ಸಮಗ್ರ ನೀರಿನ ಶುದ್ಧೀಕರಣ ಘಟಕ ಉದ್ಘಾಟನೆ

KannadaprabhaNewsNetwork |  
Published : Oct 11, 2026, 03:00 AM IST
ಸಂಡೂರು ತಾಲೂಕಿನ ಜೋಗ ಗ್ರಾಮದಲ್ಲಿ ಶುಕ್ರವಾರ ತಾಪಂ ಇಒ ಮಡಗಿನ ಬಸಪ್ಪ ಅವರು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು. | Kannada Prabha

ಸಾರಾಂಶ

ತಾಲೂಕಿನ ಜೋಗ ಗ್ರಾಮದಲ್ಲಿ ಶುಕ್ರವಾರ ತಾಪಂ ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ ಅವರು ಸಮಗ್ರ ನೀರಿನ ಶುದ್ಧೀಕರಣ ಘಟಕವನ್ನು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸಂಡೂರು

ತಾಲೂಕಿನ ಜೋಗ ಗ್ರಾಮದಲ್ಲಿ ಶುಕ್ರವಾರ ತಾಪಂ ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ ಅವರು ಸಮಗ್ರ ನೀರಿನ ಶುದ್ಧೀಕರಣ ಘಟಕವನ್ನು ಉದ್ಘಾಟಿಸಿದರು.

ಘಟಕ ಉದ್ಘಾಟಿಸಿ ಮಾತನಾಡಿದ ತಾಪಂ ಕಾರ್ಯನಿರ್ವಹಕಾಧಿಕಾರಿ, ಜೋಗ ಗ್ರಾಮ ಸೇರಿದಂತೆ ಕೆಲವು ಗ್ರಾಮಗಳಲ್ಲಿನ ನೀರಿನಲ್ಲಿ ಫ್ಲೋರೈಡ್ ಪ್ರಮಾಣವು ನಿಗದಿತ ಮಿತಿಗಿಂತ ಹೆಚ್ಚಿರುವುದರಿಂದ, ಆರೋಗ್ಯ ಕಾಪಾಡಿಕೊಳ್ಳಲು ಶುದ್ಧೀಕರಿಸಿದ ನೀರನ್ನು ಜನತೆ ಬಳಸಬೇಕು. ಫ್ಲೋರೈಡ್ ನೀರನ್ನು ನಿರಂತರವಾಗಿ ಕುಡಿಯುವುದರಿಂದ ಹಲ್ಲುಗಳು ಹಳದಿ ಅಥವಾ ಕಂದು ಬಣ್ಣಕ್ಕೆತಿರುಗಿ ದುರ್ಬಲಗೊಳ್ಳುತ್ತವೆ. ಕೀಲುನೋವು, ಮಂಡಿನೋವು, ಮೂಳೆಗಳು ಬಾಗುವುದು ಮತ್ತು ನಡೆದಾಡುವುದಕ್ಕೂ ಕಷ್ಟವಾಗಲಿದೆ. ಅಶುದ್ಧ ನೀರಿನ ಸೇವನೆಯಿಂದ ಸಾಂಕ್ರಾಮಿಕ ರೋಗಗಳು, ವಾಂತಿ ಭೇದಿ ಹಾಗೂ ಜೀರ್ಣಾಂಗಕ್ರಿಯೆಗೆ ಸಂಬಂಧಿಸಿದ ಇತರ ದೀರ್ಘಕಾಲದ ಕಾಯಿಲೆಗಳು ಬರಬಹುದು. ಆದ್ದರಿಂದ ಜನತೆ ಶುದ್ಧೀಕರಿಸಿದ ನೀರನ್ನು ಕುಡಿಯಲು ಬಳಸಬೇಕು ಎಂದರು.

ಗ್ರಾಪಂ ಆಡಳಿತಾಧಿಕಾರಿ ನಾಗರಾಜ್, ಪಿಡಿಒ ಎಂ.ಡಿ. ಜುಬೇರ್‌ ಅಹಮದ್‌ ಅವರು ಮಾತನಾಡಿ, ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು. ಫಿಲ್ಟರ್ ನೀರು ಕುರಿತಂತೆ ಕೆಲವು ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಜಾಗೃತಿ ಮೂಡಿಸಲಾಗುವುದು ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜೆ.ಎಂ. ಚನ್ನಬಸಯ್ಯ, ಗ್ರಾಪಂ ಮಾಜಿ ಸದಸ್ಯರಾದ ಹುಲುಗಪ್ಪ, ಗ್ರಾಮದ ಮುಖಂಡರಾದ ಚನ್ನವೀರಪ್ಪಗೌಡ, ಎ. ಹೊನ್ನೂರಪ್ಪ, ಯಲ್ಲಪ್ಪ, ಎಚ್. ಸ್ವಾಮಿ, ಆಂಜನೇಯ, ಲಿಂಗಪ್ಪ, ಪಂಚಾಯಿತಿ ಸಿಬ್ಬಂದಿ ಕರಿಯಪ್ಪ, ವಿನೋದ, ಅಂಗನವಾಡಿ ಕಾರ್ಯಕರ್ತೆಯರಾದ ಭಾಗ್ಯಮ್ಮ, ವೆಂಕಮ್ಮ, ಪಾರ್ವತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಕ್ಕೆಜೋಳದ ಬೆಲೆ ಏರಿಕೆ; ರೈತರ ಕೈ ಖಾಲಿ
ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆ ಪ್ರಚಾರಕ್ಕೆ ಗಾಂಧಿ ಕೊಡುಗೆ ಅಪಾರ