ಮಕ್ಕಳ ಬಹುರೂಪಿ ಎಂಬುದು ಒಂದು ಪ್ರಮುಖ ಆಯಾಮ

KannadaprabhaNewsNetwork |  
Published : Jan 16, 2025, 12:47 AM IST
6 | Kannada Prabha

ಸಾರಾಂಶ

ಮಕ್ಕಳು ಎಂಬುದು ಒಂದು ಭಾಗ. ನಾವೆಲ್ಲ ಮಕ್ಕಳನ್ನು ಭವಿಷ್ಯಕ್ಕಾಗಿ ರೂಪಿಸಬಾರದು ಇವತ್ತಿಗೂ ಸಹ ಮಕ್ಕಳಿಗೆ ಅವರದೇ ಆದಂತಹ ಪ್ರಪಂಚ ಎಂಬುದು ಇದೆ.

ಕನ್ನಡಪ್ರಭ ವಾರ್ತೆ ಮೈಸೂರುಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ರಂಗಭೂಮಿಯು ಸಹ ಮುಖ್ಯವಾಗುತ್ತದೆ. ಮಕ್ಕಳ ಬಹುರೂಪಿ ಎಂಬುದು ನಿಜವಾಗಿಯೂ ಒಂದು ಪ್ರಮುಖ ಆಯಾಮ. ಮಕ್ಕಳ ರೂಪದಲ್ಲಿ ಆರಂಭ ಮಾಡುತ್ತಿರುವುದು ಒಂದು ಆರೋಗ್ಯಕರವಾದಂತ ಬೆಳವಣಿಗೆ ಎಂದು ಚಲನಚಿತ್ರ ನಟ ಪ್ರಕಾಶ್ ರಾಜ್ ಹೇಳಿದರು.ರಂಗಾಯಣದ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಮಕ್ಕಳ ಬಹುರೂಪಿ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ನಾವು ಮಕ್ಕಳನ್ನು ಬೆಳೆಸುತ್ತೇವೆ ಎಂಬುದು ಅಹಂಕಾರ ಬೆಳೆಯಲಿಕ್ಕೆ ಬಿಡುತ್ತೇವೆ ಎಂದರೆ ಅದು ವಿನಯವಾಗಿದೆ ಎಂದು ತಿಳಿಸಿದರು.ಮಕ್ಕಳು ಎಂಬುದು ಒಂದು ಭಾಗ. ನಾವೆಲ್ಲ ಮಕ್ಕಳನ್ನು ಭವಿಷ್ಯಕ್ಕಾಗಿ ರೂಪಿಸಬಾರದು ಇವತ್ತಿಗೂ ಸಹ ಮಕ್ಕಳಿಗೆ ಅವರದೇ ಆದಂತಹ ಪ್ರಪಂಚ ಎಂಬುದು ಇದೆ. ಅದು ಹಸಿರಿನ ಪ್ರಪಂಚ, ಕುತೂಹಲದ ಪ್ರಪಂಚ ಜೊತೆಗೆ ತನ್ನನ್ನು ತಾನು ರೂಪಿಸಿಕೊಳ್ಳುವಂತಹ ಪ್ರಪಂಚ ಇದೆ. ಮಕ್ಕಳನ್ನು ನಾವು ಬೆಳೆಸಬೇಕಾಗಿಲ್ಲ ಬೆಳೆಯುತ್ತಿರುವಂತಹ ಮಕ್ಕಳನ್ನು ನಾವು ಸೂಕ್ಷ್ಮ ಗೊಳಿಸಬೇಕು ಎಂದು ಅವರು ಹೇಳಿದರು.ಮನೆಯಲ್ಲೇ ಒಂದು ಅದ್ಭುತವಾದ ಕಲಿಕೆ ಇದ್ದರೂ ಕೂಡ ಶಾಲೆಯಿಂದ ಬಂದಂತ ಮಕ್ಕಳನ್ನು ನಂತರ ಟ್ಯೂಷನ್ ಹಾಕಿ ಅವರಿಗೆ ಒತ್ತಡವಾಗುವಂತಹ ರೀತಿಯಲ್ಲಿ ನಾವು ತೊಡಗಿಸುತ್ತಿದ್ದೇವೆ. ಮಕ್ಕಳ ಬಗ್ಗೆ ಪೋಷಕರು ಕೂಡ ಯೋಚನೆ ಮಾಡಬೇಕು. ಅವರ ಬಗ್ಗೆ ಗಮನ ಕೊಡಬೇಕು ಎಂದು ತಿಳಿಸಿದರು.ಮಕ್ಕಳನ್ನು ನಾವು ಒಂದು ಸಮುದಾಯದ ಒಳಗೆ ಬೆಳೆಸಿದರೆ ಮಕ್ಕಳು ಮೌನವಾಗಿ ಇದ್ದು ಬಿಡುತ್ತಾರೆ. ನಾವು ಎಳೆ ಮನಸ್ಸಿಗೆ ಬೇಕಾದಂತಹ ಕುತೂಹಲಕಾರಿ ಶಕ್ತಿಯನ್ನು ನೀಡಬೇಕು. ಮಕ್ಕಳನ್ನು ಹಾರುವುದಕ್ಕೆ ಬಿಡುವುದಕ್ಕೆ ನಾವು ಆರು ದಿಗಂತಗಳನ್ನು ಬಳಸುತ್ತಿದ್ದೇವೆ. ಅದನ್ನು ಮಾಡುವುದು ತಪ್ಪು. ಈ ನಿಟ್ಟಿನಲ್ಲಾದರೂ ನಾವು ಒಂದು ಆರೋಗ್ಯಕರವಾದಂತಹ ಸಮಾಜವನ್ನು ಕಟ್ಟಲಿಕ್ಕೆ ಸಹಾಯವಾಗುತ್ತದೆ ಈಗಲಾದರೂ ನಾವು ಎಚ್ಚೆತ್ತುಕೊಂಡು ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳ ಭಾಷೆಯನ್ನ, ಮಾತನ್ನು ಅವರ, ನೋಟವನ್ನು, ಕುತೂಹಲವನ್ನು ನಾವು ಆಲಿಸಬೇಕು ಎಂದು ಅವರು ಹೇಳಿದರು.ಈ ಮಕ್ಕಳ ಬಹುರೂಪಿ ಎಂಬುದು ನಿಜವಾಗಿಯೂ ಒಂದು ಪ್ರಮುಖ ಆಯಾಮ. ಇದನ್ನು ನಾವು ಬೆಳೆಸುತ್ತಾ ಮುಂದೇನು ಬೆಳೆಸೋಣ ಎಂದು ತಿಳಿಸಿದರು.ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಡಿಡಿಪಿಐ ಜವರೇಗೌಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!