ದುದ್ದದಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ಉದ್ಘಾಟನೆ

KannadaprabhaNewsNetwork |  
Published : Mar 02, 2024, 01:52 AM IST
1ಎಚ್ಎಸ್ಎನ್4 : ಹಸಿರು ನಿಶಾನೆ ತೋರುವ ಮೂಲಕ ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಯುವ ಪೀಳಿಗೆ ಸಮಾಜದ ಅಭಿವೃದ್ಧಿಯ ಸೂಚ್ಯಂಕ. ಅದನ್ನು ಹುಲುಸಾಗಿ ಬೆಳೆಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ವಿವಿಧ ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿದೆ ಎಂದು ತಾಪಂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ದಿನೇಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಯುವ ಪೀಳಿಗೆ ಸಮಾಜದ ಅಭಿವೃದ್ಧಿಯ ಸೂಚ್ಯಂಕ. ಅದನ್ನು ಹುಲುಸಾಗಿ ಬೆಳೆಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ವಿವಿಧ ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿದೆ ಎಂದು ತಾಪಂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ದಿನೇಶ್‌ ತಿಳಿಸಿದರು. ಅವರು ಪಂಚಾಯತ್ ರಾಜ್ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ, ಶಿಕ್ಷಣ ಇಲಾಖೆಯ ಸಹಯೋಗಗಳೊಂದಿಗೆ ದುದ್ದ ಗ್ರಾಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಉದ್ಘಾಟನಾ ನುಡಿಯಲ್ಲಿ ಗ್ರಂಥಾಲಯಗಳ ಸಬಲೀಕರಣ ಯುವ ಪೀಳಿಗೆ ಗ್ರಂಥಾಲಯಗಳತ್ತ ಮುಖಮಾಡುವಂತೆ ಮಾಡಿ ಗ್ರಂಥಾಲಯಗಳಿಗೆ ಶಕ್ತಿ ತುಂಬುವ ಹಾಗೂ ಸಮಾಜದ ಅಭಿವೃದ್ಧಿಯ ಸೂಚ್ಯಂಕವೇ ಆಗಿರುವ ಮಕ್ಕಳನ್ನು ಎಲ್ಲಾ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುವಂತೆ ಮಾಡಲು ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಕಾರದಿಂದ ಹೊಸ ಕಾರ್ಯಕ್ರಮಕ್ಕೆ ಭಾಷೆ ಬರದಿದೆ ಎಂದರು. ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ತನ್ವೀರ್‌ ತಮ್ಮ ಪ್ರಸ್ತಾವಿಕ ನುಡಿಯಲ್ಲಿ ಮಕ್ಕಳಿಂದಲೇ ಸಾಹಿತ್ಯ ಸೃಷ್ಟಿಸಿ ಅದನ್ನು ಆಯಾ ಹೋಬಳಿ ಕೇಂದ್ರದಲ್ಲಿ ಇರಿಸಿ ಮಕ್ಕಳಿಗೆ ಉತ್ತೇಜಿಸುವ ದೃಷ್ಟಿಯಿಂದಾಗಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಮಾಡಿ ಶೈಕ್ಷಣಿಕ ಇಲಾಖೆಗೆ ತಮ್ಮದೇ ರೀತಿಯಲ್ಲಿ ಸಹಕಾರ ಮಾಡಿರುವ ಭಾರತ ಜ್ಞಾನ, ವಿಜ್ಞಾನ ಸಮಿತಿಯ ಸಂಪನ್ಮೂಲ ವ್ಯಕ್ತಿಗಳ ಮೂಲಕ ಆರ್‌ಡಿಪಿಆರ್‌ ಇಲಾಖೆ ಸಶಕ್ತವಾಗಿ ಬಳಸಿಕೊಂಡು ರಾಜ್ಯದ 75 ತಾಲೂಕುಗಳಲ್ಲಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುತ್ತಿದೆ ಇದು