ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ

KannadaprabhaNewsNetwork | Published : Jan 5, 2025 1:33 AM

ಸಾರಾಂಶ

ಚಿಕ್ಕಮಗಳೂರು, ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧ್ಯಕ್ಷರಾಗಿ ದೇವೇಂದ್ರ, ಗೌರವಾಧ್ಯಕ್ಷರಾಗಿ ಸಿ.ಎಸ್.ಮಂಜುನಾಥಸ್ವಾಮಿ ಸೇರಿದಂತೆ 30ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧ್ಯಕ್ಷರಾಗಿ ದೇವೇಂದ್ರ, ಗೌರವಾಧ್ಯಕ್ಷರಾಗಿ ಸಿ.ಎಸ್.ಮಂಜುನಾಥಸ್ವಾಮಿ ಸೇರಿದಂತೆ 30ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಟಿ.ಪದ್ಮರಾಜು (ಕಾರ್ಯದರ್ಶಿ), ಪೂರ್ಣೇಶ್ (ಖಜಾಂಚಿ), ಸುಂದರೇಶ್ (ಕಾರ್ಯಾಧ್ಯಕ್ಷರು), ಸುದೀಪ್, ಕೆ.ಬಿ.ಶೇಖರ್ (ಹಿರಿಯ ಉಪಾಧ್ಯಕ್ಷರು), ಉಮೇಶ್, ಕೆ.ಆರ್.ಶಿವಕುಮಾರ್, ಈಶ್ವರಪ್ಪ, ಪೂರ್ಣೇಶ್, ಚೇತನ್ (ಉಪಾಧ್ಯಕ್ಷರು), ಡಾ. ಜಗದೀಶ್, ಅಶ್ವತ್‌ರಾಜ್ ಅರಸ್ (ಸಹ ಕಾರ್ಯದರ್ಶಿ), ಕುಲದೀಪ್, ಪ್ರಸನ್ನಕುಮಾರ್, ದರ್ಶನ್, ಮಹೇಶ್ವರಪ್ಪ, ಜಗದೀಶ್, ಸುನೀಲ್ (ಜಂಟಿ ಕಾರ್ಯದರ್ಶಿ).ಪಿ.ಲೋಹಿತ್‌ಕುಮಾರ್, ಮಂಜುನಾಥ್, ಡಾ.ರಘು, ಮಹೇಶ್, ವಸಂತ್‌ಕುಮಾರ್, ಜಗನ್ನಾಥ್ (ಸಂಘಟನಾ ಕಾರ್ಯದರ್ಶಿ), ಕೃತಿಕಾ ಹೆಚ್.ಟಿ.ಗಿರೀಶ್, ಪುಷ್ಪಾವತಿ ಈಶ್ವರಪ್ಪ (ಸಾಂಸ್ಕೃತಿಕ ಕಾರ್ಯದರ್ಶಿ), ಸಂತೋಷ್, ಕುಮಾರಸ್ವಾಮಿ (ಕ್ರೀಡಾ ಕಾರ್ಯದರ್ಶಿ), ಅನಿಲ್‌ಕುಮಾರ್ (ಆಂತರಿಕ ಲೆಕ್ಕ ಪರಿಶೋಧಕ) ಅವರುಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಮಾತನಾಡಿ, ಸಂಘ ಮುಂದಿನ 2024- 29 ರ ಅವಧಿಯಲ್ಲಿ ಅತ್ಯುತ್ತಮ ಜವಾಬ್ದಾರಿ ಹೊತ್ತು, ಸಮುದಾಯ ಭವನ ಪೂರ್ಣಗೊಳಿಸುವುದು, 30 ಮಂದಿ ನೌಕರರಿಗೆ ಸೇವಾ ರತ್ನ ಪ್ರಶಸ್ತಿ ನೀಡುವುದು, ಉತ್ತಮ ದರ್ಜೆ ಕ್ಯಾಲೆಂಡರ್ ನೌಕರರಿಗೆ ತಲುಪಿಸುವ ಕಾರ್‍ಯಕ್ರಮ ಹಮ್ಮಿಕೊಂಡಿದೆ ಎಂದರು.

ಸಂಘದ ನೌಕರರ ಹಿತದೃಷ್ಟಿಯಿಂದ ಸಾಮಾಜಿಕ ಕಾರ್ಯ ಹಮ್ಮಿಕೊಳ್ಳುವ ಸಲುವಾಗಿ ಅತ್ಯುನ್ನತ ಅಧಿಕಾರಿಗಳ ಜೊತೆಗೂಡಿ ಸ್ಪರ್ಧಾತ್ಮಕ ಕಾರ್‍ಯಾಗಾರ ಹಮ್ಮಿಕೊಂಡು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಸಂಘದಿಂದ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.ನಿರುದ್ಯೋಗದಿಂದ ತತ್ತರಿಸುತ್ತಿರುವ ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಜಿಲ್ಲೆಯಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡು ಸ್ವ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರ ಮತ್ತು ಕುಟುಂಬಸ್ಥರಿಗೆ ಆರೋಗ್ಯ ತಪಾಸಣೆಗಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿ ಕರೆಸಿ ಉಚಿತ ಆರೋಗ್ಯ ಶಿಬಿರ ನಡೆಸಲಾಗುವುದು ಎಂದು ತಿಳಿಸಿದರು.

4 ಕೆಸಿಕೆಎಂ 3ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಜಿಲ್ಲಾಧ್ಯಕ್ಷ ದೇವೇಂದ್ರ ಸೇರಿದಂತೆ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

Share this article