ಮುಳಬಾಗಿಲು:
ಕಳೆದ ೮-೯ ದಿನಗಳಿಂದ ಹಸುಗಳಲ್ಲಿ ಭೇದಿ ಕಾಣಿಸಿಕೊಂಡಿದ್ದು, ಇದಕ್ಕೆ ಕೆಎಂಎಫ್ ಆಹಾರದಲ್ಲಿ ಮರಳು ಮಿಶ್ರಣವೇ ಕಾರಣ ಎಂದು ರೈತರು ದೂರಿದ್ದಾರೆ. ಒಬ್ಬ ರೈತ ಕಳುಹಿಸಿದ ವಿಡಿಯೋದಲ್ಲಿ ಒಂದು ಚೀಲದಲ್ಲಿ ೪ ರಿಂದ ೫ ಕೆಜಿ ಮರಳು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೂಕ ಪ್ರಾಣಿಗಳಿಗೆ ಮಾತು ಬರುವುದಿಲ್ಲ, ಹೊಟ್ಟೆ ತುಂಬಿಸಿಕೊಳ್ಳಲು ಮೇವು ತಿನ್ನುತ್ತವೆ. ಅಂತಹ ಪ್ರಾಣಿಗಳಿಗೆ ಮರಳು ತಿನ್ನಿಸುವುದು ಮನುಷ್ಯತ್ವವೇ ಎಂದು ಶಾಸಕರು ಪ್ರಶ್ನಿಸಿದ್ದಾರೆ.ರೈತರ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ೨೪ ಗಂಟೆಯೊಳಗೆ ಕ್ರಮ ಕೈಗೊಳ್ಳದಿದ್ದರೆ, ರೈತರೊಂದಿಗೆ ಡೇರಿ ಮುಂದೆ ಮೇವು ಸುರಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.