ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಪಿ.ಎಸ್.ದಿನೇಶ್ ಕುಮಾರ್ ವಸತಿ ಸಂಕೀರ್ಣವನ್ನು ಲೋಕಾರ್ಪಣೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲಾ ನ್ಯಾಯಾಂಗ ಹಾಗೂ ಲೋಕೋಪಯೋಗಿ ಇಲಾಖೆ ಆಶ್ರಯದಲ್ಲಿ ಮಂಗಳೂರಿನಲ್ಲಿ 998 ಲಕ್ಷ ರು.ಗಳಲ್ಲಿ ನಿರ್ಮಿಸಲಾದ ನ್ಯಾಯಾಧೀಶರ ವಸತಿ ಸಂಕೀರ್ಣ(ಬ್ಲಾಕ್-ಬಿ) ಶನಿವಾರ ಉದ್ಘಾಟನೆಗೊಂಡಿತು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಪಿ.ಎಸ್.ದಿನೇಶ್ ಕುಮಾರ್ ವಸತಿ ಸಂಕೀರ್ಣವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ದ.ಕ.ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್, ಹೈಕೋರ್ಟ್ ನ್ಯಾಯಮೂರ್ತಿ ಮೊಹಮ್ಮದ್ ನವಾಜ್, ಹೈಕೋರ್ಟ್ ಮಹಾ ವಿಲೇಖನಾಧಿಕಾರಿ ಕೆ.ಎಸ್.ಭರತ್ ಕುಮಾರ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ.ಜೋಶಿ, ಲೋಕೋಪಯೋಗಿ ಕೇಂದ್ರ ವಲಯ ಮುಖ್ಯ ಅಭಿಯಂತರ ಬಿ.ವಿ.ಜಗದೀಶ್, ಮಂಗಳೂರು ವಿಭಾಗ ಕಾರ್ಯನಿರ್ವಾಹಕ ಅಭಿಯಂತರ ಅಮರ್‌ನಾಥ್ ಜೈನ್, ಅಧೀಕ್ಷಕ ಅಭಿಯಂತರ ಗೋಕುಲ್‌ದಾಸ್ ಮತ್ತಿತರರಿದ್ದರು.
ಮಂಗ್ಳೂರಲ್ಲಿ ಟ್ವಿನ್ ಟವರ್ ಕೋರ್ಟ್ ಕಾಂಪ್ಲೆಕ್ಸ್ ಪ್ರಸ್ತಾ: ಮಂಗಳೂರಿನಲ್ಲಿ ಟ್ವಿನ್ ಟವರ್ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸುಮಾರು 123 ಕೋಟ ರು.ಗಳಲ್ಲಿ ಎರಡು ಟವರ್‌ಗಳ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣದ ಪ್ರಸ್ತಾಪ ಸರ್ಕಾರದ ಒಪ್ಪಿಗೆಗೆ ಬಾಕಿ ಇದೆ. ಅಲ್ಲದೆ ಬಂಟ್ವಾಳದಲ್ಲಿ 30 ಕೋಟಿ ರು.ಗಳಲ್ಲಿ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣದ ಪ್ರಸ್ತಾಪ ಇದೆ. ಮಂಗಳೂರಲ್ಲಿ ಉದ್ಘಾಟನೆಯಾದ ನ್ಯಾಯಾಧೀಶರ ವಸತಿ ಗೃಹ ನಾಲ್ಕು ಮಹಡಿ ಹೊಂದಿದ್ದು, ಎಂಟು ವಸತಿಯನ್ನು ಹೊಂದಿದೆ. ಪ್ರಸ್ತಾವಿತ ಟ್ವಿನ್ ಟವರ್‌ನಲ್ಲಿ ಅರ್ಬಿಟರೇಷನ್ ಎರಡು ಹಾಲ್, ಒಂತ್ತು ಕೋರ್ಟ್ ಹಾಲ್, ಬಾರ್ ಅಸೋಸಿಯೇಷನ್, ಪ್ರಾಸಿಕ್ಯೂಟರ್ ಚೇಂಬರ್, ತಳ ಅಂತಸ್ತಿನಲ್ಲಿ 120 ಕಾರು ಪಾರ್ಕಿಂಗ್, ಕೊನೆ ಅಂತಸ್ತಿನಲ್ಲಿ ಮ್ಯೂಸಿಯಂ ಇರಲಿದೆ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.