ನ.೧೮ರಂದು ಗೋಪುರಗಳ ಕಳಸಗಲ ಪ್ರತಿಷ್ಠಾಪನೆ, ತ್ರಿಬಂಧ. ರುದ್ರಾಭಿಷೇಕ, ಕುಂಭಾಭಿಷೇಕ, ದುರ್ಗಾಹೋಮ, ಪ್ರಧಾನ ದೇವತೆಗಳ ಹೋಮ, ಕಲಾಹೋಮ, ಜಯಾದಿಹೋಮ, ಪ್ರಾಯಶ್ಚಿತ್ತ ಹೋಮ, ಪೂರ್ಣಾಹುತಿ, ಕದಳಿ ಛೇಚನ, ಕೂಷ್ಮಾಂಡ ಬಲಿ, ದಿಗ್ಬಲಿ ಹಾಗೂ ಮಹಾ ಮಂಗಳಾರತಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮಳವಳ್ಳಿ ತಾಲೂಕು ಗುಂಡಾಪುರ ಗ್ರಾಮದ ಶ್ರೀಬೆಟ್ಟದರಸಮ್ಮನವರ ನೂತನ ಸ್ವಾಗತ ಕಮಾನಿಗೆ ಕಳಸ ಪ್ರತಿಷ್ಠಾಪನೆ ಹಾಗೂ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮ ನ.೧೭ಮತ್ತು ೧೮ ರಂದು ಅದ್ಧೂರಿಯಾಗಿ ನೆರವೇರಲಿದೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
ಗುಂಡಾಪುರ ಗ್ರಾಮದ ಶಿಲ್ಪ ಮತ್ತು ಕೆ.ಸುರೇಂದ್ರ ಅವರು ಮಹಾದ್ವಾರವನ್ನು ೫೦ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಹಾದ್ವಾರವನ್ನು ಲೋಕಾರ್ಪಣೆಗೊಳಿಸುವರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನ.೧೭ರಂದು ಮಧ್ಯಾಹ್ನ ಗಂಟೆಗೆ ಸುತ್ತೂರು ಮಹಾಸಂಸ್ಥಾನ ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾಮಠದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿ ದಿವ್ಯಸಾನ್ನಿಧ್ಯ ವಹಿಸುವರು. ಕನಕಪುರ ದೇಗುಲ ಮಠದ ಶ್ರೀಚನ್ನಬಸವ ಮಹಾಸ್ವಾಮಿ, ತೋಟಹಳ್ಳಿ ಮಠದ ಶ್ರೀಬಸವಪ್ರಭು ಸ್ವಾಮಿ, ಡಿ.ಹಲಸಹಳ್ಳಿ ಗವಿಮಠದ ಷಡಕ್ಷರಿ ಸ್ವಾಮಿ, ರಾಗಿಬೊಮ್ಮನಹಳ್ಳಿ ಮಠದ ಶ್ರೀಬಸವಪ್ರಭುಲಿಂಗಸ್ವಾಮಿ, ಪೂರಿಗಾಲಿ ಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಮಾಜಿ ಸಚಿವ ಬಿ.ಸೋಮಶೇಖರ್, ಬೆಂಗಳೂರು ಪಶ್ಚಿಮವಲಯ ಡಿಸಿಪಿ ಯತೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಜಿಪಂ ಸಿಇಒ ಕೆ.ಆರ್.ನಂದಿನಿ, ನಿಕಟಪೂರ್ವ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಭಾಗವಹಿಸುವರು ಎಂದರು.
ನ.೧೮ರಂದು ಬೆಳಗ್ಗೆ ೧೧ ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀಚನ್ನಬಸವಸ್ವಾಮೀಜಿ ವಹಿಸುವರು. ಪೂರಿಗಾಲಿಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕುಣಿಗಲ್ ಅರೆಶಂಕರಮಠದ ಶ್ರೀಸಿದ್ದರಾಮ ಚೈತನ್ಯ ಸ್ವಾಮಿ ಉಪಸ್ಥಿತರಿರುವರು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ವಹಿಸುವರು ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಬೆಂಗಳೂರು ಬಿಬಿಎಂಪಿ ಸದಸ್ಯ ಕಾರ್ಯದರ್ಶಿ ಮಂಜೇಶ್, ಹಲಗೂರು ಸಿಪಿಐ ಶ್ರೀಧರ್ ಭಾಗವಹಿಸುವರು ಎಂದರು.
