ಕೊಂಗರಹಳ್ಳಿಯಲ್ಲಿ ಮೋದಿಕೇರ್ ಕೇಂದ್ರ ಉದ್ಘಾಟನೆ

KannadaprabhaNewsNetwork | Published : Jul 16, 2024 12:37 AM

ಸಾರಾಂಶ

ಹನೂರು ಸಮೀಪದ ಕಾಮಗೆರೆ ಗ್ರಾಮದಲ್ಲಿ ಮೋದಿಕೇರ್ ಸೆಂಟರ್ ಉದ್ಘಾಟನೆಯನ್ನು ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರು ನೆರವೇರಿಸಿದರು.

ಕನ್ನಡಪ್ರಭವಾರ್ತೆ ಹನೂರು

ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮೋದಿಕೇರ್ ಒಂದು ಉತ್ತಮ ವೇದಿಕೆಯಾಗಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಾಜಿ ಶಾಸಕಿ ಪರಿಮಳ ನಾಗಪ್ಪ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಕಾಮಗೆರೆ (ಕೊಂಗರಹಳ್ಳಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಹಳೆ ಗ್ರಾಪಂ ಸಮೀಪದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಮೋದಿಕೇರ್ ಕೇಂದ್ರವನ್ನು ಟೇಪ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಮೋದಿಕೇರ್ ಗ್ರಾಮೀಣ ಸೊಗಡು ಹಾಗೂ ಸ್ವದೇಶಿ ಉತ್ಪನ್ನಗಳ ಸಮ್ಮಿಲನವೇ ಆಗಿದೇ. ಈ ದಿಸೆಯಲ್ಲಿ ಗ್ರಾಹಕರು ಇಲ್ಲಿ ದೊರೆಯುವ ಗೃಹ ಬಳಕೆ ಹಾಗೂ ಆರೋಗ್ಯ ವೃದ್ಧಿಯ ಉತ್ಪನ್ನಗಳನ್ನು ಖರೀದಿಸಿ. ಮೋದಿಕೆರ್‌ನಲ್ಲಿ ಸಿಗುವಂತಹ ಉತ್ಪನ್ನಗಳನ್ನು ನಾನು ಕೂಡ ಹಲವಾರು ವರ್ಷಗಳಿಂದ ಬಳಸುತ್ತಿದ್ದೇನೆ. ಇಲ್ಲಿ ಸಿಗುವ ದೇಶಿ ಉತ್ಪನ್ನಗಳನ್ನು ಬಳಸುವುದರಿಂದ ಉತ್ತಮ ಅರೋಗ್ಯ ಮತ್ತು ನಾವು ಆರ್ಥಿಕವಾಗಿ ಸದೃಢರಾಗಬಹುದು. ಕಾಮಗೆರೆ ಗ್ರಾಮದಲ್ಲಿ ಪ್ರಾರಂಭಿಸಲಾಗಿರುವ ನೂತನ ಮೋದಿಕೇರ್ ಯಶಸ್ಸನ್ನು ಗಳಿಸಲಿ ಎಂದು ಆಶಿಸಿದರು.

ಮೋದಿಕೆರ್‌ನ ಜಿಆರ್‌ಡಿಡಿ ಪ್ರವೀಣ್ ಭಾರಧ್ವಜ್ ಮಾತನಾಡಿ, ಉತ್ತಮ ಪ್ರೊಡಕ್ಟ್ ಗಳನ್ನು ಸಾರ್ವಜನಿಕರಿಗೆ ಒದಗಿಸುವ ಮೋದಿ ಕೇರ್ ಉತ್ಪನ್ನ ಬಳಕೆ ಮಾಡುವುದರಿಂದ ಆರೋಗ್ಯದ ಜೊತೆಗೆ ಆರ್ಥಿಕ ಲಾಭ ಇದೆ. ರಾಜ್ಯ ಹಾಗೂ ದೇಶದ ಜನರಿಗೆ ಮೋದಿಕೇರ್ ಪ್ರೊಡಕ್ಟ್ ತಲುಪಬೇಕು. ಜಗಜ್ಯೋತಿ ಬಸವಣ್ಣ ಅವರು ಹೇಳಿದ ಹಾಗೆ ಕಾಯಕವೇ ಕೈಲಾಸವೆಂಬುದನ್ನು ನಾವು ಪಾಲಿಸಬೇಕು.

