ಕನ್ನಡಪ್ರಭ ವಾರ್ತೆ ಬೆಂಗಳೂರು
ಮಹಿಳಾ ದಿನಾಚರಣೆ ಅಂಗವಾಗಿ ವಿಚಾರ ಸಂಕಿರಣ, ಕಾರ್ಯಗಾರ, ಸಂಗೀತ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಿಳಾ ದಿನಾಚರಣೆ ಮೆರಗನ್ನು ಹೆಚ್ಚಿಸಲಾಯಿತು.
ನಗರದ ಸ್ತ್ರೀ ಜಾಗೃತಿ ಕನ್ನಡ ಮಾಸಪತ್ರಿಕೆಯು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಆರ್‌ಎಸ್‌ಎಸ್‌ನ ಮಧ್ಯಕ್ಷೇತ್ರ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಭಾರತೀಯ ಸಂಸ್ಕೃತಿಗೆ ಸಂಸ್ಕಾರವೇ ಮೂಲವಾಗಿದೆ. ಪುರಾತನ ಕಾಲದಿಂದಲೂ ಸಂಸ್ಕಾರಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ ಎಂದರು.ಇನ್ನೂ ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರದ ಅಗತ್ಯತೆಯ ಪ್ರಸ್ತುತತೆ ಹಾಗೂ ಭಾರತೀಯತೆಯಲ್ಲಿ ಸಂಸ್ಕಾರ ಮತ್ತು ಮಹಿಳೆ ಎಂಬ ವಿಷಯದ ಕುರಿತು ಸಂಸ್ಕಾರ ಭಾರತೀಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಎಂ.ಎ.ರಾಮಚಂದ್ರ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ, ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ, ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ನಾಗೇಂದ್ರ ಎಫ್. ಹೊನ್ನಳ್ಳಿ ಇದ್ದರು.
ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದಿಂದ ನಗರದ ಕಾನಿಷ್ಕ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯನ್ನು ಅದರ ಅಧ್ಯಕ್ಷ ಡಾ.ಎಂ ವೆಂಕಟಸ್ವಾಮಿ ಉದ್ಘಾಟಿಸಿ ಮಾತನಾಡಿ, ಜಗತ್ತಿನಲ್ಲಿ ಪುರುಷ ಮತ್ತು ಮಹಿಳೆ ಸಮಾಜದ 2 ಕಣ್ಣುಗಳಿದಂತೆ. ಧರ್ಮ, ದೇವರ ಹೆಸರಲ್ಲಿ ನಡೆಯುವ ಮೂಢನಂಬಿಕೆ ಬಿಟ್ಟು ಶಿಕ್ಷಣವಂತರಾಗಬೇಕು. ಸಂವಿಧಾನ ಮಹಿಳೆಯರಿಗೆ ಮತದಾನ, ಸಮಾನ ಹಕ್ಕು, ಕರ್ತವ್ಯಗಳನ್ನು ನೀಡಿದೆ ಎಂದರು.
ಕಲಾಪ್ರೇಮಿ ಫೌಂಡೇಷನ್ ಮಲ್ಲೇಶ್ವರ ಸೇವಾ ಸದನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿಶೇಷ ಸಂಜೆ ಕಾರ್ಯಕ್ರಮ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ವಿದುಷಿ ಸಂಗೀತ ಕಲಾಭೂಷಣ ಮಾಲತಿ ಸಿಂಗಲಾಚಾರ್ ಆಗಮಿಸಿದ್ದರು. ಗಾಯಕರಾದ ಅರ್ಚನಾ, ಸಮನ್ವಿ, ದೀಪಿಕಾ ಶ್ರೀನಿವಾಸ್ (ಮೃದಂಗ), ಸಿ.ವಿ.ಶ್ರುತಿ (ವಯೋಲಿನ್) ಸೇರಿದಂತೆ ಮೊದಲಾದವರಿದ್ದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನಿಂದ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಪ್ತಗಿರಿ ವಿವಿಯ ಉಪ ಕುಲಪತಿ ಡಾ.ಜಯಂತಿ, ಮಹಿಳೆಯರಿಗೆ ಪುರಾತನ ಕಾಲದಿಂದ ಮಹತ್ವದ ಸ್ಥಾನವಿದ್ದು, ಮಹಿಳೆ 2 ಮುಖಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಪುರುಷನಾಗಿಯೂ ಕಾರ್ಯನಿರ್ವಹಣೆ ಮಾಡುತ್ತಿದ್ದಾಳೆ. ಕುಟುಂಬದಿಂದ ಸಮಾಜದ ನಿರ್ವಹಣೆವರೆಗೂ ತನ್ನದೇ ಆದ ಸ್ಥಾನಮಾನ ಹೊಂದಿದ್ದಾಳೆ ಎಂದರು.
ಸುರ್ವೆ ಕಲ್ಬರಲ್ ಅಕಾಡೆಮಿಯಿಂದ ಸಂಭ್ರಮ