ಇಂದು ಶಿವಸಿಂಪಿ ಸಮಾಜ ಪದಾಧಿಕಾರಿಗಳಪದಗ್ರಹಣ, ಕನ್ನಡ ರಾಜ್ಯೋತ್ಸವ, ಸನ್ಮಾನ

KannadaprabhaNewsNetwork |  
Published : Nov 30, 2024, 12:45 AM IST
28ಕೆಡಿವಿಜಿ2 -ದಾವಣಗೆರೆಯಲ್ಲಿ ಗುರುವಾರದ ಶಿವಸಿಂಪಿ ಸಮಾಜದ ನೂತನ ಜಿಲ್ಲಾಧ್ಯಕ್ಷ ಚಿಂದೋಡಿ ಎಲ್.ಚಂದ್ರಧರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಶಿವಸಿಂಪಿ ಸಮಾಜದ 2024ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ, ಕರ್ನಾಟಕ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನ.30ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ನೂತನ ಅಧ್ಯಕ್ಷ, ಹಿರಿಯ ಉದ್ಯಮಿ ಚಿಂದೋಡಿ ಎಲ್. ಚಂದ್ರಧರ್ ಹೇಳಿದ್ದಾರೆ.

- ಶೀಘ್ರವೇ ರಾಜ್ಯಮಟ್ಟದ ಸಮ್ಮೇಳನ: ಅಧ್ಯಕ್ಷ ಚಂದ್ರಧರ್‌ - - - ದಾವಣಗೆರೆ: ಶಿವಸಿಂಪಿ ಸಮಾಜದ 2024ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ, ಕರ್ನಾಟಕ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನ.30ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ನೂತನ ಅಧ್ಯಕ್ಷ, ಹಿರಿಯ ಉದ್ಯಮಿ ಚಿಂದೋಡಿ ಎಲ್. ಚಂದ್ರಧರ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಟಿಯಲ್ಲಿ ಮಾತನಾಡಿದ ಅವರು, ಸಂಜೆ 5 ಗಂಟೆಗೆ ಬನಹಟ್ಟಿ ಮಹಾಂತ ಮಂದಾರ ಮಠದ ಶ್ರೀ ಮಹಾಂತ ದೇವರ ಸಾನಿಧ್ಯ, ಅಧ್ಯಕ್ಷ ಚಿಂದೋಡಿ ಎಲ್.ಚಂದ್ರಧರ್ ಅಧ್ಯಕ್ಷತೆಯಲ್ಲಿ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸಮಾರಂಭ ಉದ್ಘಾಟಿಸುವರು ಎಂದರು.

ಮುಧೋಳ ಬಾಪೂಜಿ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಬಸವರಾಜ ಉತ್ತಂಗಿ, ನಗರಸಭೆ ಮಾಜಿ ಸದಸ್ಯೆ ಶಾಮನೂರು ಗೀತಾ ಮುರುಗೇಶ ಹಾಗೂ ಮಠ ಮಾರ್ಗದರ್ಶನ ಸಂಪಾದಕ ಸಂತೋಷ ದಾವಣಗೆರೆಯವರನ್ನು ಸನ್ಮಾನಿಸಲಾಗುವುದು. ಸಮಾಜದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವೂ ನಡೆಯಲಿದೆ ಎಂದರು.

ಎಸ್‌ಎಸ್‌ ಹೈಟೆಕ್ ಆಸ್ಪತ್ರೆ ಸಮೀಪದ ಜಯನಗರದಲ್ಲಿ ಶಿವಸಿಂಪಿ ಸಮಾಜಕ್ಕೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ನೀಡಲಾಗಿದೆ. ನಿವೇಶನದಲ್ಲಿ ಸಭಾ ಭವನ, ಕಲ್ಯಾಣ ಮಂಟಪ, ಮಹಿಳೆಯರಿಗಾಗಿ ಕಾಯಕ ದಾಸೋಹ ಮಂಟಪ ನಿರ್ಮಿಸುವ ಉದ್ದೇಶವಿದೆ ಎಂದರು.

ಶೀಘ್ರವೇ ಶಿವಸಿಂಪಿ ಸಮಾಜದ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಲು ಚರ್ಚಿಸಲಾಗುತ್ತಿದೆ. ಸಮಾಜದ ಗುರುಗಳಾದ ಶಿವದಾಸಿಮಯ್ಯ ಅವರ ಕುರುಹುಗಳನ್ನು ಕ್ರೋಢೀಕರಿಸಿ, ಸಂಶೋಧನಾ ಕೇಂದ್ರಕ್ಕೆ ನೀಡಲಾಗಿದೆ. ಆದಷ್ಟು ಬೇಗನೆ ಶ್ರೀ ಶಿವದಾಸಿಮಯ್ಯನವರ ಕುರಿತಂತೆ ಸಂಶೋಧನಾ ಗ್ರಂಥವನ್ನು ಸಮಾಜದಿಂದ ಬಿಡುಗಡೆ ಮಾಡಲಾಗುವುದು ಎಂದು ಚಂದ್ರಧರ್ ಮಾಹಿತಿ ನೀಡಿದರು.

ಮುಖಂಡರಾದ ಬಿ.ವಿ.ಮಹೇಶ್ವರ, ಎಚ್.ಎಂ.ನಾಗರಾಜ, ಗುರುಬಸಪ್ಪ ಬೂಸ್ನೂರು, ಎಚ್.ಕೆ.ಹೇಮಣ್ಣ, ಕೆ.ಜಗದೀಶಪ್ಪ ಬಾವಿಕಟ್ಟೆ, ಜ್ಞಾನೇಶ್ವರ ಜವಳಿ, ಎಚ್.ಸಿ.ತೀರ್ಥರಾಜ ಹೋಲೂರು ಇತರರು ಇದ್ದರು.

- - - -28ಕೆಡಿವಿಜಿ2:

ಶಿವಸಿಂಪಿ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಧರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