ರಾಜ್ಯದ ಎಲ್ಲಾ ತಾಲೂಕು ಹೋಬಳಿ ಕೇಂದ್ರಗಳಲ್ಲಿ ವಿಜೃಂಭಿಸುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ರೂಪುರೇಷೆ ವಿವರಿಸಿದ ಜಿಲ್ಲಾ ಸಾಹಿತ್ಯ ಸಂಭ್ರಮದ ಸಂಚಾಲಕಿ ಪ್ರಮೀಳಾ ಮಾತನಾಡಿ, ಈ ಹಿಂದೆ ಕೋವಿಡ್ ಸಂದರ್ಭದಲ್ಲೂ ಬಿಜಿವಿಎಸ್ ಹಾಗೂ ಆರ್‌ಡಿಪಿಆರ್‌ ಇಲಾಖೆ ಪುಸ್ತಕ ಜೋಳಿಗೆ, ಓದಿನ ಬೆಳಕು, ಮಕ್ಕಳ ಹಬ್ಬ ಚಟುವಟಿಕೆಯನ್ನು ಜೊಯತೆಯಾಗಿ ಸಂಘಟಿಸಿವೆ. ಜ್ಞಾನವಿಜ್ಞಾನ ಸಮಿತಿಯು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಸಾಹಿತ್ಯದ ಮೂಲಕ ಶಿಕ್ಷಣ ಸುಗಮ ಮಾರ್ಗ ಎಂದು ಅರಿತು ಈ ಚಟುವಟಿಕೆಯನ್ನು ಆರ್‌ಡಿಪಿಆರ್‌ ಸಂಚಾಲನೆಯಲ್ಲಿ ನಡೆಸುತ್ತಿದೆ ಇದನ್ನು ಹಾಸನ ತಾಲೂಕಿನಲ್ಲಿ ಒಂದು ದಾಖಲೆಯಾಗಿ ಬರೆಯಲು ತಾಲೂಕಿನ ಸಂಚಾಲಕರಾದ ತನ್ವೀರ್ ಹಾಗೂ ವನಜಾಕ್ಷಿ ಬಹಳ ಶ್ರಮಹಾಕಿದ್ದಾರೆ ಎಂದು ನುಡಿದು ಶ್ರಮವನ್ನು ಸ್ಮರಿಸಿದರು. ಮುಖ್ಯ ಅತಿಥಿಯಾಗಿ ಭಾಘವಹಿಸಿದ್ದ ಬಿಇಒ ಮಂಜುಳಾ ಮಾತನಾಡಿ, ಶಿಕ್ಷಣ ಇಲಾಖೆ ಮಾಡಬೇಕಾದಂತಹ ಈ ಅದ್ಭುತ ಕಾರ್ಯಕ್ರಮವನ್ನು ಆರ್‌ಡಿಪಿಆರ್‌ ಇಲಾಖೆ ಮತ್ತು ಭಾರತ ಜ್ಞಾನವಿಜ್ಞಾನ ಸಮಿತಿ ಪಂಕಕಟ್ಟಿ ನಿಂತು ಮಕ್ಕಳಲ್ಲಿ ಸೃಜನಾತ್ಮಕ ಶಕ್ತಿಯನ್ನು ಹೊರಹಮ್ಮಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ ಇದೊಂದು ಸಂತಸದಾಯಕ ಹಾಗೂ ಮೆಚ್ಚುಗೆಯ ಕೆಲಸವಾಗಿದೆ ಇದನ್ನು ನೀವೆಲ್ಲರೂ ಸಾರ್ಥಕ ಪಡಿಸಿಕೊಳ್ಳಬೇಕು ಆ ಮೂಲಕ ಈ ನೆಲದ ಸಾಂಸ್ಕೃತಿಕ ಶಕ್ತಿಗಳಾಗಿ ಸಾಹಿತ್ಯದ ಚಿಗುರುಗಳಾಗಿ ನೀವು ಹೊರಹೊಮ್ಮಬೇಕೆಂದರು. ಗ್ರಾಪಂ ಅಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು, ಮೂರು ಪಂಚಾಯಿತಿಯ ಪಿಡಿಒಗಳು ಶಿಕ್ಷಣ ಸಂಯೋಜಕರು, ಸಿಆರ್‌ಪಿಗಳು ಸಂಪನ್ಮೂಲ ಶಿಕ್ಷಕರು ಉಪಸ್ಥಿತರಿದ್ದರು. ನಂತರ ದುದ್ದ, ಹೊನ್ನಾವರ ಹಾಗೂ ಅಟ್ಟಾವರ ಗ್ರಾಪಂಗಳಿಗೆ ಆಯ್ದ 100 ವಿದ್ಯಾರ್ಥಿಗಳಿಗೆ 16 ಸಂಪನ್ಮೂಲ ವ್ಯಕ್ತಿಗಳು ಕಥೆ ಕಟ್ಟೋಣ, ಕವಿತೆ ಬರೆದುಹಾಡೋಣ, ನಾಟಕ ರಚಿಸಿ ಆಡೋಣ, ನಾನು ರಿಪರ‍್ಟರ್ ಚಟುವಟಿಕೆಗಳನ್ನು ಮಕ್ಕಳನ್ನು ಗುಂಪಾಗಿ ವಿಂಗಡಿಸಿ ಆಕರ್ಷಕವಾಗಿ ಚಟುವಟಿಕೆ ನಡೆಸಿದರು. ತಾಲ್ಲೂಕು ಸಂಚಾಲಕಿ ಬಿ.ಎಸ್.ವನಜಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿ ಇಡೀ ದಿನ ಚಟುವಟಿಕೆಯನ್ನು ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿ ಉಮಾವತಿ ವ್ರೆದಲಿಗೆ ಎಲ್ಲರನ್ನು ಸ್ವಾಗತಿಸಿದರು. ದುದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಶೋಭಾ ವಂದನಾರ್ಪಣೆ ಮಾಡಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...