ಹೊನ್ನಾಳಿ: ಪಟ್ಟಣದ ಕೆಪಿಟಿಸಿಎಲ್, ಬೆಸ್ಕಾಂ ಹಾಗೂ ಶ್ರೀ ವರಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ ಉದ್ಘಾಟನೆ ಮತ್ತು ಶ್ರೀ ವಿನಾಯಕ ಮೂರ್ತಿ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಮಾರ್ಚ್ 25ರಂದು ಬೆಳಗ್ಗೆ ನಡೆಯಲಿವೆ. ಅನಂತರ ಧರ್ಮಸಭೆ, ಸಾಮೂಹಿಕ ಅನ್ನ ಸಂತರ್ಪಣೆ ಸಂಪನ್ನಗೊಳ್ಳಲಿದೆ.
25ರಂದು ಬೆಳಗ್ಗೆ 4.30 ರಿಂದ 5.30ರ ಬ್ರಾಹ್ಮಿ ಮೂಹೂರ್ತದಲ್ಲಿ ದೇವರ ಪ್ರಾಣ ಪ್ರತಿಷ್ಠಾನೆ, ನೇತ್ರೋನ್ಮಿಲನ, ಕದಳಿ ಚೇದನ, ಮಹಾಬಲಿ, ದೇನುದರ್ಶನ, ಬಿಂಬ ದರ್ಶನ, ಗಣಪತಿ ಮೂಲಮಂತ್ರ ಹೋಮ, ಪ್ರತಿಷ್ಠಾ ಹೋಮ, ಜಯಾದಿ ಹೋಮ, ಪ್ರಾಯಶ್ಛಿತ ಹೋಮ, ಪೂರ್ಣಾಹುತಿ, ಮಂಗಳಾರತಿ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಅರ್ಚನೆ ಮತ್ತು ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಜರುಗಲಿವೆ.
ಮಾ.26ರಿಂದ ಮೇ 15ರವರೆಗೆ ಪ್ರತಿ ದಿನ ಮಂಡಲ ಪೂಜೆ ಪ್ರಯುಕ್ತ ವಿಶೇಷ ಪೂಜೆಗಳು ನಡೆಯಲಿವೆ. ಭಕ್ತರು ತಮ್ಮ ಭಕ್ತಿಯ ಕಾಣಿಕೆ ಸಲ್ಲಿಸಿ, ರಶೀದಿ ಪಡೆಯಬೇಕು. ಮಂಗಳವಾರ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಯಪ್ಪ ಹಾಗೂ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.- - -
ವರಸಿದ್ಧಿ ವಿನಾಯಕ ದೇವಸ್ಥಾನ ಉದ್ಘಾಟನೆ, ವಿನಾಯಕ ವಿಗ್ರಹ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಮಂಗಳವಾರ ನಡೆದ ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ಬೆಸ್ಕಾಂ ಅಧಿಕಾರಿ ಜಯಣ್ಣ ದಂಪತಿ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿ ಪೂಜೆ ಸಲ್ಲಿಸಿದರು.