ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ರಾಜಕಾರಣ ಸುಲಭವಿಲ್ಲ

KannadaprabhaNewsNetwork |  
Published : Jul 29, 2025, 01:00 AM IST
55 | Kannada Prabha

ಸಾರಾಂಶ

ತಾಲೂಕಿನ ಎಲ್ಲ ಜಾತಿ ಜನಾಂಗ ರಾಜಕಾರಣದಲ್ಲಿ ಜೈ ಎನ್ನುತ್ತಾರೆ, ನಾನು ಎಂಟು ಬಾರಿ ಚುನಾವಣೆಗೆ ನಿಂತು ಮೂರು ಬಾರಿ ಗೆದ್ದಿದ್ದೇನೆ

ಕನ್ನಡಪ್ರಭ ವಾರ್ತೆ ಭೇರ್ಯ ಬೇರೆ ಕ್ಷೇತ್ರದ ರೀತಿಯಂತೆ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ರಾಜಕಾರಣ ಸುಲಭವಿಲ್ಲ, ಎಲ್ಲವೂ ಜಾತಿ ವ್ಯವಸ್ಥೆ ಮೇಲೆ ನಿಂತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು. ಸಾಲಿಗ್ರಾಮ ತಾಲೂಕಿನ ಮಿರ್ಲೆ ಹೋಬಳಿಯ ಹನುಮನಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಾಲಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ತಾಲೂಕಿನ ಎಲ್ಲ ಜಾತಿ ಜನಾಂಗ ರಾಜಕಾರಣದಲ್ಲಿ ಜೈ ಎನ್ನುತ್ತಾರೆ, ನಾನು ಎಂಟು ಬಾರಿ ಚುನಾವಣೆಗೆ ನಿಂತು ಮೂರು ಬಾರಿ ಗೆದ್ದಿದ್ದೇನೆ. ಆದರೂ ಸಹ ಕ್ಷೇತ್ರ ಸುಭೀಕ್ಷವಾಗಿದೆ, ಇಲ್ಲಿ ರಾಜಕೀಯ ವ್ಯತ್ಯಾಸ ಇದ್ದರೂ ಸಾಮಾಜಿಕವಾಗಿ ಚೆನ್ನಾಗಿದೆ ಎಂದರು.ರಾಜಕಾರಣದಲ್ಲಿ ಅಕ್ಕಪಕ್ಕದ ಜನರೇ ಟೀಕೆ ಮಾಡುವವರೇ ಜಾಸ್ತಿಯಾಗಿದ್ದಾರೆ., ನಾನು ಮಾಡಿರುವ ಜನಹಿತ ಕಾರ್ಯಕ್ರಮಗಳು ಇಂದಿಗೂ ಪ್ರಸಿದ್ಧವಾಗಿವೆ. ಅಕ್ಷರ ಆರೋಗ್ಯ ಅನ್ನ ಕೊಡ ಬೇಕಿರುವುದು ಸರ್ಕಾರದ ಜವಾಬ್ದಾರಿ ಆಗಿದೆ. ಅದು ಸರಿಯಾಗಿ ಆಗುತ್ತಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ ಅವರು, ಸಮಾಜವನ್ನು ತಿದ್ದುವ ಕೆಲಸ ನಾವೆಲ್ಲರೂ ಸೇರಿ ಮಾಡ ಬೇಕಿದೆ ಎಂದರು.ಸಮಾಜ ಬಹಳ ಹದಗೆಟ್ಟಿದೆ, ಪ್ರಸ್ತುತ ಪತ್ನಿಯರೇ ಗಂಡನ ಕೊಲೆ ಮಾಡಿಸುವ ಕಾಲ ಬಂದಿದೆ, ನಾವು ಇನ್ನೂ ಎಲ್ಲಿದ್ದಿವಿ. ಮನುಷ್ಯ ದೇವಸ್ಥಾನದಲ್ಲಿ ಮಾತ್ರ ನೆಮ್ಮದಿಯನ್ನು ಪಡೆಯುತ್ತಾನೆ ಎಂದರು.ನಾ ಕಂಡಂಗೆ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಹತ್ತಕ್ಕೂ ಹೆಚ್ಚು ಮಠಗಳಿವೆ, ಎಲ್ಲವೂ ದಾಸೋಹ ಮಾಡುತ್ತಿವೆ. ಬಸವಣ್ಣ ದಲಿತರ ಮನೆಗಳಿಗೆ ಹೋಗಿ ಕುಳಿತು ಸಹಪಂಕ್ತಿ ಊಟ ಮಾಡುತ್ತಾರೆ, ಶತ ಶತಮಾನಗಳಿಂದ ಬಸವಣ್ಣನವರ ತತ್ವಾದರ್ಶ ಬೆಳಸಿಕೊಳ್ಳಬೇಕು ಎಂದು ಬಸವಣ್ಣನವರ ಸಮಾಜಮುಖಿ ಕಾರ್ಯಗಳನ್ನು ಹಾಡಿ ಹೊಗಳಿದರು.