ಸೆಪ್ಟೆಂಬರ್‌ 26 ರಂದು ನಾಗಪ್ಪಶೆಟ್ಟಿ ಡಯಾಲಿಸಿಸ್ ಸೆಂಟರ್ ಉದ್ಘಾಟನೆ: ಟ್ರಸ್ಟಿನ ಡಾ.ಆರ್.ಎಸ್.ನಾಗಾರ್ಜುನ್

KannadaprabhaNewsNetwork |  
Published : Sep 25, 2024, 12:49 AM IST
24ಸಿಎಚ್‌ಎನ್51ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ರೋಟರಿ ಡಯಾಲೀಸಿಸ್ ಚಾರಿಟಬಲ್ ಟ್ರಸ್ಟ್ನ ಡಾ. ಆರ್. ಎಸ್. ನಾಗಾರ್ಜುನ್ ಮಾತನಾಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ಎಲ್.ನಾಗರಾಜು, ಕಾರ್ಯದರ್ಶಿ ಗುರುಸ್ವಾಮಿ  ರೋಟರಿ ಡಯಾಲಿಸಿಸ್ ಟ್ರಸ್ಟ್ನ ರಮೇಶ್, ಆರ್. ಎಂ. ಸ್ವಾಮಿ, ಸುಭಾಷ್, ಚಂದ್ರಶೇಖರ್ ಇದ್ದಾರೆ. | Kannada Prabha

