ಕನ್ನಡಿಗನ ನೇತೃತ್ವದಲ್ಲಿ ರಚಿಸಿದ ಹುಲಿ ರಕ್ಷಣಾ ಕಮಾಂಡೋ ಪಡೆ ಉದ್ಘಾಟನೆ

KannadaprabhaNewsNetwork |  
Published : Nov 22, 2026, 02:15 AM IST
ಅರುಣಾಚಲ ಪ್ರದೇಶದಲ್ಲಿ ಕನ್ನಡಿಗ ಐಎಫ್‌ಎಸ್ ಅಧಿಕಾರಿ ಡಾ. ಎ.ಟಿ. ದಾಮೋದರ ಅವರು ರಚಿಸಿದ ಹುಲಿ ರಕ್ಷಣಾ ಕಮಾಂಡೋ ಪಡೆ. | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುಮತಿ, ಪ್ರಾಯೋಜಕತ್ವ ಮತ್ತು ನಿರ್ದೇಶನದ ಮೂಲಕ ಈ ಕಮಾಂಡೋ ಕಾರ್ಯಪಡೆಯನ್ನು ರಚಿಸುವ ನೇತೃತ್ವವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದಾಮೋದರ ಎ.ಟಿ. ಅವರಿಗೆ ಅರುಣಾಚಲ ಪ್ರದೇಶದ ಸರ್ಕಾರ ವಹಿಸಿಕೊಟ್ಟಿತ್ತು.

ಭಟ್ಕಳ: ಅರುಣಾಚಲ ಪ್ರದೇಶದ ಇಟಾ ನಗರದಲ್ಲಿ ಕನ್ನಡಿಗ ಐಎಫ್‌ಎಸ್ ಅಧಿಕಾರಿ ಡಾ. ಎ.ಟಿ. ದಾಮೋದರ ನಾಯ್ಕ ಅವರ ನೇತೃತ್ವದಲ್ಲಿ ರಚಿಸಿದ ಅತಿ ದೊಡ್ಡ ಹುಲಿ ರಕ್ಷಣಾ ಕಮಾಂಡೊ ಪಡೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದರು.

ಕೇಂದ್ರ ಸರ್ಕಾರದ ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುಮತಿ, ಪ್ರಾಯೋಜಕತ್ವ ಮತ್ತು ನಿರ್ದೇಶನದ ಮೂಲಕ ಈ ಕಮಾಂಡೋ ಕಾರ್ಯಪಡೆಯನ್ನು ರಚಿಸುವ ನೇತೃತ್ವವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದಾಮೋದರ ಎ.ಟಿ. ಅವರಿಗೆ ಅರುಣಾಚಲ ಪ್ರದೇಶದ ಸರ್ಕಾರ ವಹಿಸಿಕೊಟ್ಟಿತ್ತು.

ಅರುಣಾಚಲ ಪ್ರದೇಶದ ಭಾರತ ಚೀನಾ ಗಡಿ ಭಾಗದ ಹಿಮ ಪರ್ವತಗಳಲ್ಲಿ ನಿರಂತರವಾಗಿ ಸಾಗುತ್ತಿದ್ದ ಹುಲಿ ಬೇಟೆಯಾಡುವ ಬೇಟೆಗಾರರನ್ನು ಹಿಡಿದು ಹೆಡೆಮುರಿ ಕಟ್ಟಿದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ 2022ರ ಜುಲೈಯಿಂದ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದ ಐಎಫ್‌ಎಸ್‌ ಅಧಿಕಾರಿ ದಾಮೋದರ ನಾಯ್ಕ ಅವರು ತಮ್ಮ ನಾಲ್ಕು ವರ್ಷಗಳ ಅವಿರತ ಪರಿಶ್ರಮದ ಮೂಲಕ ಈ ಸಾಧನೆಯನ್ನು ಮಾಡಿ ಭಾರತ ವಿಶ್ವದಲ್ಲೇ ಹುಲಿಗಳ ಸಂರಕ್ಷಣೆಗಾಗಿ ಮಹತ್ವದ ಅತ್ಯುನ್ನತ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.

ಪ್ರಸ್ತುತ ಈ ಹುಲಿ ಸಂರಕ್ಷಣಾ ಕಮಾಂಡೋ ಕಾರ್ಯಪಡೆಯಲ್ಲಿ 438 ಹುಲಿ ಸಂರಕ್ಷಣಾ ಕಮಾಂಡೋ ಗಾರ್ಡ್‌ಗಳನ್ನು ನೇಮಕಾತಿ ಮಾಡಲಾಗಿದೆ. ದೇಶದ ಮೊಟ್ಟ ಮೊದಲ ಬಾರಿಗೆ ಒಟ್ಟು ನೇಮಕಾತಿ ಸಂಖ್ಯೆಯ ಸರಿಸುಮಾರು ಅರ್ಧದಷ್ಟು ಮಹಿಳಾ ಹುಲಿ ಸಂರಕ್ಷಣಾ ಕಮಾಂಡೋ ಗಾರ್ಡ್‌ಗಳಿರುವುದು ವಿಶೇಷವಾಗಿದೆ.

ಲಕ್ಷದ್ವೀಪದಲ್ಲಿ 5 ವರ್ಷಗಳ ಕಾಲ ಪ್ರಧಾನ ಮುಖ್ಯ ವನ್ಯಜೀವಿ ಪರಿಪಾಲಕ ಹುದ್ದೆಯ ಜತೆಗೆ 9 ವಿವಿಧ ವಿಭಾಗಗಳ ಪ್ರಧಾನ ಕಾರ್ಯದರ್ಶಿಯಾಗಿ, ಲಕ್ಷದ್ವೀಪದ ಮನಮೋಹಕ ಸಮುದ್ರೀಯ ಪ್ರವಾಸಿ ಸೌಂದರ್ಯ ಮತ್ತು ವ್ಯವಹಾರಿಕಾ ಮೀನುಗಾರಿಕ ಸಂಪತ್ತನ್ನು ವಿಶ್ವ ಸ್ತರದ ಮಾರುಕಟ್ಟೆಗೆ ಕೊಂಡೊಯ್ದು ಪ್ರಧಾನಿ ನರೇಂದ್ರ ಮೋದಿಯವರ ಪ್ರಶಂಸೆಗೆ ಪಾತ್ರರಾಗಿದ್ದ ಕನ್ನಡದ ಹೆಮ್ಮೆಯ ಅಧಿಕಾರಿ ಡಾ. ಎ.ಟಿ. ದಾಮೋದರ ನಾಯ್ಕ ಅವರು 2022ರ ಜುಲೈಯಿಂದ ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು ಎನ್ನುವುದು ಹೆಮ್ಮೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀರೇಶ್ವರ ಸಂಸ್ಥೆಗೆ ಎಕ್ಸಲೆನ್ಸ್ ಇನ್ ಬಿಸಿನೆಸ್ ಗ್ರೋತ್ ರಾಷ್ಟ್ರೀಯ ಗೌರವ
ಬಸವಣ್ಣನವರ ಅವಹೇಳನ: ಅಥಣಿಯಲ್ಲಿ ಆಕ್ರೋಶ