೫೦ ಲಕ್ಷ ರು. ವೆಚ್ಚದಲ್ಲಿ ಮಹಾದ್ವಾರ ನಿರ್ಮಾಣ: ಕೆ.ಸುರೇಂದ್ರ
ಗುಂಡಾಪುರ ಶ್ರೀಬೆಟ್ಟದರಸಮ್ಮನವರ ಮಹಾದ್ವಾರವನ್ನು ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಮಹಾದ್ವಾರದ ನಿರ್ಮಾತೃ ಕೆ.ಸುರೇಂದ್ರ ಹೇಳಿದರು.
ತಮಿಳುನಾಡಿನ ಕೃಷ್ಣಗಿರಿಯ ರಾಮಮೂರ್ತಿ ಸ್ವಾಗತ ಕಮಾನು ಮತ್ತು ಗೋಪುರವನ್ನು ನಿರ್ಮಿಸಿದ್ದು, ಭೂತನ ಹೊಸೂರಿನ ಆರ್.ಮುನಿಸ್ವಾಮಿ ಕಳಸದ ಶಿಲ್ಪಿಗಳಾಗಿದ್ದಾರೆ. ನ.೧೭ರಂದು ಮುಂಜಾನೆಯಿಂದಲೇ ದೇವರಿಗೆ ವಿವಿಧ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ಜರುಗಲಿವೆ. ಗಣಪತಿ ಪೂಜೆ, ಗಂಗಾಪೂಜೆ, ಆಗ್ರೋದಕ ಪೂಜೆ, ಪೂರ್ಣಕುಂಭಗಳ ಪೂಜೆ, ಗೋಪೂಜೆ, ಶ್ರೀ ಹೆಬ್ಬೆಟ್ಟದ ಬಸವೇಶ್ವರಸಾಮಿ ಗದ್ದುಗೆ ಪೂಜೆ, ನೂತನ ಗೋಪುರ ಕಳಸಗಳ ಪೂಜೆ, ಪಂಜಿನ ಸೇವೆ ನೆರವೇರಿಸಲಾಗುವುದು. ಬಳಿಕ ವೀರಗಾಸೆ ಕುಣಿತ, ಮಂಗಳವಾದ್ಯದೊಂದಿಗೆ ಕರಗದ ಬೀದಿಯ ಮೂಲಕ ಯಾಗ ಶಾಲೆಯ ಕಡೆ ಭವ್ಯ ಮೆರವಣಿಗೆ ನಡೆಯಲಿದೆ. ಅಂದು ಮಧ್ಯಾಹ್ನ ೧೨ ಗಂಟೆಗೆ ಪ್ರಸಾದ ವಿನಿಯೋಗ ಸಂಜೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ನುಡಿದರು.
ನ.೧೮ರಂದು ಗೋಪುರಗಳ ಕಳಸಗಲ ಪ್ರತಿಷ್ಠಾಪನೆ, ತ್ರಿಬಂಧ. ರುದ್ರಾಭಿಷೇಕ, ಕುಂಭಾಭಿಷೇಕ, ದುರ್ಗಾಹೋಮ, ಪ್ರಧಾನ ದೇವತೆಗಳ ಹೋಮ, ಕಲಾಹೋಮ, ಜಯಾದಿಹೋಮ, ಪ್ರಾಯಶ್ಚಿತ್ತ ಹೋಮ, ಪೂರ್ಣಾಹುತಿ, ಕದಳಿ ಛೇಚನ, ಕೂಷ್ಮಾಂಡ ಬಲಿ, ದಿಗ್ಬಲಿ ಹಾಗೂ ಮಹಾ ಮಂಗಳಾರತಿ ನಡೆಯಲಿದೆ.
ಎರಡು ದಿನಗಳ ಕಾಲ ನಡೆಯಲಿರುವ ಶ್ರೀಬೆಟ್ಟದರಸಮ್ಮನ ಮಹಾದ್ವಾರ ಉದ್ಘಾಟನೆ ಧಾರ್ಮಿಕ ಪುಣ್ಯ ಕಾರ್ಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.