ಸಚಿವರು ಹೇಳಿದರು.
ಪರಿಹಾರಕ್ಕೆ ಇನ್ನೆಷ್ಟು ವರ್ಷ ಬೇಕು?
ಸಿನಿಮಾ ನಿರ್ಮಾಣಕ್ಕೆ ಅನುದಾನ ಕೊಡಿಸಿ
ಸಮುದಾಯ ಭವನಕ್ಕೆ ಕೋರಿಕೆ
ಸ್ಮಶಾನದಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಶವ ಹೂಳಲು ಕಷ್ಟವಾಗುತ್ತಿದೆ ಎಂದು ಸಚಿವರ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ಅರ್ಧ ಸಮಸ್ಯೆ ಈಗಾಗಲೇ ಬಗೆಹರಿದಿದೆ. ಇನ್ನರ್ಧ ಸಮಸ್ಯೆಯನ್ನು ಶೀಘ್ರ ಪರಿಹರಿಸುವುದಾಗಿ ತಿಳಿಸಿದರು.
ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ವಿಷ್ಣುವರ್ಧನ್, ನಗರ ಪಾಲಿಕೆ ಆಯುಕ್ತ ಶೇಖ್ ಅಸೀಪ್ ತನ್ವೀರ್ ಮೊದಲಾದವರು ಇದ್ದರು.-----
ಬಾಕ್ಸ್...ಗ್ಯಾರಂಟಿ ಸಿಎಂ ಆಗುತ್ತೇನಾ?
ಎಚ್.ಡಿ.ಕೋಟೆ ತಾಲೂಕಿನ ಎನ್. ಬೇಗೂರು ಗ್ರಾಮದ ನರಸಿಂಹಮೂರ್ತಿ ಅವರು ಭವಿಷ್ಯದಲ್ಲಿ ಮುಖ್ಯಮಂತ್ರಿ ಆಗಲಿರುವ ಮಹದೇವಪ್ಪ ಅವರು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ. ಮಹದೇವಪ್ಪ ಅವರು, ಗ್ಯಾರಂಟಿ ಸಿಎಂ ಆಗುತ್ತೇನಾ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳಾಗುವ ಎಲ್ಲಾ ಅರ್ಹತೆಗಳು ತಮಗಿವೆ ಎಂದು ನರಸಿಂಹಮೂರ್ತಿ ಹೇಳಿದರು. ಈ ವೇಳೆ ಸಚಿವರು ಖುಷಿಯಲ್ಲಿ ಸಭೆ ಮುಂದುವರೆಸಿದರು.