ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸ್ಪರ್ಶ್ ಮತ್ತು ಮಹಿಳಾ ಸಬಲೀಕರಣ ಸಮಿತಿ ಹಾಗೂ ಐಕ್ಯೂಎಸಿನಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ‘ಸ್ವತಂತ್ರದೊಂದಿಗೆ ಆಧುನಿಕ ಜಗತ್ತನ್ನು ಮುನ್ನಡೆಸುವುದು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಮತ್ತು ಆತ್ಮರಕ್ಷಣಾ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಆಧುನಿಕ ಜಗತ್ತಿನಲ್ಲಿ ಮಹಿಳೆಯರ ಸ್ವಾತಂತ್ರ್ಯವು ಕೇವಲ ಹಕ್ಕಲ್ಲ, ಅದು ಸಮಾಜದ ಪ್ರಗತಿಯ ಅಡಿಪಾಯ. ಮಹಿಳೆಯರು ದಯೆ ಮತ್ತು ಮಾನವೀಯತೆಯೊಂದಿಗೆ ತಮ್ಮ ಸ್ವಾತಂತ್ರ್ಯವನ್ನು ಚಲಾಯಿಸಿದಾಗ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದರು.ಮಹಿಳೆಯರಿಗೆ ಆತ್ಮರಕ್ಷಣಾ ಕಲಿಕೆಯ ಮಹತ್ವದ ಬಗ್ಗೆ ಒತ್ತಿ ಹೇಳಿದ ಅವರು, ಇದು ಕೇವಲ ದೈಹಿಕ ಕಸರತ್ತಲ್ಲ, ಬದಲಾಗಿ ಆತ್ಮರಕ್ಷಣೆ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದೆ ಎಂದು ವಿವರಿಸಿದರು.
ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಸಂಯೋಜಕ ರಾಧಿಕಾ ರಾಣಿ, ಪ್ರಮುಖರಾದ ಎನ್.ಜಿ. ರೆನ್ಸಿ ಶಿವದಾಸ್, ಎಸ್. ಮಿಸ್ ಪೂಜಾ, ಎಸ್. ಗೌತಮ್, ವಿಳಿ ರಂಜಿತ್ ಮತ್ತು ಸಿ. ಮಿಸ್ ಖುಷಿ ಹಾಗೂ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಇದ್ದರು.ಚಿತ್ತ ಚಿಲುಮೆ ಕವನ ಸಂಕಲನ ಬಿಡುಗಡೆ
ಟಿ. ನರಸೀಪುರ ತಾಲೂಕು ಕೇತೂಪುರದ ಕನ್ನಡ ಭಾಷಾ ಶಿಕ್ಷಕಿ ಎಂ.ಸಿ. ಮಂಜುಳಾ ಅವರು ಬರೆದ ಚಿತ್ತ ಚಿಲುಮೆ ಕವನ ಸಂಕಲನವನ್ನು ಲೇಖಕ ಜಯಪ್ಪ ಹೊನ್ನಾಳಿ ಬಿಡುಗಡೆಗೊಳಿಸಿದರು.ವಿಶ್ವ ಕನ್ನಡ ಕಲಾಸಂಸ್ಥೆ ಅಧ್ಯಕ್ಷ ರವೀಶ್ ಅಕ್ಕರ, ಬಿ. ಶೃಂಗೇಶ್ವರ್, ಕಸಾಪ ಸಂಘಟನ ಕಾರ್ಯದರ್ಶಿ ಸಮ್ಮೇಳನ ಅಧ್ಯಕ್ಷರು ಹಾಗೂ ಸಾಹಿತಿ ಮಾಲತಿ ಮೇಲುಕೋಟೆ ಮೊದಲಾದವರು ಇದ್ದರು.