ಇಂದು ಕೆಲವು ಧರ್ಮ ಪೀಠಗಳು ಕಲುಷಿತ ಆಗಿವೆ, ನಾನು ಮಂತ್ರಿ ಇದ್ದಾಗ ನಾನು ಬಿಸಿಯೂಟ ಯೋಜನೆ ಜಾರಿಗೆ ತಂದಾಗ ನನ್ನನ್ನು ಬಲಿಪಶು ಮಾಡಲು ಹುನ್ನಾರ ನಡೆಸಿದ ಕೆಲವು ಮಠಗಳು ದೊಡ್ಡಮಟ್ಟದಲ್ಲಿ ವಿರೋಧ ಮಾಡಿದರು ಎಂದು ಸ್ಮರಿಸಿದರು.ಶಾಸಕ ಡಿ. ರವಿಶಂಕರ್ ಮಾತನಾಡಿ, ಬಸವಣ್ಣನವರ ವಚನಗಳು, ತತ್ವಗಳನ್ನು ನಾವೆಲ್ಲರೂ ಪಾಲಿಸ ಬೇಕಿದೆ, ಹಳ್ಳಿಗಳಲ್ಲಿ ಧಾರ್ಮಿಕ ಭಾವನೆಮರೆಯಾಗುತ್ತಿದೆ ಕಾರಣ ಇಂದಿನಮಕ್ಕಳಿಗೆ ಮೊಬೈಲ್ ಕೊಟ್ಟು ನಮ್ಮ ನಾಡಿನ ಸಂಸ್ಕೃತಿ ಪರಂಪರೆ ಧಾರ್ಮಿಕ ಭಾವನೆಗಳನ್ನು ಹಾಳು ಮಾಡುತ್ತಿದ್ದೇವೆ ಎಂದರು.ಪ್ರಸ್ತುತ ಮಕ್ಕಳಿಗೆ ಗ್ರಾಮೀಣ ಅಟಗಳುಮಾಯಾವಾಗಿವೆ. ಬುಗರಿ, ಗಿಲ್ಲಿದಾಂಡ್, ಗೋಲಿ ಆಟಗಳು ಕಾಣಿಯಾಗಿವೆ, ಈಗ ಮಕ್ಕಳನ್ನು ಮನೆಯಿಂದಾಚೆಗೆ ಕಳುಹಿಸಲ್ಲ, ಇದರಿಂದಾಗಿ ನಮ್ಮ ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನ ಇವತ್ತಿನ ಯುವ ಪೀಳಿಗೆಗೆ ತಿಳುಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾನಿಧ್ಯ ವಹಿಸಿದ್ದ ಅರಕೆರೆ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮಿಜಿ ಹಾಗೂ ಲಾಲನಹಳ್ಳಿ ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿ ತಾಯಿ ನೆರದಿದ್ದ ಭಕ್ತ ಸಮೂಹಕ್ಕೆ ಆರ್ಶೀವಚನ ನೀಡಿದರು.ಜಿಪಂ ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ, ಪುರಸಭೆ ಸದಸ್ಯ ಕೆ.ಪಿ. ಪ್ರಭುಶಂಕರ್, ತಾಲೂಕು ಶರಣು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ‌.ಪಿ. ರಮೇಶ್, ಗ್ರಾಪಂ ಸದಸ್ಯ ಮಂಜುನಾಥ್, ಅಖಿಲ ಕರ್ನಾಟಕ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕೆಂಪರಾಜ್, ಮುಖಂಡ ಪಿ. ರವಿಕುಮಾರ್, ದೇವಸ್ಥಾನ ಸಮಿತಿಯ ಹನುಮನಹಳ್ಳಿ ನಿವೃತ್ತ ಶಿಕ್ಷಕರಾದ ಮಹದೇವಪ್ಪ, ಲೋಕೇಶ್, ಕೊಡಿಯಾಲ ನಾಗಭೂಷಣ್, ಪಿಡಿಓ ಗೋವಿಂದರಾಜು, ಹನುಮನಹಳ್ಳಿ, ಕೊಡಿಯಾಲ, ನರಚನಹಳ್ಳಿ ಗ್ರಾಮದದಿಂದ ಭಕ್ತರು, ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