ಕರ್ನಾಟಕ ಸಂಘದ ನವಿಕರಣಗೊಂಡ ಕಟ್ಟಡದ ಉದ್ಘಾಟನೆ

KannadaprabhaNewsNetwork |  
Published : Apr 24, 2026, 01:00 AM IST
ಕರ್ನಾಟಕ ಸಂಘದ ನವಿಕರಣಗೊಂಡ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಈ ಸ್ಪರ್ದಾತ್ಮಕ ಯುಗದಲ್ಲಿ ಕಾರ್ಖಾನೆಯನ್ನು ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಅವೆಲ್ಲವುಗಳನ್ನು ಮೆಟ್ಟಿ ನಿಂತು ಹಂತಹಂತವಾಗಿ ಕಾಗದ ಕಾರ್ಖಾನೆ ದಿನದಿಂದ ದಿನಕ್ಕೆ ಪ್ರಗತಿಯಲ್ಲಿ ಸಾಗುತ್ತಿದೆ.

ಕಾರ್ಖಾನೆಯ ಪ್ರಗತಿಗೆ ದಾಂಡೇಲಿ ನಗರದ ಜನತೆಯ ಕೊಡುಗೆ ಅಪಾರ

ಕನ್ನಡಪ್ರಭ ವಾರ್ತೆ ದಾಂಡೇಲಿ

ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಪ್ರಗತಿಗೆ ದಾಂಡೇಲಿ ನಗರದ ಜನತೆಯ ಕೊಡುಗೆ ಅಪಾರ ಎಂದು ಕಾರ್ಖಾನೆಯ ಮಾಲಕರಾದ ಶ್ರೀಕುಮಾರ ಬಂಗೂರ ಹೇಳಿದರು.ಕಾರ್ಖಾನೆಯ ಸಿಎಸ್‌ಆರ್ ಯೋಜನೆಯಡಿ ಅಂದಾಜು ₹೫೩ ಲಕ್ಷ ವೆಚ್ಚದಲ್ಲಿ ನವಿಕರಣಗೊಂಡ ಕರ್ನಾಟಕ ಸಂಘದ ಕಟ್ಟದ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಮಾತನಾಡಿದರು.

ಈ ಸ್ಪರ್ದಾತ್ಮಕ ಯುಗದಲ್ಲಿ ಕಾರ್ಖಾನೆಯನ್ನು ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಅವೆಲ್ಲವುಗಳನ್ನು ಮೆಟ್ಟಿ ನಿಂತು ಹಂತಹಂತವಾಗಿ ಕಾಗದ ಕಾರ್ಖಾನೆ ದಿನದಿಂದ ದಿನಕ್ಕೆ ಪ್ರಗತಿಯಲ್ಲಿ ಸಾಗುತ್ತಿದೆ. ಕಾಗದ ಕಾರ್ಖಾನೆಗೆ ಎಲ್ಲವನ್ನು ಕೊಟ್ಟ ದಾಂಡೇಲಿಯ ಪ್ರತಿಗೆ ಕಾಗದ ಕಾರ್ಖಾನೆಯು ತನ್ನದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಕಾರ್ಖಾನೆಯು ತನ್ನ ಸಿಎಸ್‌ಆರ್ ಯೋಜನೆಯಡಿ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ಕ್ರಿಡಾ ಕ್ಷೇತ್ರಗಳ ಅಭ್ಯೂದಯಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಕಾರ್ಖಾನೆಯು ಸಮಾಜಮುಖಿ ಕಾರ್ಯಗಳಿಗೆ ಆದ್ಯತೆಯನ್ನು ನೀಡುತ್ತಿದೆ. ಈ ಭಾಗದ ಅಭಿವೃದ್ದಿಗೆ ಕಾಗದ ಕಾರ್ಖಾನೆ ಸದಾ ಬದ್ಧವಾಗಿದೆ ಎಂದರು.ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಕಾರ್ಖಾನೆಯ ಮಾಲೀಕ ಶ್ರೀಕುಮಾರ ಬಂಗೂರ ಅವರ ಮಾರ್ಗದರ್ಶನದಂತೆ ಕಾರ್ಖಾನೆಯ ಪ್ರಗತಿಯ ಜೊತೆ ಈ ಭಾಗದ ಪ್ರಗತಿಗೂ ಅತ್ಯಂತ ಬದ್ದತೆಯಿಂದ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು.

