ಸಜಿಪಮೂಡ ಗ್ರಾಮದಲ್ಲಿ ಜಲಾನಯನ ಯಾತ್ರೆ ಉದ್ಘಾಟನೆ

KannadaprabhaNewsNetwork |  
Published : Feb 28, 2025, 12:46 AM IST
ಸಜಿಪಮೂಡ ಗ್ರಾಮದಲ್ಲಿ ಹಮ್ಮಿಕೊಂಡ ಜಲಾನಯನ ಯಾತ್ರೆ | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಡಿಪಾರ್ಟ್ಮೆಂಟ್‌ ಆಫ್‌ ಲ್ಯಾಂಡ್‌ ರಿಸೋರ್ಸಸ್‌ ಗ್ರಾಮೀಣ ಮಂತ್ರಾಲಯ ಕೃಷಿ ಇಲಾಖೆಯ ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಜಲಾನಯನ ಯಾತ್ರೆ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ನಾವು ಆದ್ಯತೆ ನೀಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬದುಕು ಭಯಾನಕವಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಭೂಸಂಪನ್ಮೂಲ ಇಲಾಖೆಯ ತಜ್ಞ ಡಾ.ಎನ್ ಕೆ.ರಾಜೇಶ್ ಕುಮಾರ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಡಿಪಾರ್ಟ್ಮೆಂಟ್‌ ಆಫ್‌ ಲ್ಯಾಂಡ್‌ ರಿಸೋರ್ಸಸ್‌ ಗ್ರಾಮೀಣ ಮಂತ್ರಾಲಯ ಕೃಷಿ ಇಲಾಖೆಯ ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಹಮ್ಮಿಕೊಂಡ ಜಲಾನಯನ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೀರಿನ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದ ಅವರು, ಮಣ್ಣಿನ ಸವಕಳಿ ತಪ್ಪಿಸಲು ಬದುಗಳನ್ನು ನಿರ್ಮಿಸಬೇಕೆಂದರು. ಜಲಾನಯನ ಯಾತ್ರೆ ಮಣ್ಣು ಮತ್ತು ನೀರಿನ ಸಂರಕ್ಷಣೆ, ನೀರು ಕೊಯ್ಲು ಮತ್ತು ಮರುಪೂರಣ ಚಟುವಟಿಕೆಗಳಂತಹ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವ ಗುರಿ ಹೊಂದಿದೆ ಎಂದರು.

7750 ಜನಸಂಖ್ಯೆ ಮತ್ತು ಶೇ.98 ರಷ್ಟು ಸಾಕ್ಷರತೆ ಹೊಂದಿರುವ ಸಜಿಪಮೂಡ ಎಂಬ ಸಣ್ಣ ಗ್ರಾಮಕ್ಕೆ ಈ ಉಪಕ್ರಮವು ವಿಶೇಷ ಮಹತ್ವದ್ದಾಗಿದೆ. ಜಲಾನಯನ ಯಶಸ್ವಿಗೆ ಸಮುದಾಯ, ಸ್ಥಳೀಯ ಅಧಿಕಾರಿಗಳು ಮತ್ತು ನೀರಿನ ಸಂರಕ್ಷಣೆಯಲ್ಲಿ ತಜ್ಞರ ಸಾಮೂಹಿಕ ಪ್ರಯತ್ನಗಳು ಕಾರಣ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀರಿನ ಸುರಕ್ಷಿತ ಭವಿಷ್ಯ ಖಚಿತಪಡಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಸಜಿಪಮೂಡ ಗ್ರಾ,ಪಂ,ಅಧ್ಯಕ್ಷೆ ಶೋಭಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಜೋ ಪ್ರದೀಪ್ ಡಿಸೋಜ , ದ.ಕ ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೋವಿಂದೇ ಗೌಡ, ಮಂಗಳೂರು ಉಪವಿಭಾಗದ ಉಪಕೃಷಿ ನಿರ್ದೇಶಕ ಕುಮುದ, ಸಹಾಯಕ ಕೃಷಿನಿರ್ದೇಶಕ ವೀಣಾ ಕೆ ಆರ್, ಕೃಷಿ ಅಧಿಕಾ ನಂದನ್ ಶೆಣೈ ಪಿ , ಸಜಿಪಮೂನ್ನೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಅನಿತಾ, , ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪದ್ಮರಾಜ ಬಲ್ಳಾಳ್ ಮಾವಂತೂರು, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಪದ್ಮನಾಭ ರೈ ಗೋಳ್ತಮಜಲು, ಸಜಿಪಮೂಡ ಗ್ರಾ,ಪಂ.ಉಪಾಧ್ಯಕ್ಷ ಫೌಝೀಯ, ಗ್ರಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ ಬೆಳ್ಚಡ, ಯೋಗೀಶ್ ಬೆಳ್ಚಡ, ಹಮೀದ್, ಸಿದ್ಧೀಕ್ , ಅಬ್ದುಲ್ ಕರೀಂ, ಸೋಮನಾಥ,ಸೀತಾರಾಮ, ಶ್ರೀಮತಿ ವಿಜಯ, ಅರುಂದತಿ, ಮಹಾದೇವಿ, ಪ್ರಮೀಳಾ ಸದಸ್ಯರು ಸ.ಮೂಡ ಗ್ರಾಮ ಪಂಚಾಯತ್, ಪಂಚಾಯತ್ ಕಾರ್ಯದರ್ಶಿ ಸುಜಾತಾ, ರವಿರಾಜ್‌, ಭವಾನಿ, ರೇಷ್ಮಾ, ಲಾವಣ್ಯ, ಎಂಬಿಕೆ ಅಕ್ಷತಾ, ಎಲ್ ಸಿ ಆರ್ ಪಿ ಹರಿಣಾಕ್ಷಿ ಕೃಷಿ ಇಲಾಖೆ ಬಂಟ್ವಾಳ ಮೀನಾಕ್ಷಿ, ಆತ್ಮಯೋಜನೆಯ ಬಿಟಿಎಂ ದೀಕ್ಷಾ, ಆತ್ಮಯೋಜನೆಯ ಎಟಿಯಂ ಹಣಮಂತ ಕಾಳಗಿ, ವಿರೂಪಾಕ್ಷಿ ಹಡಪದ, ತ್ರಿನೇತ್ರಾ, ದಿವ್ಯ, ಯಶೋದಾ, ಸಂದೀಪ್ ಜಲಾನಯನ ಸಹಾಯಕರಾದ ಪ್ರವೀಣ್ ಈಶ್ವರನಾಯ್ಕ್, ವೀಣಾ ಡಿಸೋಜ ವಿನೀತ್, ರ‍್ಷಿತ್, ಉದಯ್, ಸಾತ್ವಿಕ್, ಸುಭಾಷ್ ನಗರದ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ರಮೇಶ್ ಮತ್ತಿತರರು ಇದ್ದರು.

