ರಾಮನಗರದಲ್ಲಿ ವೀರಶೈವ ಮಹಾಸಭಾ ಸದಸ್ಯರ ಪ್ರಮಾಣವಿಧಿ ಬೋಧನೆ

KannadaprabhaNewsNetwork |  
Published : Aug 02, 2024, 12:47 AM IST
1ಕೆಆರ್ ಎಂಎನ್ 2.ಜೆಪಿಜಿವೀರಶೈವ ಮಹಾಸಭಾ ಸದಸ್ಯರ ಪ್ರಮಾಣವಿಧಿ ಬೋಧನೆ ನಡೆಯಿತು. | Kannada Prabha

ಸಾರಾಂಶ

ರಾಮನಗರದ ಅರಳೇಪೇಟೆಯ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಮತ್ತು ಜಿಲ್ಲಾ ಘಟಕಕ್ಕೆ ಆಯ್ಕೆಯಾದ ನೂತನ ಸದಸ್ಯರಿಗೆ ಚುನಾವಣಾಧಿಕಾರಿಗಳು ಪ್ರಮಾಣವಿಧಿ ಬೋಧಿಸಿದರು.

-ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತಮ್ಮೆಲ್ಲರ ಸಹಕಾರ ನಮಗಿರಲಿ: ಯೋಗಾನಂದರಾಮನಗರ: ನಗರದ ಅರಳೇಪೇಟೆಯ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಮತ್ತು ಜಿಲ್ಲಾ ಘಟಕಕ್ಕೆ ಆಯ್ಕೆಯಾದ ನೂತನ ಸದಸ್ಯರಿಗೆ ಚುನಾವಣಾಧಿಕಾರಿಗಳು ಪ್ರಮಾಣವಿಧಿ ಬೋಧಿಸಿದರು.

ಜಿಲ್ಲಾ ಘಟಕ ಚುನಾವಣಾಧಿಕಾರಿ ಶಂಕರಪ್ಪ ಜಿಲ್ಲಾ ಘಟಕ್ಕೆ ಆಯ್ಕೆಯಾದ ಅಧ್ಯಕ್ಷ ಎಚ್.ಎಸ್. ಯೋಗಾನಂದ ಸೇರಿದಂತೆ 10 ಮಹಿಳಾ ಸದಸ್ಯರಿಗೆ 20 ಪುರುಷ ಸದಸ್ಯರಿಗೆ ಪ್ರಮಾಣ ವಿಧಿ ಬೋಧಿಸಿದರು.

ರಾಮನಗರ ತಾಲೂಕು ಘಟಕ ಚುನಾವಣಾಧಿಕಾರಿ ಮೃತ್ಯುಂಜಯ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್.ಶಂಕರಪ್ಪ ಸೇರಿದಂತೆ 7 ಮಹಿಳಾ ಸದಸ್ಯರಿಗೆ 13 ಪುರುಷ ಸದಸ್ಯರಿಗೆ ಪ್ರಮಾಣವಿಧಿ ಬೋಧಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್.ಯೋಗಾನಂದ್ ಮಾತನಾಡಿ, ಅಖಿಲ ಭಾರತ ವೀರಶೈವ ಮಹಾಸಭೆಯ ಸದಸ್ಯರು ಮತ್ತು ಮಠಮಾನ್ಯಗಳ ಸ್ವಾಮೀಜಿಗಳು, ಹಿರಿಯರು, ಹಿತೈಷಿಗಳು ನನ್ನ ಮೇಲೆ ವಿಶ್ವಾಸವಿಟ್ಟು ಚುನಾವಣೆಯಲ್ಲಿ ವಿಜಯ ಸಾಧಿಸಲು ನೆರವಾಗಿದ್ದಾರೆ. ಹಿಂದಿನಿಂದಲೂ ಸಮಾಜದ ಹಿತಚಿಂತಕನಾಗಿ ಜನರೊಂದಿಗೆ ಬಂದಿದ್ದೇನೆ. ಮುಂದೆ ಸಮಾಜಕ್ಕೆ ತನ್ನದೆ ಆದ ಕೊಡುಗೆ ನೀಡಲು ಚಿಂತನೆ ನಡೆಸಿದ್ದೇನೆ ಎಂದು ಹೇಳಿದರು.

