ಗ್ರ್ಯಾಂಡ್ ಫುಟ್ಬಾಲ್ ಕಾರ್ನಿವಲ್ ಉದ್ಘಾಟನೆ

KannadaprabhaNewsNetwork |  
Published : Apr 10, 2025, 01:17 AM IST
ಚಾಂಪಿಯನ್ಸ್ ತಂಡವಾಗಿ ಬಷೀರ್ ಹಾಗೂ ಶೌಕತ್ ದುಲ್ಕರ್ ಮಾಲೀಕತ್ವದ ಟೀಮ್ ಆಸ್ಟನ್ ವಿಲ್ಲಾ ಹೊರಹೊಮ್ಮಿತು. 8. -ಎನ್ ಪಿ ಕೆ-2.  ಸಿರಾಜ್ಫ್ರೆಂಡ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗಳಿಸಿತು. | Kannada Prabha

ಸಾರಾಂಶ

ಎರಡನೇ ವರ್ಷದ ಕಲ್ಲುಮೊಟ್ಟೆ ಪ್ರೀಮಿಯರ್‌ ಲೀಗ್‌ ಕಾಲ್ಚೆಂಡು ಕ್ರೀಡಾಕೂಟವನ್ನು ಹೊನಲು ಬೆಳಕಿನ ಕ್ರೀಡಾಕೂಟವಾಗಿ ಗ್ರ್ಯಾಂಡ್‌ ಫುಟ್ಬಾಲ್‌ ಕಾರ್ನಿವಲ್‌ ಎಂಬ ಟೈಟಲ್‌ನೊಂದಿಗೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಕಲ್ಲುಮೊಟ್ಟೆಯ ಕೆ ಎಂಸಿಸಿ ಕ್ರೀಡಾ ಕ್ಲಬ್ ಆಶ್ರಯದಲ್ಲಿ ಎರಡನೇ ವರ್ಷದ ಕಲ್ಲುಮೊಟ್ಟೆ ಪ್ರೀಮಿಯರ್ ಲೀಗ್ ಕಾಲ್ಚೆಂಡು ಕ್ರೀಡಾಕೂಟವನ್ನು ಹೊನಲು ಬೆಳಕಿನ ಕ್ರೀಡಾಕೂಟವಾಗಿ ಗ್ರ್ಯಾಂಡ್ ಫುಟ್ಬಾಲ್ ಕಾರ್ನಿವಲ್ ಎಂಬ ಟೈಟಲ್ ನೊಂದಿಗೆ ಅತಿ ವಿಜೃಂಭಣೆಯಿಂದ ನಡೆಸಲಾಯಿತು.

ಪೆರಿಯ ಪರಂಬು ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕ್ರೀಡಾಕೂಟವನ್ನು ಕಲ್ಲುಮೊಟ್ಟೆ ಜಮಾಯತ್ ಅಧ್ಯಕ್ಷರಾದ ಮುಹಮ್ಮದ್ ಪುಲಿಯಂಡ, ಗೌರವ ಅಧ್ಯಕ್ಷ ಪುಲಿಯಂಡ ಮೊಯ್ದು ಹಾಗೂ ಸೀನ ಕಲ್ಲುಮೊಟ್ಟೆ ಕೆಎಂಸಿಸಿ ಪದಾಧಿಕಾರಿಗಳು ಉದ್ಘಾಟಿಸಿದರು.

ಉದ್ಘಾಟನಾ ಪಂದ್ಯ ಡ್ರೀಮ್ಸ್ ಚೇಸರ್ಸ್ ಮತ್ತು ಸಿರಾಜ್ ಫ್ರೆಂಡ್ಸ್ ನಡುವೆ ನಡೆದರೆ ಅಂತಿಮ ಪಂದ್ಯ ಟೀಮ್ ಆಸ್ಟನ್ ವಿಲ್ಲಾ ಮತ್ತು ಸಿರಾಜ್ ಫ್ರೆಂಡ್ಸ್ ತಂಡಗಳ ನಡುವೆ ನಡೆಯಿತು.

ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಸೇವ್ದ ಡ್ರೀಮ್ಸ್ ಚಾರಿಟಿಯ ಜಾಬಿರ್ ನಿಜಾಮಿ ಚೆರಿಯಪರಂಬು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಾಪೋಕ್ಲು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ಕೆ .ಎ, ಮಡಿಕೇರಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಹಂಸ ಕೆ.ಎ, ಹನೀಫ್ ಕೊಟ್ಟಮುಡಿ, ಮುಹಮ್ಮದ್ ಪುಲಿಯಂಡ, ಮಿರ್ಶಾದ್ ಪರವಂಡ, ಸಿರಾಜ್ ಪರವಂಡ, ರಫೀಕ್ ಅರೆಯಂಡ ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ ನೀಡಿ ಶುಭ ಹಾರೈಸಿದರು

. ಈ ಸಂದರ್ಭ ಸಿಡಿಮದ್ದಿನ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಚಾಂಪಿಯನ್ಸ್ ತಂಡವಾಗಿ ಬಷೀರ್ ಹಾಗೂ ಶೌಕತ್ ದುಲ್ಕರ್ ಮಾಲೀಕತ್ವದ ಟೀಮ್ ಆಸ್ಟನ್ ವಿಲ್ಲಾ ಹೊರಹೊಮ್ಮಿತು.

ಸಿರಾಜ್ ಫ್ರೆಂಡ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗಳಿಸಿತು. ಟೂರ್ನಿಯ ಆಕರ್ಷಣೆ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿ ಯಾಗಿ ಸೈಕಲ್ ಎಲ್ಲರ ಗಮನ ಸೆಳೆಯಿತು.

ಪ್ಲೇಯರ್ ಆಫ್ ದ ಸೀರಿಸ್ ಸಿರಾಜ್ ತಂಡದ ಸುಫಿಯಾನ್ ಹೊರಹೊಮ್ಮಿದರು.

ಕ್ರೀಡಾಕೂಟದಲ್ಲಿ ಕಲ್ಲುಮೊಟ್ಟೆಯಿಂದ ಯಿಂದ ಬೆಂಗಳೂರಿನ ಪ್ರತಿಷ್ಠಿತ ಸ್ಪೋರ್ಟ್ಸ್ ಅಕಾಡೆಮಿಗೆ ಆಯ್ಕೆಯಾಗಿ ಜಮ್ಮು ಕಾಶ್ಮೀರ ದಲ್ಲಿ ನಡೆದ 15 ವರ್ಷದೊಳಗಿನ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಸುಫಿಯಾನ್ ಹಾಗೂ ಸ್ಪೋರ್ಟ್ಸ್ ಅಕಾಡೆಮಿಯ ಕಿರಿಯರ ಕಾಲ್ಚೆಂಡು ತಂಡವನ್ನು ಪ್ರತಿನಿಧಿಸುತ್ತಿರುವ ಫಾಸಿಲ್ ಭಾಗವಹಿಸಿದ್ದು ವಿಶೇಷ ವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!