ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಬಿ.ಎಂ.ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಸಮಗ್ರ ಆರೋಗ್ಯ ಮತ್ತು ಕ್ಷೇಮ ಚಿಕಿತ್ಸಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದ್ದು, ನುರಿತ ತಜ್ಞ ವೈದ್ಯರ ಸೇವೆಯೂ ಸಿಗುತ್ತಿದೆ. ಅಲ್ಲದೇ, ವಿಮೆ ಯೋಜನೆಗಳಡಿಯೂ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಈ ಚಿಕಿತ್ಸಾಲಯದಲ್ಲಿ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಚಿಕಿತ್ಸೆಗಳು ಲಭ್ಯ ಇರಲಿವೆ ಎಂದರು.ಮಧುಮೇಹ, ರಕ್ತದೊತ್ತಡ, ಪಿಸಿಒಎಸ್, ಐಬಿಎಸ್ ಗಾಗಿ ಆಹಾರ ಮತ್ತು ಪೌಷ್ಟಿಕಕತೆ, ಬೊಜ್ಜಿನ ಸಮಸ್ಯೆ, ತೂಕ ನಿಯಂತ್ರಣ ಚಿಕಿತ್ಸೆ, ವ್ಯಾಯಾಮ ಮತ್ತು ಸಮಾಲೋಚನೆ, ನಿದ್ರೆಯ ಸಮಸ್ಯೆಗಳಿಗೆ ನಿದ್ರಾಚಿಕಿತ್ಸೆ, ಮಾನಸಿಕ ಒತ್ತಡದ ಸಮಸ್ಯೆ, ಒತ್ತಡ ನಿರ್ವಹಣೆ, ತಂಬಾಕು ಸೇವನೆ ಮತ್ತು ಧೂಮಪಾನ, ನಿಕೋಟಿನ್ ಬದಲಾವಣೆ ಚಿಕಿತ್ಸೆ, ಸಮಗ್ರ ಆರೋಗ್ಯ ತಪಾಸಣೆ, ಶಸ್ತ್ರಚಿಕಿತ್ಸೆ ಪೂರ್ವ ಮತ್ತು ಶಸ್ತ್ರಚಿಕಿತ್ಸೆ ನಂತರ ಹೃದಯದ ಪೋಷಣೆ ಚಿಕಿತ್ಸೆ ಮತ್ತು ಸಮಾಲೋಚನೆ ಸೌಲಭ್ಯವನ್ನು ಈ ಚಿಕಿತ್ಸಾಲಯ ಒಳಗೊಂಡಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಡಾ.ಅನಿತಾ ತೆಲಿ, ಡಾ.ಲತಾ ಮುಳ್ಳೂರ, ಡಾ.ರವಿ ಘಟನಟ್ಟಿ, ಡಾ.ವಿನಯ ಕುಂದರಗಿ, ಡಾ.ಆನಂದ ಅಂಬಲಿ, ಡಾ.ಸಂತೊಷ ಪಾಟೀಲ, ಡಾ.ಸಂಜೀವ ಸಜ್ಜನರ ಮುಂತಾದವರು ಉಪಸ್ಥಿತರಿದ್ದರು.