ಕಾನೂನಿನಲ್ಲಿ ಪುರುಷ, ಮಹಿಳೆ ಇಬ್ಬರು ಒಂದೇ

KannadaprabhaNewsNetwork | Published : Mar 17, 2025 12:33 AM

ಸಾರಾಂಶ

ಹೊಸಕೋಟೆ: ಕಾನೂನಿನಲ್ಲಿ ಮಹಿಳೆ ಪುರುಷರೆಂಬ ಬೇಧಬಾವವಿಲ್ಲದೆ ಇಬ್ಬರಿಗೂ ಸಮಾನ ಹಕ್ಕಿದೆ. ಇದನ್ನರಿತು ಮಹಿಳೆಯರು ಸಮಾಜದ ಎಲ್ಲಾ ರಂಗಗಳಲ್ಲಿ ಸದೃಢವಾಗಿ ಮುನ್ನೆಲೆಗೆ ಬರಲು ಸಹಕಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ತಿಳಿಸಿದರು.

ಹೊಸಕೋಟೆ: ಕಾನೂನಿನಲ್ಲಿ ಮಹಿಳೆ ಪುರುಷರೆಂಬ ಬೇಧಬಾವವಿಲ್ಲದೆ ಇಬ್ಬರಿಗೂ ಸಮಾನ ಹಕ್ಕಿದೆ. ಇದನ್ನರಿತು ಮಹಿಳೆಯರು ಸಮಾಜದ ಎಲ್ಲಾ ರಂಗಗಳಲ್ಲಿ ಸದೃಢವಾಗಿ ಮುನ್ನೆಲೆಗೆ ಬರಲು ಸಹಕಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ತಿಳಿಸಿದರು.

ನಗರದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಸ್ತ್ರೀಯರನ್ನು ಪೂಜನೀಯ ಮನೋಭಾವದಿಂದ ಕಾಣುತ್ತಿದ್ದು ಪ್ರತಿಯೊಬ್ಬರು ಮಹಿಳೆಯರಿಗೆ ಗೌರವ ಸ್ಥಾನಮಾನ ಕಲ್ಪಿಸಿಕೊಡಬೇಕು ಎಂದರು.

ಅಪರ ಸಿವಿಲ್ ನ್ಯಾಯಾಧೀಶೆ ಚೈತ್ರ ವಿ.ಕುಲಕರ್ಣಿ ಸಮಾಜದಲ್ಲಿ ಮಹಿಳೆ ಸಾಧನೆ ಮಾಡುತಿದ್ದರೆ ಅದಕ್ಕೆ ಕಾರಣ ಪುರುಷರು ಅವರ ಬೆನ್ನೆಲುಬಾಗಿರುತ್ತಾರೆ. ಒಬ್ಬ ಮನುಷ್ಯನ ಗುಣಗಳಲ್ಲಿ ಸ್ತ್ರೀ ಹಾಗೂ ಪುರುಷನ ಗುಣವಿರುತ್ತದೆ. ಸ್ತ್ರೀಯನ್ನು ಗೌರವಿಸುವ ಜಾಗದಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತಿನಂತೆ ಸಮಾಜದಲ್ಲಿ ಎಲ್ಲರನ್ನು ಗೌರವಿಸುವುದು ಬಹಳ ಮುಖ್ಯ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶಿವಮ್ಮ ಮಾತನಾಡಿ, ಹಿಂದಿನ ಕಾಲದಿಂದಲೂ ಮೈಳೆಯರು ಸಾಧನೆ ಮಾಡಿಕೊಂಡು ಬಂದಿದ್ದಾರೆ. ಅದಕ್ಕೆ ಕಾರಣ ಅವರ ಕುಟುಂಬ, ಮಹಿಳೆ ಮುಂದುವರೆಯಬೇಕಾದರೆ ಮೊದಲು ಕುಟುಂಬದವರು ಅವಕಾಶ ನೀಡಬೇಕು. ಆ ಅವಕಾಶಗಳನ್ನು ಬಲಸಿಕೊಂಡು ಮಹಿಳೆ ಸಾಧನೆಗೆ ಮುಂದಾಗಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ತಾಯಿ, ಸೋದರಿ, ಮಡದಿ, ಮಗಳು, ಸಹೊದ್ಯೋಗಿ ಹೀಗೆ ನಮ್ಮ ಜೀವನದಲ್ಲಿ ಎಲ್ಲಾ ಭಾಗದಲ್ಲಿ ಮಹಿಳೆಯರು ನಮ್ಮ ಅಕ್ಕ ಪಕ್ಕದಲ್ಲಿರುತ್ತಾರೆ, ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಈ ಕಾರ್ಯಕ್ರಮದಲ್ಲಿ ಮಹಿಳಾ ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ನ್ಯಾಯಾಲಯ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ನ್ಯಾಯಾಲಯದ ವತಿಯಿಂದ ಸಿಬ್ಬಂದಿಗೆ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಜಂಟಿ ಕಾರ್ಯದರ್ಶಿ ಆನಂದ್, ಖಜಾಂಚಿ ರುಕ್ಮಿಣಿ, ಸರ್ಕಾರಿ ಅಭಿಯೋಜಕಿ ನಿರ್ಮಲಾ ಕುಮಾರಿ, ಕಾವ್ಯಶ್ರೀ, ಸ್ತ್ರೀ ರೋಗ ತಜ್ಞೆ ಡಾ ಶಾಂತಿ, ಆರಕ್ಷಕ ಉಪ ನಿರೀಕ್ಷಕಿ ವರಲಕ್ಷ್ಮಮ್ಮ ಭಾಗವಹಿಸಿದ್ದರು.

ಫೋಟೋ: 16 ಹೆಚ್‌ಎಸ್‌ಕೆ 1

ಹೊಸಕೋಟೆಯ ನ್ಯಾಯಾಲಯದ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತಿದ್ದ ಮಹಿಳೆಯರನ್ನು ನ್ಯಾಯಾಧೀಶರು ಹಾಗೂ ವಕೀಲರು ಸನ್ಮಾನಿಸಿ ಗೌರವಿಸಿದರು.

Share this article