ಮುಷ್ತಾಕ್‌ ದಸರಾ ಉದ್ಘಾಟನೆ ಸಾಂಸ್ಕೃತಿಕ ಉತ್ಸವಕ್ಕೆ ಗರಿಮೆ: ಪಾಟೀಲ

KannadaprabhaNewsNetwork |  
Published : Aug 30, 2025, 01:01 AM IST
ಪೋಟೋ ಕ್ಯಾಪ್ಸನ್:ಡಂಬಳ ಗ್ರಾಮದ ಐತಿಹಾಸಿಕ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ರೋಣ ಶಾಸಕ ಜಿ.ಎಸ್.ಪಾಟೀಲ. | Kannada Prabha

ಸಾರಾಂಶ

ಕನ್ನಡಕ್ಕೆ ಮೊದಲ ಬೂಕರ್‌ ಪ್ರಶಸ್ತಿ ತಂದು ಕೊಡುವ ಮೂಲಕ ನಾಡಿನ ಕೀರ್ತಿ ಎತ್ತಿ ಹಿಡಿದಿರುವ ಹಿರಿಯ ಸಾಹಿತಿ ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟನೆ ಮಾಡುತ್ತಿರುವುದು ಸಾಂಸ್ಕೃತಿಕ ಉತ್ಸವಕ್ಕೆ ಗರಿಮೆಯಾಗಿದೆ. ಇದನ್ನು ಸಹಿಸದ ಮಾಜಿ ಸಂಸದ ಪ್ರತಾಪ ಸಿಂಹ ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂದು ಶಾಸಕ ಜಿ.ಎಸ್‌. ಪಾಟೀಲ ಕಿಡಿಕಾರಿದ್ದಾರೆ.

ಡಂಬಳ: ಕನ್ನಡಕ್ಕೆ ಮೊದಲ ಬೂಕರ್‌ ಪ್ರಶಸ್ತಿ ತಂದು ಕೊಡುವ ಮೂಲಕ ನಾಡಿನ ಕೀರ್ತಿ ಎತ್ತಿ ಹಿಡಿದಿರುವ ಹಿರಿಯ ಸಾಹಿತಿ ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟನೆ ಮಾಡುತ್ತಿರುವುದು ಸಾಂಸ್ಕೃತಿಕ ಉತ್ಸವಕ್ಕೆ ಗರಿಮೆಯಾಗಿದೆ. ಇದನ್ನು ಸಹಿಸದ ಮಾಜಿ ಸಂಸದ ಪ್ರತಾಪ ಸಿಂಹ ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂದು ಶಾಸಕ ಜಿ.ಎಸ್‌. ಪಾಟೀಲ ಕಿಡಿಕಾರಿದ್ದಾರೆ.

ಡಂಬಳ ಗ್ರಾಮದ ಐತಿಹಾಸಿಕ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ವಾಸಿಸುತ್ತಿರುವ ಎಲ್ಲ ಜಾತಿಯ ಜನರು ಭಾರತೀಯರೆ ಆಗಿದ್ದಾರೆ. ಹೀಗಾಗಿ ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಅವರನ್ನು ಆಹ್ವಾನಿಸಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಕನ್ನಡದ ಲೇಖಕಿಯಾಗಿ ಬಾನು ಮುಸ್ತಾಕ್‌ ಬೂಕರ್‌ ಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕನ್ನಡ ಉಳಿಸುವ ಕೆಲಸ ಮಾಡುತ್ತಿರುವುದರಿಂದ ದಸರಾ ಉದ್ಘಾಟಿಸಲು ಸರ್ಕಾರ ನಿರ್ಧಾರ ಮಾಡಿರುವುದು ಸರಿಯಾಗಿದೆ. ಆದರೆ ಪ್ರತಿ ಬಾರಿಯೂ ವಿರೋಧ ಪಕ್ಷದವರು ಆಡಳಿತ ಪಕ್ಷದವರ ವಿರುದ್ಧ ಟೀಕೆ ಮಾಡುವುದು ಸಹಜವಾಗಿದೆ ಎಂದರು.

ಬಿಜೆಪಿ ಎಂದೂ ನಾಡಿನ ಹಿತಾಸಕ್ತಿಗಾಗಿ ಇಲ್ಲಿನ ಜನರ ಪರವಾಗಿರುವವರಲ್ಲ, ಬದಲಾಗಿ ಜನರ ಭಾವನೆಗಳನ್ನು ಬಂಡವಾಳ ಮಾಡಿಕೊಳ್ಳುವುದು ಇವರ ಕೆಲಸವಾಗಿದೆ. ಮೈಸೂರು ಮಹಾರಾಜರು ಸರ್ವಧರ್ಮ ಸಹಿಷ್ಣುಗಳಾಗಿದ್ದವರು. ಆದರೆ ರಾಜವಂಶದ ಬಗ್ಗೆ ಜನರಿಗಿರುವ ಗೌರವ ಭಾವನೆ ಕೆಡಿಸುತ್ತಿರುವುದು ಬಿಜೆಪಿ ಹಾಗೂ ಪ್ರತಾಪ್ ಸಿಂಹ ಅವರ ಹೀನ ಮನಸ್ಥಿತಿ ಬಿಂಬಿಸುತ್ತದೆ. ಅಲ್ಲದೆ ಬಿಜೆಪಿಯ ಮಹಿಳಾ ವಿರೋಧಿ ಭಾವನೆ ಇದು ತೋರಿಸುತ್ತದೆ. ಮೈಸೂರಿನ ಇತಿಹಾಸ ಅರಿಯದ ಪ್ರತಾಪ್‌ಸಿಂಹ ಹಾಗೂ ಬಿಜೆಪಿಯವರು ಜನರ ಭಾವನೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗೋಣಿಬಸಪ್ಪ ಎಸ್.ಕೊರ್ಲಹಳ್ಳಿ, ಬಸುರಡ್ಡಿ ಬಂಡಿಹಾಳ, ಮರಿಯಪ್ಪ ಸಿದ್ದಣ್ಣವರ, ಬಸುರಾಜ ಪೂಜಾರ, ಮಹೇಶ ಗಡಗಿ, ಮಹೇಶ ಕೊರ್ಲಹಳ್ಳಿ, ಗೌಸಿದ್ದಪ್ಪ ಬಿಸನಳ್ಳಿ, ಬಾಬು ಮೂಲಿಮನಿ, ಅನಿಲ ಪಲ್ಲೇದ, ಮುತ್ತಣ್ಣ ಕೊಂತಿಕಲ್ಲ, ಮಾರುತಿ ಹೊಂಬಳ, ಸಿದ್ದಲಿಂಗಯ್ಯ ಸ್ಥಾವರಮಠ, ಮಲ್ಲಿಕಾರ್ಜುನ ಪ್ಯಾಟಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದುವರೆ ಲಕ್ಷ ರು ವ್ಯಾಪಾರ ಮಾಡಿದ ಚಿಣ್ಣರು
ಪವರ್ ಶೇರಿಂಗ್ ಗೊಂದಲದಿಂದ ರಾಜ್ಯದಲ್ಲಿ ಅಸ್ಥಿರತೆ, ಅರಾಜಕತೆ ಸೃಷ್ಟಿ