ಕನ್ನಡಪ್ರಭ ವಾರ್ತೆ ಹಲಗೂರು
ಬಳಿಕ ಮಾತನಾಡಿದ ಶಾಸಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲಂತಸ್ತಿನ ಹೆಚ್ಚುವರಿ ಸುಸಜ್ಜಿತ ಕೊಠಡಿಗಳ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಿದೆ ಎಂದರು.
ಸಂಜೆ 5 ನಂತರ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಯಾವುದೇ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಇದರಿಂದ ಬಹಳಷ್ಟು ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುತ್ತಿದ್ದರು. ಹೀಗಾಗಿ ಜನತೆಯ ಆರೋಗ್ಯ ದೃಷ್ಟಿಯಿಂದ ಶೀಘ್ರ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಆರಂಭಿಸಿ ವರ್ಷದೊಳಗೆ ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು ಎಂದರು.ಹಲಗೂರು ಗ್ರಾಪಂನ ಪೌರಕಾರ್ಮಿಕರಿಗೆ ನಿವೇಶನ ಮತ್ತು ವಸತಿ ಸಮಸ್ಯೆ ಬಗ್ಗೆ ಪೌರ ಕಾರ್ಮಿಕ ಸಿಬ್ಬಂದಿ ಶಾಸಕರಿಗೆ ತಿಳಿಸಲಾಗಿ ನಿವೇಶನ ಮತ್ತು ವಸತಿಗೆ ಈಗಾಗಲೇ ಸ್ಥಳವನ್ನ ಗುರುತಿಸಲಾಗಿದೆ. ಶೀಘ್ರ ನಿವೇಶನ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಶ್ರೀರಂಗಪಟ್ಟಣ:ಕರ್ನಾಟಕ ರಕ್ಷಣಾ ವೇದಿಕೆ ಮಾಜಿ ಅಧ್ಯಕ್ಷ ಕೆ.ಬಿ.ಬಸವರಾಜು ಅವರನ್ನು ಪಟ್ಟಣ ಪುರಸಭೆ ನಾಮನಿರ್ದೇಶನ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಕರವೇ ಮತ್ತು ಕಸಾಪ ಅಧ್ಯಕ್ಷರಾಗಿ ಜೊತೆಗೆ ಹಲವು ಹೋರಾಟಗಳಲ್ಲಿ ಭಾಗವಹಿಸಿರುವ ಬಸವರಾಜು ಅವರನ್ನು ಶಾಸಕ ರಮೇಶ ಬಂಡಿಸಿದ್ದೇಗೌಡರ ಶಿಫಾರಸ್ಸಿನ ಮೇರೆಗೆ ಸರ್ಕಾರ ಪುರಸಭೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ಇವರ ಜೊತೆ ಗಂಜಾಂನ ಪ್ರದೀಪ, ಪಟ್ಟಣದ ಕುಪ್ಪಣ್ಣ ಗರಡಿ ಬೀದಿ ಎಸ್.ಎನ್.ಪ್ರದೀಪ ಕುಮಾರ್, ಜೋನಿಗರ ಬೀದಿ ಲಿಯಾಕತ್ ಪಾಷ, ಗಂಜಾಂನ ಸಿ.ನಾಗರತ್ನ ಗೊಂವಿಂದರಾಜು ಸೇರಿದಂತೆ ಒಟ್ಟು 5 ಮಂದಿ ನಾಮನಿರ್ದೇಶನ ಮಾಡಿದೆ.