ಕನ್ನಡಪ್ರಭ ವಾರ್ತೆ ನಾಪೋಕ್ಲು
ಬಳಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಟಿ ಎಂ ಶಾಹಿದ್, ಸಂಪಾಜೆ ಗ್ರಾಮದ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಮೂಲಕ 2 ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ. ಈ ಭಾಗದ ಜನ ಪ್ರತಿನಿಧಿಗಳು ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ ಅನುದಾನ ತರಿಸುವಲ್ಲಿ ಪ್ರಯತ್ನ ಮಾಡಿದ್ದಾರೆ.
ನಾನು ಕೂಡ ಗಡಿಕಲ್ಲು ಅಂಗನವಾಡಿ ಕಟ್ಟಡ, ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಅನುದಾನ ದೊರಕಿಸಿ ಕೊಟ್ಟಿದ್ದೇನೆ. ಪೇರಡ್ಕ ದರ್ಕಾಸ್ ಭಾಗದಲ್ಲಿ ರಸ್ತೆ ಕಾಂಕ್ರಿಟ್ ಕಾಮಗಾರಿ, ಅಂಗನವಾಡಿ ಕೇಂದ್ರದ ಆವರಣ ಗೋಡೆ, ಪೇರಡ್ಕ ಸೇತುವೆ ಕಾಮಗಾರಿ, ಗೂನಡ್ಕ ದರ್ಕಾಸ್ ಪೇರಡ್ಕ ರಸ್ತೆ, ಪೆರುಂಗೋಡಿ ರಸ್ತೆ ಡಾಮರು ಕಾಮಗಾರಿ ಮಾಡಿಸಿಕೊಟ್ಟಿದ್ದೇನೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಯಿಂದ ಸುಮಾರು ಎರಡು ಕೋಟಿ ಹಣ ಬರಲಿದ್ದು ಮುಂದೆಯೂ ಈ ಭಾಗದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಯಲ್ಲಿ ಕೈ ಜೋಡಿಸುತ್ತೇನೆ ಎಂದ ಅವರು ನಮ್ಮ ಪೂರ್ವಜರು ಹಾಕಿ ಕೊಟ್ಟ ದಾರಿಯಲ್ಲಿ ಮುಂದೆ ಸಾಗಿ ಎಲ್ಲ ಅಭಿವೃದ್ಧಿಗೆ ನಾನು ಸ್ಪಂದಿಸುವುದಾಗಿ ಹೇಳಿದರು.ಈ ಸಂದರ್ಭ ಗಡಿಕಲ್ಲು ಹಾಗೂ ಕಲ್ಲುಗುಂಡಿ ಅಂಗನವಾಡಿ ಕೇಂದ್ರದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಉದ್ಘಾಟನೆಯನ್ನು ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ, ಆನೆ ಮಲ್ಲಡ್ಕ ರಸ್ತೆ ಕಾಂಕ್ರಿಟ್ ರಸ್ತೆ ಕಾಮಗಾರಿ 3 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಮಗಾರಿಯನ್ನು ಮಾಜಿ ಪಂಚಾಯತ್ ಅಧ್ಯಕ್ಷರಾದ ಜಗದೀಶ್ ರೈ , ಕೈಪಡ್ಕ ಚರಂಡಿ ಕಾಂಕ್ರೀಟ್ ಕಾಮಗಾರಿಯನ್ನು ಪಂಚಾಯತ್ ಸದಸ್ಯೆ ವಿಮಲಾ ಪ್ರಸಾದ್, ಚಟ್ಟೆಕಲ್ಲು ರಸ್ತೆ ಕಾಂಕ್ರಿಟ್ ಕಾಮಗಾರಿ 5 ಲಕ್ಷ ರು. ವೆಚ್ಚದ ಕಾಂಕ್ರೀಟ್ ಕಾಮಗಾರಿ ಹಾಗೂ ಚಟ್ಟೆಕಲ್ಲು ಕಾಂಕ್ರೀಟ್ ಚರಂಡಿ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುಂದರಿ, ಜಿ. ಕೆ. ಹಮೀದ್ ಗೂನಡ್ಕ, 3 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಕಡೆಪಾಲ ರಸ್ತೆ ಕಾಂಕ್ರಿಟ್ ಕಾಮಗಾರಿ, ಚರಂಡಿ ಕಾಂಕ್ರೀಟ್ ಕಾಮಗಾರಿಯನ್ನು ಮಾಜಿ ಉಪಾಧ್ಯಕ್ಷರು ಗ್ರಾ.ಪಂ. ಸದಸ್ಯರಾದ ಲಸ್ಸಿ ಮೊನಾಲಿಸಾ ಹಾಗೂ ದಿನಕರ ಗೌಡ ಸಣ್ಣಮನೆ, ಪೆರುಂಗೋಡಿ ಪೇರಡ್ಕ ರಸ್ತೆ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಂಕ್ರೀಟ್ ಕಾಮಗಾರಿಯನ್ನು ಗ್ರಾ.ಪಂ. ಮಾಜಿ ಸದಸ್ಯರಾದ ಕುಸುಮಾವತಿ ಪುಟ್ಟಯ್ಯ ಗೌಡ ಉದ್ಘಾಟನೆ ನೆರವೇರಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ಮೋಹಿನಿ ವಂದಿಸಿದರು.