ಮೋದಿ ಕೇರ್ ಎನ್ನುವುದು ಕೇವಲ ಒಂದು ಅಂಗಡಿಯಲ್ಲ ಜನರ ಆರೋಗ್ಯದ ಜೊತೆ ಅಭಿವೃದ್ಧಿ ಹೊಂದುವಂತ ಒಳ್ಳೆಯ ಯೋಜನೆ. ಇಲ್ಲಿ ಗ್ರಾಹಕರು ಖರೀದಿ ಮಾಡಿದರೆ ಅವರು ಕೂಡ ಬಿಸಿನೆಸ್ ಮ್ಯಾನ್ ಆಗಬಹುದು ಅವರಿಗೂ ಲಾಭ ಇದೆ ಮತ್ತೆ ಅರೋಗ್ಯವು ಕೂಡ ಚೆನ್ನಾಗಿರುತ್ತದೆ. ಕೊಂಗರಹಳ್ಳಿ ಕಾಮಗೆರೆ ಗ್ರಾಮದಲ್ಲಿ ಮೋದಿ ಕೇರ್ ಆರಂಭ ಮಾಡಿರುವ ನಲಿಕಲಿ ಖ್ಯಾತಿಯ ಕೃಷ್ಣ ಶ್ವೇತಾ ಅವರ ಮಗ ಮೋಹಿತ್ ಅವರಿಗೆ ಶುಭವಾಗಲಿ ಎಂದು ಹಾರೈಸಿ ಶುಭ ಕೋರಿದರು.

ಮೋದಿಕೇರ್ ನ ಸುನಿತಾ ಮಾತನಾಡಿ, ಸರ್ಕಾರಿ ಉದ್ಯೋಗ ಮಾಡುತ್ತಿದ್ದ ಹಲವಾರು ವ್ಯಕ್ತಿಗಳು ನಮ್ಮ ಮೋದಿಕೇರ್ ಪ್ರಾಡಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಸಕರಾತ್ಮಕ ಬದಲಾವಣೆಗೆ ಇದು ಪ್ರಾರಂಭ. ಮೋದಿಕೇರ್ ಎನ್ನುವುದು ಅಮೃತವಿದ್ದಂತೆ, ಉತ್ತಮ ಆರೋಗ್ಯದ ಜೊತೆ ಆರ್ಥಿಕವಾಗಿ ಸದೃಢರಾಗಲು ಮೋದಿ ಕೇರ್ ಪ್ರಾಡಕ್ಟ್ ಉಪಯೋಗಿಸಿ ಎಂದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಪ್ರಜಾಪಿತ ಬ್ರಹ್ಮ ಕುಮಾರಿ ವಿದ್ಯಾಪೀಠದ ಬಿಂದು, ಕೊಂಗರಹಳ್ಳಿ ಜೆಎಸ್ಎಸ್ ಶಾಲೆಯ ಮುಖ್ಯ ಶಿಕ್ಷಕರು ವಸಂತ ಕುಮಾರ್, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಜಯಮ್ಮ, ಗ್ರಾಪಂ ಅಧ್ಯಕ್ಷ ಚಿಕ್ಕಸ್ವಾಮಿ, ಚೇತನ್ ಬಾರಧ್ವಜ್, ಕಾರ್ತಿಕ್, ಚಂದ್ರು, ಛಾಯಾ, ನಾಗೇಂದ್ರ, ಇಮ್ರಾನ್ ಪಾಷ, ರಾಜಹುಲಿ, ಸ್ವರೂಪ, ಮಂಜು, ರವೀಂದ್ರ, ಬಸವನಾಯ್ಕ, ಕುಮಾರ್, ಗೋಪಾಲ್ ಕೃಷ್ಣ ಇದ್ದರು.

Share this article