ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀ ಎಜುಕೇಷನ್ ಟ್ರಸ್ಟ್, ಭಾರತೀ ಹೆಲ್ತ್ ಸೈನ್ಸ್ ಕಾಲೇಜುಗಳು, ಅಸ್ಟರ್ ಜಿ. ಮಾದೇಗೌಡ ಆಸ್ಪತ್ರೆ, ಆಶಯ್ ಅಭಿಮಾನಿ ಬಳಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರದಲ್ಲಿ ನಡೆಯುವ ಶಿಬಿರದಲ್ಲಿ ಚಂದೂಪುರ ರೇಣುಕಾ ಆಶ್ರಮ ಮಠದ ಶ್ರೀಶಿವಲಿಂಗ ಶಿವಾಚಾರ್ಯ ಮಹಾ ಸ್ವಾಮೀಜಿ ಸಾನಿಧ್ಯವಹಿಸಲಿರೆ ಎಂದರು.
ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಭಾರತೀ ವಿದ್ಯಾ ಸಂಸ್ಥೆ ಮುಖ್ಯ ನಿರ್ವಾಣಾಧಿಕಾರಿ ಆಶಯ್ ಜಿ.ಮಧು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಅಸ್ಟರ್ ಜಿ.ಮಾದೇಗೌಡ ಆಸ್ಪತ್ರೆ ಯೂನಿಟ್ ಹೆಡ್ ಗಣೇಶ್ ಪ್ರಭು, ಭಾರತೀ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಚಂದೂಪುರ ಡಿ.ಕೆ.ಗೌಡ ವಿದ್ಯಾಸಂಸ್ಥೆ ಅಧ್ಯಕ್ಷ ಶಿವಲಿಂಗೇಗೌಡ, ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಅಭಿಯಂತರ ಹಾಗಲಹಳ್ಳಿ ಬಸವರಾಜೇಗೌಡ, ಪಿಡಿಒ ಮಂಚಮ್ಮ ಭಾಗವಹಿಸಲಿದ್ದಾರೆ ಎಂದರು.ಅನುಭವ ಹೊಂದಿದ ವೈದ್ಯರ ತಂಡಗಳು ರಕ್ತದ ಒತ್ತಡ ಪರಿಶೀಲನೆ, ಮಧುಮೇಹ ಪರೀಕ್ಷೆ, ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಲಹೆ, ಕ್ಯಾನ್ಸರ್ ಪತ್ತೆ ಹಚ್ಚುವಿಕೆ, ಕೀಲು ಮತ್ತು ಮೂಳೆ ತಜ್ಞ ವೈದ್ಯರಿಂದ ತಪಾಸಣೆ, ಜನರಲ್ ಸರ್ಜರಿ ತಜ್ಞರಿಂದ ತಪಾಸಣೆ, ದಂತ ಚಿಕಿತ್ಸೆ, ಮೂತ್ರ ವಿಜ್ಞಾನ, ಯೋಗ ಮತ್ತು ನ್ಯಾಚುರೊಪತಿ ಚಿಕಿತ್ಸೆ ಫೀಸಿಯೋತೆರಪಿ, ಸಾಮಾನ್ಯ ವೈದ್ಯಕೀಯ ತಜ್ಞ ವೈದ್ಯರಿಂದ ತಪಾಸಣೆ, ನವಜಾತ ಶಿಶು ಮತ್ತು ಮಕ್ಕಳ ಆರೋಗ್ಯ, ಶಸ್ತ್ರಚಿಕಿತ್ಸೆ ತಜ್ಞರಿಂದ ತಪಾಸಣೆ, ಕಣ್ಣಿನ ತಜ್ಞ ವೈದ್ಯರಿಂದ ತಪಾಸಣೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗ್ರಾಪಂ ಮಾಜಿ ಸದಸ್ಯ ಎಚ್.ಹೊಸಹಳ್ಳಿ ಮಲ್ಲೇಶ್, ಎಲ್.ಐಸಿ ಕೆಂಪೇಗೌಡ, ಚಂದೂಪುರ ಪುನೀತ್, ಪುಟ್ಟಮಾದೇಗೌಡ ,ಅಪ್ಪಾಜಿಗೌಡ, ಪ್ರಭಾಕರ್, ಅನಿಲ್ ಕುಮಾರ್, ಎಸ್.ಐ ಹೊನ್ನಲಗೆರೆ ಮರಿಸ್ವಾಮಿ ಸೇರಿದಂತೆ ಮತ್ತಿತರಿದ್ದರು.