ಕನ್ನಡಪ್ರಭ ವಾರ್ತೆ, ದಾವಣಗೆರೆ
ಮುಖ್ಯ ಅತಿಥಿಗಳಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ವಿಪ ಸದಸ್ಯ ಡಿ.ಎಸ್.ಅರುಣ್, ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಅಧ್ಯಕ್ಷ ಚನ್ನಗಿರಿ ವಿರೂಪಾಕ್ಷಪ್ಪ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ವಿಪ ಸದಸ್ಯ ಟಿ.ಎ. ಶರವಣ, ಡಾ. ಜೆ.ವಿ. ನಂದನಕುಮಾರ, ಕೆ.ಎಲ್. ರವೀಂದ್ರನಾಥ ಶ್ರೇಷ್ಠಿ, ಎಚ್.ಆರ್. ಕಾಶಿವಿಶ್ವನಾಥ ಶ್ರೇಷ್ಠಿ, ಎಲ್.ಜೆ. ರಾಧಾಕೃಷ್ಣ ಶ್ರೇಷ್ಠಿ, ಸಂಘದ ಅಧ್ಯಕ್ಷ ಕೆ.ಎಸ್. ರುದ್ರಶ್ರೇಷ್ಠಿ ಭಾಗವಹಿಸುವರು. ಸಂಜೆ 5.30 ರಿಂದ ಶ್ರೀ ಕಲಾಂಜಲಿ ಕಲಾ ಟ್ರಸ್ಟ್ ಬಳ್ಳಾರಿ ಅವರಿಂದ ಶ್ರೀನಿವಾಸ ಕಲ್ಯಾಣ ನಾಟಕ ಪ್ರದರ್ಶನಗೊಳ್ಳಲಿದೆ.
ಆ. 29 ರಂದು ಬೆಳಗ್ಗೆ 11.30ಕ್ಕೆ ಸಮಾರೋಪ ಸಮಾರಂಭ ರಾಮಕೃಷ್ಣ ಮಿಷನ್‌ನ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಕೆ.ಎಸ್. ರುದ್ರಶ್ರೇಷ್ಠಿ ಅಧ್ಯಕ್ಷತೆ ವಹಿಸಲಿದ್ದು, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ನಿರ್ದೇಶಕ ಆರ್.ಗಿರೀಶ್ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಘದ ಮಾಜಿ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಶ್ರೇಷ್ಠಿ, ವೈ.ಅನಂತ ಶ್ರೇಷ್ಠಿ, ಬಿ.ಎಚ್. ಕೃಷ್ಣಮೂರ್ತಿ ಶ್ರೇಷ್ಠಿ, ಎಸ್.ನಾಗರಾಜ ಶ್ರೇಷ್ಠಿ, ಯುಟಿಐ ಮಂಜುನಾಥ, ಎಚ್.ವಿ.ರಮೇಶ, ಡಿ.ವಿ.ಸುಧೀಂದ್ರ ಗುಪ್ತ, ಎಸ್.ಆರ್. ಮಂಜುನಾಥ, ಡಿ.ವಿ.ನಾಗರಾಜ ಗುಪ್ತ, ಎಸ್.ಟಿ.ಲಕ್ಷ್ಮಣ, ಬಿ.ಎಚ್.ಭಾಸ್ಕರ ಶ್ರೇಷ್ಠಿ, ಮೀನಾಕ್ಷಮ್ಮ, ಶ್ರೀಧರ ಶ್ರೇಷ್ಠಿ ಮತ್ತಿತರರು ಭಾಗವಹಿಸುವರು.