ಸನ್ಮಾನ; ಜಲಾನಯನ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಅನುಷ್ಠಾನಗೊಳಿಸಲು ಸಹಕರಿಸಿದ ಪ್ರಭಾಕರ ಶೆಟ್ಟಿ,ಕೊಳಕೆ , ಪದ್ಮನಾಭ ಕುಂದರ್ ಕಂದೂರು, ಗ್ರಾ.ಪಂ.ಅಧ್ಯಕ್ಷೆ ಶೋಭಾ ಶೆಟ್ಟಿ,ಉಪಾಧ್ಯಕ್ಷೆ ಫೌಝೀಯ, ಪಂಚಾಯತಿ ಸಿಬ್ಬಂದಿ ಲಕ್ಷ್ಮೀಶ, ಕೃಷಿಸಖಿ ವಿನೋದ, ಕೃಷಿಕರಾದ ಪಾರ್ವತಿ, ಆನಂದ ಪೂಜಾರಿ, ಪುರುಷೋತ್ತಮ ಪೂಜಾರಿ, ಜಲಾನಯನ ಸಹಾಯಕರಾದ ವಿನೀತ್ ಜಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಯಾ ಕುಮಾರಿ ಅವರಿಗೆ ಜಲಾನಯನ ಮಾರ್ಗದರ್ಶಕ ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ವೀಣಾ ಕೆ ಆರ್ ಸ್ವಾಗತಿಸಿದರು. ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೋವಿಂದೇ ಗೌಡ ಪ್ರಾಸ್ತಾವಿಕ ಮಾತನಾಡಿದರು. ಕೃಷಿ ಅಧಿಕಾರಿ ನಂದನ್ ಶೆಣೈ ಪಿ. ನಿರ್ವಹಿಸಿದರು.ಆತ್ಮ ಯೋಜನೆ ಎಟಿಯಂ ಹನಮಂತ ಕಾಳಗಿ ಭೂಮಿ ಮತ್ತು ಜಲ ಸಂರಕ್ಷಣೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಗಮನಸೆಳೆದ ಜಾಥಾ- ಜಾಗೃತಿ ಯಕ್ಷಗಾನ:

ಕಾರ್ಯಕ್ರಮಕ್ಕೆ ಮುನ್ನ ಮಾರ್ನಬೈಲು ದ್ವಾರದ ಬಳಿಯಿಂದ ಸಜಿಪಮೂಡ ಪಂಚಾಯಿತಿ ವರೆಗೆ ಜಲಾನಯನ ಜಾಥಾ ಕಾರ‍್ಯಕ್ರಮ ಆಯೋಜಿಸಲಾಯಿತು.

ಯಾತ್ರೆ ಕಾರ‍್ಯಕ್ರಮದ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಮಣ್ಣು ಮತ್ತು ನೀರು ಸಂರಕ್ಷಣೆ ವಿಷಯದಲ್ಲಿ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಪಂಚಾಯಿತಿ ಮುಂಭಾಗದಲ್ಲಿ ಸಪೋಟ ಗಿಡ ನಾಟಿ ಮಾಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು. ಜಲಾನಯನ ಯೋಜನೆಯಡಿ ಕಂದೂರಿನ ಪದ್ಮನಾಭ ಕುಂದರ್ ಜಮೀನಿನಲ್ಲಿ ರಚಿಸಲಾದ ಕಿಂಡಿಅಣೆಕಟ್ಟು ಕಾಮಗಾರಿಗೆ ಬಾಗಿನ ಅರ್ಪಿಸಲಾಯಿತು. ಬಳಿಕ ಸಂಸಾರ ಜೋಡುಮಾರ್ಗ ದ ನಿರ್ದೇಶಕ ಮೌನೇಶ ವಿಶ್ವಕರ್ಮ ಸಂಯೋಜನೆಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆಯ ಕುರಿತಾದ ಜಲ ಉಜ್ಜಲ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಅಪಘಾತ ಸೈಕಲ್‌ ಸವಾರ ಸಾವು
ವಿದ್ಯುತ್‌ ತೊಂದರೆ ಸರಿಪಡಿಸದಿದ್ದರೇ ಅಹೋರಾತ್ರಿ ಧರಣಿ