ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ

KannadaprabhaNewsNetwork |  
Published : Nov 13, 2026, 04:00 AM IST
000 | Kannada Prabha

ಸಾರಾಂಶ

ಮೆಟ್ರೋ ರೈಲಿನ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಗುಲಾಬಿ (ಪಿಂಕ್) ಮಾರ್ಗ ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೆಟ್ರೋ ರೈಲಿನ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಗುಲಾಬಿ (ಪಿಂಕ್) ಮಾರ್ಗ ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ. ಮೆಟ್ರೋದ ಎತ್ತರಿಸಿದ ಮಾರ್ಗ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ.ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಸೇರಿ ಒಟ್ಟು 6 ನಿಲ್ದಾಣಗಳನ್ನು ಒಳಗೊಂಡಿದೆ. ಗುಲಾಬಿ ಮಾರ್ಗದ ಈ ಎತ್ತರಿಸಿದ ವಿಭಾಗ ಸಾರ್ವಜನಿಕ ಸೇವೆಗೆ ಮುಕ್ತಗೊಂಡ ನಂತರ, ನಮ್ಮ ಮೆಟ್ರೋದ ಪ್ರಸ್ತುತ ಕಾರ್ಯಾಚರಣೆ 96.10 ಕಿ.ಮೀ. ಜೊತೆಗೆ ಈ ಮಾರ್ಗದ ಉದ್ದದಿಂದ 103.60 ಕಿ.ಮೀ.ಗೆ ವಿಸ್ತರಣೆಯಾದಂತಾಗಿದೆ.

ಈ ಮಾರ್ಗದ ಉದ್ಘಾಟನೆಯಿಂದಾಗಿ ಬನ್ನೇರಘಟ್ಟ ರಸ್ತೆಯಲ್ಲಿ ಸಂಚಾರ ಸಮಸ್ಯೆಯಿಂದ ದಿನ ನಿತ್ಯ ಪರದಾಡುತ್ತಿದ್ದ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗುತ್ತದೆ. ಈ ಮಾರ್ಗದಲ್ಲಿ ಪ್ರಮುಖ ಆಸ್ಪತ್ರೆಗಳಾದ ಜಯದೇವ ಹೃದ್ರೋಗ ಆಸ್ಪತ್ರೆ, ನಾರಾಯಣ ನೇತ್ರಾಲಯಗಳಿಗೆ ಅತಿ ಕಡಿಮೆ ಅವಧಿಯಲ್ಲಿ ತಲುಪಬಹುದಾಗಿದೆ.

ಪಿಂಕ್ ಮಾರ್ಗದಲ್ಲಿರುವ 6 ನಿಲ್ದಾಣಗಳುಕಾಳೇನಅಗ್ರಹಾರ

ಹುಳಿಮಾವು

ಐಐಎಂಬಿ

ಜೆ.ಪಿ.ನಗರ 4ನೇ ಹಂತ

ಜಯದೇವ ಆಸ್ಪತ್ರೆ, ತಾವರೆಕೆರೆ (ಎತ್ತರಿಸಿದ ಮಾರ್ಗ)ಜಯದೇವ ನಿಲ್ದಾಣದಲ್ಲಿ ಇಂಟರ್ ಚೇಂಜ್ ಗೆ ಅವಕಾಶ

ಪಿಂಕ್ ಲೈನ್‌ನ ಈ ಆರಂಭಿಕ ಭಾಗ ಬನ್ನೇರುಘಟ್ಟ ರಸ್ತೆಯ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ. ವಿಶೇಷವಾಗಿ ಜಯದೇವ ಮೆಟ್ರೋ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಸಿಟಿ ಮಾರ್ಗಗಳಿಗೆ ಇಂಟರ್ಚೇಂಜ್ (ಸಂಪರ್ಕ) ಸೌಲಭ್ಯವಿರುವುದರಿಂದ, ಈ ಭಾಗದ ನಾಗರಿಕರು ಸಿಲ್ಕ್ ಬೋರ್ಡ್, ಹೆಚ್ಎಸ್ಆರ್ ಲೇಔಟ್, ಜಯನಗರ, ಮಜೆಸ್ಟಿಕ್ ಹಾಗೂ ವೈಟ್‌ ಫೀಲ್ಡ್‌ ಸೇರಿದಂತೆ ನಗರದ ಯಾವುದೇ ಭಾಗಕ್ಕೆ ಸುಲಭವಾಗಿ ಪ್ರಯಾಣಿಸಲು ಅವಕಾಶ ಸಿಗಲಿದೆ.

8 ನಿಮಿಷಕ್ಕೆ ಒಂದು ರೈಲು

ಆರಂಭಿಕ ಹಂತದಲ್ಲಿ ಈ ಮಾರ್ಗದಲ್ಲಿ 5 ಮೀಸಲು ರೈಲುಗಳು ಕಾರ್ಯನಿರ್ವಹಿಸಲಿದ್ದು, ಪ್ರತಿ 8 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ಸಿಗ್ನಲಿಂಗ್ ವ್ಯವಸ್ಥೆಯ ಸ್ಥಿರತೆಯನ್ನು ಗಮನಿಸಿ ಈ ಕಾಲಾವಧಿಯನ್ನು ಮತ್ತಷ್ಟು ಕಡಿಮೆ ಮಾಡುವ ಯೋಜನೆಯಿದೆ. ಈ 7.5 ಕಿ.ಮೀ ಮಾರ್ಗ ಸೇರ್ಪಡೆಯೊಂದಿಗೆ ಬೆಂಗಳೂರಿನ ಒಟ್ಟು ಮೆಟ್ರೋ ಜಾಲವು 103 ಕಿ.ಮೀ. ತಲುಪಲಿದ್ದು, ನಗರವು 100 ಕಿ.ಮೀ. ಗಡಿ ದಾಟಿದ ಐತಿಹಾಸಿಕ ಸಾಧನೆ

ಮೂರು ಹಂತ ಮೆಟ್ರೋ

ನಿರ್‍ಮಾಣಕ್ಕೆ ₹77,891 ಕೋಟಿ

ಮೆಟ್ರೋ-1 ನೇ ಹಂತದಿಂದ 3ನೇ ಹಂತದವರೆಗಿನ ಒಟ್ಟು 77,891 ಕೋಟಿ ರು. ವೆಚ್ಚದಲ್ಲಿ ಕರ್ನಾಟಕ ಸರ್ಕಾರವೇ 65,291 ಕೋಟಿ ರು. (ಶೇ. 84) ಭರಿಸುತ್ತಿದ್ದು, ಕೇಂದ್ರ ಸರ್ಕಾರದ ಪಾಲು ಕೇವಲ 12,600 ಕೋಟಿ ರು. (ಶೇ. 16) ಆಗಿದೆ. ಮೆಟ್ರೋ ಮೊದಲ ಹಂತದಲ್ಲಿ ಶೇ. 80 ರಷ್ಟಿದ್ದ ಕೇಂದ್ರದ ಬಂಡವಾಳ ಹೂಡಿಕೆ, ಎರಡನೇ ಹಂತದಲ್ಲಿ ಕ್ರಮೇಣ ಶೇ. 16ಕ್ಕೆ ಮತ್ತು ಪ್ರಸ್ತುತ ಶೇ. 14 ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌
ಬಾಡಿಗೆ ವಿಚಾರಕ್ಕೆ ವಕೀಲನನ್ನು ಗುಂಡಿಟ್ಟುಕೊಲೆ ಮಾಡಿದ್ದ ಬಿಹಾರದ ಆರೋಪಿ ಸೆರೆ