ಸಾರಾಂಶ

ನಗರದ ರೋಟರಿ ಭವನದ ಆವರಣದಲ್ಲಿ ತೆರೆದಿರುವ ರೋಟರಿ ಬಿಎಸ್‌ವಿ ನಾಗಪ್ಪಶೆಟ್ಟಿ ಡಯಾಲಿಸಿಸ್ ಸೆಂಟರ್ ಉದ್ಘಾಟನೆಯು ಸೆ.26ರ ಗುರುವಾರ ಸಂಜೆ 5ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಟ್ರಸ್ಟಿನ ಡಾ.ಆರ್.ಎಸ್. ನಾಗಾರ್ಜುನ್ ಹೇಳಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ರೋಟರಿ ಡಯಾಲಿಸಿಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ರೋಟರಿ ಭವನದ ಆವರಣದಲ್ಲಿ ತೆರೆದಿರುವ ರೋಟರಿ ಬಿಎಸ್‌ವಿ ನಾಗಪ್ಪಶೆಟ್ಟಿ ಡಯಾಲಿಸಿಸ್ ಸೆಂಟರ್ ಉದ್ಘಾಟನೆಯು ಸೆ.26ರ ಗುರುವಾರ ಸಂಜೆ 5ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಟ್ರಸ್ಟಿನ ಡಾ.ಆರ್.ಎಸ್. ನಾಗಾರ್ಜುನ್ ಹೇಳಿದರು.ನಗರದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈಸೂರಿನ ರೋಟರಿ ಕ್ಲಬ್, ಬೆಂಗಳೂರಿನ ಹೈವರಿ ರೋಟರಿ ಹಾಗೂ ಬಿಎಸ್‌ವಿ ಫೌಂಡೇಷನ್ ಹಾಗೂ ದಾನಿಗಳ ಸಹಾಯದಿಂದ ಸುಮಾರು 1ಕೋಟಿ 10 ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ 10 ಡಯಾಲೀಸಿಸ್ ಮಷಿನ್‌ಗಳುಳ್ಳ ಸುಸಜ್ಜಿತ ಕೇಂದ್ರದ ಉದ್ಘಾಟನೆ ನಡೆಯಲಿದೆ ಎಂದರು.ಬಡ ಮತ್ತು ಮಧ್ಯಮ ವರ್ಗದ ಡಯಾಲಿಸಿಸ್ ಮಂದಿಗೆ ಅತ್ಯಂತ ರಿಯಾಯ್ತಿ ದರದಲ್ಲಿ ಸೇವೆ ನೀಡಬೇಕೆಂಬ ಸದುದ್ದೇಶದಿಂದ ಈ ಕೇಂದ್ರವನ್ನು ತೆರೆಯಲಾಗಿದೆ, ಹಿಂದೆ ನಗರದ ಕ್ಷೇಮ ಆಸ್ಪತ್ರೆಯಲ್ಲಿ 3 ಮಷಿನ್‌ಗಳನ್ನಿಟ್ಟು ಕೇವಲ 499 ರು.,ಗೆ ಸೇವೆಯನ್ನು ನೀಡಲಾಗುತ್ತಿತ್ತು. ಇದಕ್ಕೆ ರೋಟರಿ ಕ್ಲಬ್‌ಗಳು ಸೇರಿದಂತೆ ಹಲವಾರು ದಾನಿಗಳು ಕೈಜೋಡಿಸಿದ್ದರು, ಇದಕ್ಕೆ ಒಳ್ಳೆಯ ಹೆಸರು ಬಂದಿತ್ತು ಎಂದರು. ಈಗ ಒಟ್ಟು ಅತ್ಯಾಧುನಿಕ 10 ಡಯಾಲಿಸಿಸ್ ಮಷಿನ್‌ಗಳನ್ನು ನಮ್ಮ ರೋಟರಿ ಭವನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ತೆರೆಯಲಾಗಿದ್ದು ಅತ್ಯಂತ ಕಡಿಮೆ ದರದಲ್ಲಿ ಸೇವೆ ನೀಡಬೇಕೆಂದು ಚರ್ಚಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಡಯಾಲಿಸಿಸ್ ಸೆಂಟರ್‌ನಲ್ಲಿ ಸುಸಜ್ಜಿತವಾದ ಐಸಿಯು, ವೈದ್ಯರ ತಂಡ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ರೋಗಿಗಳಿಗೆ ಬೇಕಾದ ಎಲ್ಲ ಸೌಲಭ್ಯವನ್ನು ಒದಗಿಸಲಾಗಿದೆ. ಒಂದು ಯಂತ್ರವನ್ನು ಎಚ್‌ಐವಿ ಮತ್ತು ಇತರ ಸೋಂಕಿತರಿಗೆ ಮೀಸಲಿಡಲಾಗುವುದು ಎಂದರು. ಕೇಂದ್ರದ ಉದ್ಘಾಟನೆಯನ್ನು ಮಂಗಳೂರು ಗಣೇಶ ಬೀಡಿ ವರ್ಕ್ಸ್‌ ಆಡಳಿತ ನಿರ್ದೇಶಕ ಜಗನ್ನಾಥ ಸೆನೈ ಮತ್ತು ಮೈಸೂರು ಎನ್.ಆರ್. ಗ್ರೂಪ್ಸ್ ಮತ್ತು ಕಂಪನಿ ಚೇರ್ಮನ್ ಆರ್. ಗುರು ನೆರವೇರಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಬಿಎಸ್‌ವಿ ಫೌಂಡೇಷನ್‌ನ ವೆಂಕಟನಾಗಪ್ಪಶೆಟ್ಟಿ, ಡಿಸ್ಟ್ರಿಕ್ ಗೌರ್ನರ್ ವಿಕ್ರಮ್‌ದತ್ತ ಭಾಗವಹಿಸಲಿದ್ದಾರೆ ಎಂದರು. ಅತಿಥಿಗಳಾಗಿ ಡಿಎಚ್‌ಒ ಡಾ.ಚಿದಂಬರ, ಡಾ.ಅನಿಕೇತ್ ಪ್ರಭಾಕರ್ ಇತರರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಎಲ್. ನಾಗರಾಜು, ಕಾರ್ಯದರ್ಶಿ ಗುರುಸ್ವಾಮಿ ರೋಟರಿ ಡಯಾಲಿಸಿಸ್ ಟ್ರಸ್ಟ್‌ನ ರಮೇಶ್, ಆರ್.ಎಂ. ಸ್ವಾಮಿ, ಸುಭಾಷ್, ಚಂದ್ರಶೇಖರ್ ಇದ್ದರು.24ಸಿಎಚ್‌ಎನ್51ಚಾಮರಾಜನಗರದ ಪತ್ರಿಕಾಗೋಷ್ಠಿಯಲ್ಲಿ ರೋಟರಿ ಡಯಾಲೀಸಿಸ್ ಚಾರಿಟಬಲ್ ಟ್ರಸ್ಟ್‌ನ ಡಾ.ಆರ್.ಎಸ್. ನಾಗಾರ್ಜುನ್ ಮಾತನಾಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ಎಲ್. ನಾಗರಾಜು, ಕಾರ್ಯದರ್ಶಿ ಗುರುಸ್ವಾಮಿ ರೋಟರಿ ಡಯಾಲಿಸಿಸ್ ಟ್ರಸ್ಟ್‌ನ ರಮೇಶ್, ಆರ್. ಎಂ. ಸ್ವಾಮಿ, ಸುಭಾಷ್, ಚಂದ್ರಶೇಖರ್ ಇದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