ವರ್ಚುವಲ್ ಮೂಲಕ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ. ಬೀದರ್‌ನಲ್ಲಿ ನೂತನ ಎಫ್.ಎಂ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲಾ ಕೇಂದ್ರ ಬೀದರ್‌ನಲ್ಲಿ ಆಕಾಶವಾಣಿ ನೂತನ ಎಫ್‌ಎಂ ಕೇಂದ್ರ ಶುಕ್ರವಾರ ಅಸ್ತಿತ್ವಕ್ಕೆ ಬಂದಿದೆ. ಬೀದರ್, ಬಾಗಲಕೋಟ್. ಕೋಲಾರ್ ಮತ್ತು ಆಂಧ್ರಪ್ರದೇಶದ ರಾಜಮಂಡ್ರಿ ಸೇರಿ ರಾಷ್ಟ್ರದ 6 ಕಡೆಗಳಲ್ಲಿ ಆಕಾಶವಾಣಿ ನೂತನ ಎಫ್‌ಎಂ ಕೇಂದ್ರಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಚೆನ್ನೈನಲ್ಲಿ ಇದ್ದುಕೊಂಡೆ ವರ್ಚುವಲ್ ಮೂಲಕ ಉದ್ಘಾಟಿಸಿದರು.
ಬೀದರ್‌ನಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, 2014ಕ್ಕೂ ಮುಂಚೆ ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಈ ಯೋಜನೆ ಬಂದಿದ್ದು ಯಾವ ಜನರಿಗೂ ಗೊತ್ತಿಲ್ಲ. ಆದರೆ, ನಾನು ಸಚಿವನಾದ ನಂತರ ರಾಷ್ಟ್ರೀಯ ಹೆದ್ದಾರಿಗಳು, ರೈಲುಗಳು, ವಿಮಾನಯಾನ ಸೇರಿ ಇತರ ಕೆಲಸಗಳಾಗಿವೆ ಎಂದು ಹೇಳಿದರು.
ಜಿಲ್ಲೆಯ ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳ ಸಹಕಾರ ಸಿಗಲಿಲ್ಲ. ಆದರೂ ನಾನು ಧೃತಿಗೆಟ್ಟಿಲ್ಲ. ಒಳ್ಳೆಯ ಕೆಲಸ ಮಾಡಲು ಹೋಗಿದ್ದಾಗ ಪರಮಾತ್ಮ ಹಾಗೂ ಇಲ್ಲಿಯ ಜನರು ಸಹಕರಿಸಿದ್ದಾರೆ ಎಂದರು.
ಮುಂದಿನ ಕೆಲವೇ ದಿನಗಳಲ್ಲಿ ಖಾಸಗಿಯಾಗಿ ಎಫ್‌ಎಮ್ ಕೇಂದ್ರಗಳು ಜಿಲ್ಲೆಗೆ ಬರಲಿವೆ. ಸತತ ಪ್ರಯತ್ನದಿಂದಾಗಿ ಬೀದರ್ ಜಿಲ್ಲೆಗೆ ಸೈನಿಕ ಶಾಲೆ ಮಂಜೂರಿಯಾಗಿದೆ ಎಂದರು.
ಆಕಾಶವಾಣಿ ಹೈದ್ರಾಬಾದ್ ಎಂಜಿನಿಯರಿಂಗ್ ವಿಭಾಗದ ಉಪ ನಿರ್ದೇಶಕ ಸಂಜು ಮರ್ಜಿ, ಕಲಬುರಗಿ ಆಕಾಶವಾಣಿಯ ಉಪ ನಿರ್ದೇಶಕ ಹರಿಸಿಂಗ್, ಬೀದರ್ ಎಫ್‌ಎಮ್ ಕೇಂದ್ರ ಪ್ರಸಾರಣಾ ಸಾಮರ್ಥ್ಯ 15 ಕಿ.ಮೀ ಇದೆ ಎಂದರು.
ಕಾರ್ಯಕ್ರಮದಲ್ಲಿ ಬೀದರ್‌ನ ಹಿರಿಯ ಮುಖಂಡರಾದ ಎನ್.ಆರ್.ವರ್ಮಾ, ವೈಜಿನಾಥ ಕಮಠಾಣೆ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.