ಡಿಸಿ ಕಚೇರಿ ಮುಂಭಾಗ ಓಬಣ್ಣನಹಳ್ಳಿ ಜನರ ಆರ್ತನಾದ

KannadaprabhaNewsNetwork | Published : Aug 22, 2024 12:48 AM

ಸಾರಾಂಶ

"ಡಿಸಿ, ಎಂಎಲ್ ಎ ನಮ್ಮನ್ನು ಮನುಷ್ಯರು ಅಂತ ಅಂದ್ಕಂಡಿಲ್ಲವೇನೋ, ಮಳೆ, ಚಳಿ ಗಾಳಿ ಲೆಕ್ಕಿಸದೇ ಬದುಕುತ್ತಿದ್ದೇವೆ. ಊರು ಮುಳುಗಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸ್ಕೂಲ್, ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದೇವೆ. ನಮ್ಮ ಕಷ್ಟ ಕೇಳೋಕೆ ಯಾಕೆ ಬಂದಿಲ್ಲ ಅಂತ ಅವರನ್ನೇ ಕೇಳಿ ಹೋಗೋಕೆ ದುರ್ಗಕ್ಕೆ ಬಂದಿದ್ದೇವೆ ". ಇವು ಚಿತ್ರದುರ್ಗ ತಾಲೂಕಿನ ಓಬಣ್ಣನಹಳ್ಳಿ ಗ್ರಾಮದ ಮಹಿಳೆಯರ ನೋವಿನ ನುಡಿಗಳು. ಮಳೆ ಬಂದು ಬದುಕು ಮುಳುಗಿ ಮೂರು ದಿನವಾಯ್ತು. ತಹಸಿಲ್ದಾರ್ ಕಾಟಾಚಾರಕ್ಕೆ ಭೇಟಿ ನೀಡಿ ಹೋದವರು ಮತ್ತೆ ಬಂದೇ ಇಲ್ಲ. ಭೋವಿ ಸ್ವಾಮೀಜಿ ಪ್ರತಿ ಮನೆಗಳಿಗೆ ಭೇಟಿ ನೀಡಿ ನಾವಿದ್ದೇವೆ, ಭಯಪಡದಿರಿ ಎಂದು ಹೇಳಿ ಧವಸ ಧಾನ್ಯ ಕೊಟ್ಟಿದ್ದಾರೆ. ಸ್ವಾಮೀಜಿಗಳಿಗೆ ನಾವು ಬೇಕು, ಸರ್ಕಾರಕ್ಕೆ ಬೇಡವಾ ಎಂದು ಪ್ರಶ್ನಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಮಳೆಯಿಂದಾಗಿ ಅನೇಕ ಮನೆಗಳು ಜಲಾವೃತಗೊಂಡು ಹಾನಿಗೊಳಗಾಗಿವೆ. ಮನೆಯಲ್ಲಿ ಯಾವ ವಸ್ತುವೂ ಉಳಿದಿಲ್ಲ. ಎಲ್ಲವು ನೀರು ಪಾಲಾಗಿದೆ. ನಿಲ್ಲಲು ನೆಲೆ ಇಲ್ಲ, ಉಡಲು ಬಟ್ಟೆ ಇಲ್ಲ, ತಿನ್ನೋಕೆ ಸ್ವಾಮಿಗಳು ಕೊಟ್ಟ ಅಕ್ಕಿ ಬಿಟ್ರೆ ಏನೂ ಇಲ್ಲ. ಮನೆಯಲ್ಲಿ ಮಕ್ಕಳ ಪುಸ್ತಕ ನೀರಿನಲ್ಲಿ ಕೊಚ್ಚಿ ಹೋಗಿದೆ. ಸ್ಕೂಲ್ ಟೀಚರ್ ಬಂದು ನಮಗೆ ಸೀರೆ ಕೊಟ್ಟಿದ್ದಾರೆ. ಸೌಭಾಗ್ಯ ಬಸಣ್ಣ ಬಂದು ಲಕ್ಷ ರು. ಕೊಟ್ಟು ಏನಾದ್ರೂ ತಗಳಿ ಅಂದಿದ್ದಾರೆ. ಮಳೆ ಬಂದ ನಂತರ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಖಾಯಿಲೆ ಬರ್ತಾವಾ ಅಂತ ಭಯವಾಗಿದೆ ಎಂದು ಮಹಿಳೆಯರು ಗೋಳು ತೋಡಿಕೊಂಡರು.ಊರ ತುಂಬಾ ಎಸ್ಸಿ, ಎಸ್ಟಿ ಕುಟುಂಬಗಳೇ ಜಾಸ್ತಿ ಇವೆ. ಎಲ್ಲರೂ ಕಡು ಬಡವರೇ. ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದೇವೆ. ಮಳೆ ಬಂದು ಬದುಕು ಕೊಚ್ಚಿ ಹೋಗಿದೆ. ಅಧಿಕಾರಿಗಳು ಆಫೀಸಲ್ಲಿ ಕುಳಿತುಕೊಂಡು ಆರಾಮವಾಗಿ ಮೀಟಿಂಗ್ ಮಾಡ್ತಿದ್ದಾರೆಂದು ಗ್ರಾಮಸ್ಥರು ಅಸಮಧಾನ ಹೊರ ಹಾಕಿದರು.

Share this article