ನನ್ನ ಜೊತೆ ಜಿಲ್ಲಾ ಮತ್ತು ತಾಲೂಕಿನಲ್ಲಿ ಸೇವಾ ಮನೋಭಾವನೆ ಉಳ್ಳ ಸದಸ್ಯರು ಆಯ್ಕೆಯಾಗಿದ್ದಾರೆ. ಅವರೆಲ್ಲರ ಸಹಕಾರ ಪಡೆದು ಸಮಾಜಕ್ಕೆ ಸೇವೆ ಸಲ್ಲಿಸಲು ಮುಂದಾಗುತ್ತೇವೆ. ಮುಂದೆ ಇದೇ ರೀತಿ ಚುನಾವಣೆಯಲ್ಲಿ ಕೊಟ್ಟ ಸಹಕಾರದಂತೆ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ಎಲ್ಲರ ಸಹಕಾರ ನಮ್ಮ ಮೇಲಿರಲಿ ಎಂದು ಹೇಳಿದರು.

ತಾಲೂಕು ಘಟಕ ಅಧ್ಯಕ್ಷ ಎಂ.ಎಸ್.ಶಂಕರಪ್ಪ ಮಾತನಾಡಿ, ಎರಡನೇ ಭಾರಿಗೆ ಮಹಾಸಭಾ ಸದಸ್ಯರು ನನ್ನನ್ನು ಆಯ್ಕೆ ಮಾಡಿದ್ದಾರೆ. ಸಮಾಜಕ್ಕೆ ನನ್ನದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಮತ್ತೆ ನನಗೆ ಸಮಾಜ ಸೇವೆಗೆ ಸಮಾಜದ ಗುರು ಹಿರಿಯರು ಆಶೀರ್ವದಿಸಿದ್ದಾರೆ ನಾಡಿನ ಮಠಾಧೀಶರ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಮತ್ತಷ್ಟು ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ವೀರಶೈವ ಮುಖಂಡರಾದ ಎಂ.ಆರ್.ಶಿವಕುಮರಸ್ವಾಮಿ, ಗುರುಮಾದಪ್ಪ, ಜಿಲ್ಲಾ ಘಟಕ ಚುನಾವಣಾಧಿಕಾರಿ ಶಂಕರಪ್ಪ ಮಾತನಾಡಿದರು. ನೂತನ ಆಯ್ಕೆಯಾದ ತಾಲೂಕು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರಿಗೆ ರಾಮನಗರ ಟೌನ್ ವೀರಶೈವ ಮುಖಂಡರಿಂದ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಕೈಲಾಶ್ ಶಂಕರ್, ರೇಣುಕಪ್ಪ, ಸರಸ್ವತಮ್ಮ, ಸಿದ್ದಲಿಂಗಪ್ಪ, ಶಿವಲಿಂಗಯ್ಯ, ದೀಪಕ್, ಪುಷ್ಪಲತ, ಮಹದೇವಯ್ಯ, ಉಮೇಶ್, ಶಂಕರ್, ಜಗದೀಶ್, ಮಹೇಶ್, ರೇಣುಕಾಪ್ರಸಾದ್, ಮಹದೇವ್, ನಾಗೇಶ್, ಬಾಲರಾಜು, ಶೋಭಾ ಸಿದ್ದಲಿಂಗಮೂರ್ತಿ, ಸಾಂಬಶಿವಯ್ಯ, ಗಣೇಶ್, ಸೋಮೇಶ್, ಅಕ್ಕಮಹದೇವಮ್ಮ, ರೋಹಿತ್, ಸರಸ್ವತಿ, ರುದ್ರ, ಮನು, ಬಸವರಾಜಶಾಸ್ತ್ರಿ, ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

PREV