ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ ಕನ್ನಡಾಭಿಮಾನ ಹೆಚ್ಚಿಸಿ

KannadaprabhaNewsNetwork |  
Published : Nov 30, 2024, 12:45 AM IST
ಪುಸ್ತಕ ವಿತರಣೆ ಮತ್ತು ಗ್ರಾಪಂ ಅಧ್ಯಕ್ಷರ ಆಯ್ಕೆ. | Kannada Prabha

ಸಾರಾಂಶ

ಪರಶುರಾಂಪುರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತಹ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಕವಿಗಳು ಮತ್ತು ಅವರು ರಚಿಸಿದ ಪುಸ್ತಕಗಳನ್ನು ಓದಲು ನೀಡುವುದರಿಂದ ಅವರಲ್ಲಿ ಕನ್ನಡದ ಕುರಿತು ಅಭಿಮಾನ ಮೂಡುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ವಿ. ನಾಗರಾಜ ತಿಳಿಸಿದರು.

ಕನ್ನಡಪ್ರಭ ವಾರ್ತೆ ಪರಶುರಾಂಪುರ

ಪರಶುರಾಂಪುರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತಹ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಕವಿಗಳು ಮತ್ತು ಅವರು ರಚಿಸಿದ ಪುಸ್ತಕಗಳನ್ನು ಓದಲು ನೀಡುವುದರಿಂದ ಅವರಲ್ಲಿ ಕನ್ನಡದ ಕುರಿತು ಅಭಿಮಾನ ಮೂಡುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ವಿ. ನಾಗರಾಜ ತಿಳಿಸಿದರು.ಸಿದ್ದೇಶ್ವರನ ದುರ್ಗ ಗ್ರಾಮದ ಸರ್ಕಾರಿ ಫ್ರೌಢಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ವೇದಾವತಿ ಅಭಿರುಚಿ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆ, ಸ್ಥಳೀಯ ಆಡಳಿತ ಶಾಲಾ ಸಮಿತಿ ಹಾಗೂ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ಆಯೋಜಿದ್ದ ಪುರಸೃತ ಕವಿಗಳ ಭಾವ ಚಿತ್ರಗಳು ಮತ್ತು ಕನ್ನಡ ಸಾಹಿತ್ಯ ಚರಿತ್ರೆಯ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಹಸ್ತಾಂತರಿಸಿ ಅವರು ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಸಹಕಾರದೊಂದಿಗೆ ಪರಶುರಾಮಪುರದ ವೇದಾವತಿ ಅಭಿರುಚಿ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಯವರು ಪ್ರತಿ ವರ್ಷದ ವೇಳೆ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪುಸ್ತಕ ವಿತರಿಸಿ ಕನ್ನಡಾಭಿಮಾನ ಮೆರೆದಿದ್ದಾರೆ ಎಂದರು.ಪರಶುರಾಂಪುರ ವೇದಾವತಿ ಅಭಿರುಚಿ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಓ. ಚಿತ್ತಯ್ಯ ಪ್ರಾಸ್ತಾವಿಕ ಮಾತನಾಡಿ ಹೋಬಳಿ ವ್ಯಾಪ್ತಿಯ ಸಾಹಿತ್ಯಾಸಕ್ತರು ಹಾಗೂ ಶಾಸಕರು ಕಳೆದ ವರ್ಷಗಳಿಂದ ಕೆಲ ಪ್ರಸಾರಂಗಗಳ ಮೂಲಕ ಕನ್ನಡ ಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಲು ಸಹಕರಿಸಿದ್ದಾರೆ ಎಂದು ತಿಳಿಸಿದರು.

ಸಂಚಾಲಕರಾದ ಜೆ. ತಿಮ್ಮಯ್ಯ ಮಾತನಾಡಿ, ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಸಾಂಸ್ಕೃತಿಕ ಇಲಾಖೆ ಮೂಲಕ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡು ಅನೇಕ ಪುಸ್ತಕ ಭಂಡಾರವನ್ನು ಹಾಗೂ ಕವಿಗಳ ಭಾವ ಚಿತ್ರಗಳನ್ನು ನೀಡಿ ರಿಯಾಯಿತಿ ದರದಲ್ಲಿ ನೀಡುತ್ತಿದ್ದಾರೆ ಎಂದರು.ಎ. ನಾಗರಾಜ್ ಅವರಿಂದ ಹಲವಾರು ಕಥೆ ಸಣ್ಣಕಥೆ ಪುಸ್ತಕಗಳನ್ನು ಮುಖ್ಯೋಪಾಧ್ಯಾಯೆ ಮಂಜುಳಾರಿಗೆ ನೀಡಿ ಶಾಲಾ ಗ್ರಂಥಾಲಯಕ್ಕೆ ನೀಡಿದರು.

ಶಿಕ್ಷಕರಾದ ಬಿ ಮೂರ್ತಿ, ತಾರಾಕುಮಾರಿ, ಶಿವಕೀರ್ತಿ, ರಮೇಶ್ , ಮಧುಸೂಧನ, ಗ್ರಾ.ಪಂ ಕಾರ್ಯದರ್ಶಿ ಪಲ್ಲವಿ ವೇದಾವತಿ ಅಭಿರುಚಿ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಓ. ಚಿತ್ತಯ್ಯ ಹಾಗೂ ಪತ್ರಕರ್ತರಾದ ರಾಜು, ಜೆ. ತಿಮ್ಮಯ್ಯ, ಈ ನಾಗರಾಜು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!