ನಾರ್ವೆ ಪೇಟೆಯಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ

KannadaprabhaNewsNetwork | Published : Mar 1, 2025 1:01 AM

ಸಾರಾಂಶ

ತಂತ್ರಜ್ಞಾನ ಮುಂದುವರಿದಂತೆ ಗ್ರಾಮೀಣ ಭಾಗದ ಓದುಗರಿಗೆ ಅನುಕೂಲವಾಗಲು ಪುಸ್ತಕ ರೂಪದಲ್ಲಿ ಸಿಗುತ್ತಿದ್ದ ಪ್ರತಿಯೊಂದು ಅಗತ್ಯ ಮಾಹಿತಿಗಳು ಡಿಜಿಟಲ್ ಮಾದರಿಯಲ್ಲಿ ಪರಿವರ್ತನೆ ಗೊಂಡಿವೆ. ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ವಸಂತ ಕುಮಾರ್‌ ತಿಳಿಸಿದರು. ಕೇವಲ ಕಥೆ, ಕಾದಂಬರಿ ಮಾತ್ರವಲ್ಲದೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗೆ ಸಂಬಂಧ ಪಟ್ಟಂತೆ ಹಲವು ಮಾಹಿತಿಯನ್ನು ಇಲ್ಲಿಯೇ ಪಡೆದುಕೊಳ್ಳಬಹುದಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ತಂತ್ರಜ್ಞಾನ ಮುಂದುವರಿದಂತೆ ಗ್ರಾಮೀಣ ಭಾಗದ ಓದುಗರಿಗೆ ಅನುಕೂಲವಾಗಲು ಪುಸ್ತಕ ರೂಪದಲ್ಲಿ ಸಿಗುತ್ತಿದ್ದ ಪ್ರತಿಯೊಂದು ಅಗತ್ಯ ಮಾಹಿತಿಗಳು ಡಿಜಿಟಲ್ ಮಾದರಿಯಲ್ಲಿ ಪರಿವರ್ತನೆ ಗೊಂಡಿವೆ. ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ವಸಂತ ಕುಮಾರ್‌ ತಿಳಿಸಿದರು.

ತಾಲೂಕಿನ ಅರೇಹಳ್ಳಿ ಹೋಬಳಿ ನಾರ್ವೆ ಪೇಟೆ ಗ್ರಾಮದಲ್ಲಿ 8.50 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಾಮಪಂಚಾಯಿತಿ ವ್ಯಾಪ್ತಿಯ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಾಲಯಗಳು ಓದುಗರಿಗೆ ಅಕ್ಷರ ಜ್ಞಾನವನ್ನು ಉಣಬಡಿಸುವ ಜ್ಞಾನ ಕೇಂದ್ರ ವಾಗಿದೆ. ರಾಜ್ಯದ ಕಬ್ಬನ್ ಪಾರ್ಕ್‌ನಲ್ಲಿ ಇರುವ ಕೇಂದ್ರ ಗ್ರಂಥಾಲಯದಲ್ಲಿ ಸಿಗುವ ಪ್ರತಿಯೊಂದು ಉಪಯುಕ್ತ ಮಾಹಿತಿಗಳು ನಿಮ್ಮ ಮನೆಯಂಗಳದ ಡಿಜಿಟಲ್ ಗ್ರಂಥಾಲಯದಲ್ಲಿಯೂ ಕೂಡ ಲಭ್ಯವಿದೆ. ಕೇವಲ ಕಥೆ, ಕಾದಂಬರಿ ಮಾತ್ರವಲ್ಲದೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗೆ ಸಂಬಂಧ ಪಟ್ಟಂತೆ ಹಲವು ಮಾಹಿತಿಯನ್ನು ಇಲ್ಲಿಯೇ ಪಡೆದುಕೊಳ್ಳಬಹುದಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ ಮಾತನಾಡಿ, ಈ ಭಾಗದ ಓದುಗರ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿಜಿಟಲ್ ಮಾದರಿಯ ಸುಸಜ್ಜಿತವಾದ ಗ್ರಂಥಾಲಯವನ್ನು ತೆರೆಯಲಾಗಿದೆ. ಜನಸಾಮಾನ್ಯರು ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಗ್ರಂಥಾಲಯವನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸುಲಗಳಲೆ, ಸದಸ್ಯರಾದ ಚಿದಾನಂದ ಮಲ್ಲಿಕಾರ್ಜುನ, ನಾರ್ವೆ ಮಂಜುನಾಥ್, ಬೇಬಿ ವೀಣಾ, ಪವಿತ್ರ, ತಾಪಂ ಮಾಜಿ ಸದಸ್ಯ ಸೋಮಯ್ಯ, ಸಾಮಾಜಿಕ ಹೋರಾಟಗಾರ ಚಂದ್ರು ಬ‌ಹುಜನ್, ಶ್ರೀಕಾಂತ್, ವೆಂಕಟೇಶ್, ಮೂರ್ತಿ, ಪಿಡಿಒ ಚಂದ್ರಯ್ಯ, ಕಾರ್ಯದರ್ಶಿ ಚಾಮರಾಜು, ಗ್ರಂಥಾಲಯ ಮೇಲ್ವಿಚಾರಕ ಚಂದ್ರಶೇಖರ್ ಹಾಗೂ ಸಿಬ್ಬಂದಿ ಹಾಜರಿದ್ದರು.

Share this article