ಕಳೆದ 10 ವರ್ಷದ ನಂತರ 2025ರಲ್ಲಿ ನಗರದ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಾತ್ರಾ ಕಮಿಟಿಯ ಅಧ್ಯಕ್ಷ ಹಾಗೂ ಶಾಸಕ ರಮೇಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ ನಗರದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಹಾಗೂ ಸಾಂಸ್ಕೃತಿಕ ಭವನದ ನಿರ್ಮಾಣಕ್ಕೆ ಎಲ್ಲ ಸಹಾಯ ಸಹಕಾರ ನೀಡಲಾಗುವುದು ಎಂದು ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ

ನಗರದ ಸವದತ್ತಿ-ಸಂಕೇಶ್ವರ ಹೆದ್ದಾರಿಯ ಮೇಲಿನ ಛತ್ರಪತಿ ಶಿವಾಜಿ ಮಹಾರಾಜ ಚೌಕ್‌ದಲ್ಲಿ ಕ್ಷತ್ರಿಯ ಮರಾಠಾ ಸಮಾಜದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜ ಸಾಂಸ್ಕೃತಿಕ ಭವನದ ನಾಮಫಲಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾತಾರಾ ಜಿಲ್ಲೆಯ ಬಿಜೆಪಿ ಮಹಿಳಾ ಅಧ್ಯಕ್ಷೆ ವನಿತಾ ಪವಾರ ಹಾಗೂ ಸಚಿನ ಪವಾರ ಮತ್ತು ನಾಗರ ಸಭೆ ಸಾದಸ್ಯರಾದ ಪ್ರಕಾಶ ಮುರಾರಿ ಹಾಗೂ ನಿರ್ಮಲಾ ಜ್ಯೋತಿಬಾ ಸುಬಂಜಿ ಮತ್ತು ಮಾಜಿ ನಗರಸಭೆ ಸದಸ್ಯರಾದ ಪರಶುರಾಮ ಭಗತ, ಮಹಾಲಕ್ಷ್ಮೀ ಬ್ಯಾಂಕ್‌ನ ಉಪಾಧ್ಯಕ್ಷ ಜಿತು ಮಾಂಗಳೇಕರ, ಸಚಿನ ಜಾಧವ, ರಾಮಚಂದ್ರ ಕಾಕಡೆ, ಬಸವರಾಜ ಪಡತಾರೆ, ಪಾಂಡುರಂಗ ಕದಂ, ಮಯೂರ ನಾಯಿಕ, ರಾಜು ಪವಾರ, ವಿಜಯ ಜಾಧವ, ಶಿವಾಜಿರಾವ್ ಗಾಯಕ್ವಾಡ ಪ್ರಮುಖರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.