ಕುರುಗೋಡು: ಸಮೀಪದ ಸಿರಿಗೇರಿ ಗ್ರಾಮದ ಅಧಿದೇವತೆ ಸುಂಕ್ಲಮ್ಮದೇವಿ ಮತ್ತು ಮಲೆಮ್ಮದೇವಿ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಮತ್ತು ಕಳಸಾರೋಹಣ ಬುಧವಾರ ಜರುಗಿತು.
ಕಳಸಾರೋಹಣದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಎಚ್.ಎಂ. ಕೊಟ್ರೇಶ್ ಸ್ವಾಮಿ, ತಂಡದ ಸದಸ್ಯರು ಕಳಸಾರೋಹಣದ ಪೌರೋಹಿತ್ಯ ನೆರವೇರಿಸಿದರು.ಕಳಸಾರೋಹಣದ ಅಂಗವಾಗಿ ಗ್ರಾಮದ ಮನೆಗಳಲ್ಲಿ ಹೆಣ್ಣುಮಕ್ಕಳು ಉಡಿತುಂಬಿಸಿಕೊಂಡು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪುನೀತರಾದರು.
ಗೋಪುರ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಭಾಗವಹಿಸಿದ್ದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.ಗೋಪುರ ಉದ್ಘಾಟನೆ ನೆರವೇರಿಸಿದ ಶಾಸಕ ಬಿ.ಎಂ. ನಾಗರಾಜ ಮಾತನಾಡಿ, ಗ್ರಾಮದ ದೇವಸ್ಥಾನಗಳಲ್ಲಿ ಪ್ರತಿ ವರ್ಷ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರನ್ನು ಸನ್ಮಾರ್ಗದಲ್ಲಿ ನಡೆಸಲು ಸಹಕರಿಯಾಗುತ್ತದೆ ಎಂದರು. ಗ್ರಾಮದಲ್ಲಿ ಸದಾಕಾಲ ಧಾರ್ಮಿಕ ಕಾರ್ಯಕ್ರಮಗಳು ಜರುಗುವುದರಿಂದ ಮಳೆ-ಬೆಳೆ ಉತ್ತಮವಾಗಿ ಜರುತ್ತಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮಿದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಡ್ರೈವರ್ ಹುಲುಗಪ್ಪ, ಮುಖಂಡರಾದ ಸಿ.ಎಂ. ನಾಗರಾಜಸ್ವಾಮಿ, ಕೆ.ಎಂ. ಮಲ್ಲಯ್ಯ ಸ್ವಾಮಿ, ಬಿ.ನಾಗೇಂದ್ರ, ವಿ.ರೇಣುಕಪ್ಪ, ಎಸ್.ಎಂ. ಅಡಿವೆಯ್ಯಸ್ವಾಮಿ, ಗರ್ಜಿಲಿಂಗಪ್ಪ, ಎಸ್.ಎಂ. ನಾಗರಾಜಸ್ವಾಮಿ, ವೆಂಕಟೇಶ, ಶ್ರೀನಿವಾಸ, ರಾಘವೇಂದ್ರ, ಕೆ.ಬಸವರಾಜ, ಅನ್ವರ್ ಬಾಷಾ, ಸೋಮೇಶ್, ನಾಗರಾಜ, ಗೋಡೆ ಚನ್ನಪ್ಪ ಮತ್ತು ಅಲಿಬಾಷಾ ಇದ್ದರು.