ಕರ್ನಾಟಕ ಸಂಘದ ಪ್ರಭಾರಿ ಅಧ್ಯಕ್ಷ ಮೋಹನ ಹಲವಾಯಿ ಮಾತನಾಡಿದರು.

ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ನಾಯರ, ದಾಂಡೇಲಿ ರೋಟರಿ ಕ್ಲಬ್‌ನ ಅಧ್ಯಕ್ಷ ಅಶಿತೋಷಕುಮಾರ ರೈ, ಲೈನ್ಸ್ ಪ್ರಮುಖರಾದ ಡಾ. ಶೇಖರ ಹಂಚಿನಾಳಮಠ, ಮಹೇಶ್ವರಿ ಪ್ರಗತಿ ಮಂಡಳದ ಎಸ್.ಪಿ. ಮಹೇಶ್ವರಿ ಕಾಗದ ಕಾರ್ಖಾನೆಯ ಕೊಡುಗೆಗಳ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಶಶಿದೇವೆ ಬಂಗೂರ, ವೀರೇಂದ್ರ ಬಂಗೂರ, ಆರ್ಯಣ ಬಂಗೂರ, ಶ್ರೀವಸ್ತ ಬಂಗೂರ ಉಪಸ್ಥಿತರಿದ್ದರು.

ಶ್ರೀಕುಮಾರ ಬಂಗೂರ ದಂಪತಿಗಳನ್ನು ನಗರದ ರೋಟರಿ ಕ್ಲಬ್ ಮತ್ತು ಶಿಕ್ಷಣ ಸಂಸ್ಥೆ, ದಾಂಡೇಲಿ ಶಿಕ್ಷಣ ಸಂಸ್ಥೆ, ಲಾಯನ್ಸ್ ಕ್ಲಬ್ ಮತ್ತು ಲಾಯನ್ಸ್ ಶಿಕ್ಷಣ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶ್ರೀ ವೀರಶೈವ ಸೇವಾ ಸಮಿತಿ, ಮಹೇಶ್ವರ ಪ್ರಗತಿ ಮಂಡಳ, ಸೆಂಟ್ ಅಂತೋನಿ ಕ್ಯಾತೊಲಿಕ ಚರ್ಚ, ದಾಂಡೇಲಪ್ಪ ಟ್ಯಾಕ್ಸಿ ಅಸೋಸಿಯೆಶೆನ್, ಶ್ರೀ ರಾಘವೇಂದ್ರ ಸ್ವಾಮಿ ಮಠ, ಅಟೋ ಚಾಲಕರ ಕ್ಷೇಮಾಭಿವೃದ್ದಿ ಸಂಘ ಇವರಿಂದ ಗೌರವಿಸಲಾಯಿತು.

ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ ಸ್ವಾಗತಿಸಿದರು. ಸಂಘದ ಆರ್.ಪಿ. ನಾಯ್ಕ ವಂದಿಸಿದರು. ಸಂದೇಶ ಜೈನ ನಿರೂಪಿಸಿದರು. ಕಾರ್ಖಾನೆಯ ಸಾರ್ವಜನಿಕ ಸಂಪರ್ಕವಿಭಾಗದ ಉಪಪ್ರಧಾನ ವಯವಸ್ಥಾಪಕ ರಾಘವೇಂದ್ರ ಜೆ.ಆರ್. ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಮತ್ತು ವಿಭಾಗದ ಸಿಬ್ಬಂದಿ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿಜಯನಗರ ಜಿಲ್ಲೆ 10 ಸ್ಥಾನಕ್ಕೆ ಏರಿಕೆ
ಹರಪನಹಳ್ಳಿ ತಾಲೂಕಿಗೆ ಶೇ.96.33 ಫಲಿತಾಂಶ; ಜಿಲ್ಲೆಗೆ ಮೂರನೇ ಸ್ಥಾನ